ಸಮಾನತೆಯನ್ನು ಬಯಸುವ ಮನಸ್ಸುಗಳೆಲ್ಲ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಎಲ್ಲ ವರ್ಗದ ಜನರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಗದಗ ಜಿಲ್ಲೆಯ ದಲಿತ ಮುಖಂಡ ಡಾ. ರಾಮಚಂದ್ರ ಹಂಸನೂರ ಹೇಳಿದರು.
ಗದಗ ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ನಡೆದಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶತ ಶತಮಾನಗಳಿಂದಲೂ ತುಳಿತಕ್ಕೊಳಗಾದ ಸಮುದಾಯ ಇನ್ನೂ ಅಸ್ಪ್ರಷ್ಯತೆಯ ನೋವನ್ನು ಅನುಭವಿಸುತ್ತಿರುವದು ನೋವಿನ ಸಂಗತಿ. ಇನ್ನಾದರೂ ಸಮಾಜದಲ್ಲಿ ಜಾತೀಯತೆಯ ಪಿಡುಗು ತೊಲಗಬೇಕು” ಎಂದು ಹೇಳಿದರು.
ಸಮಾಜ ಕಲ್ಯಾಣಾಧಿಕಾರಿಗ ವಿಜಯಲಕ್ಷ್ಮೀ ಇಂಗಳಳ್ಳಿ ಮಾತನಾಡಿ, “ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಷ್ಯತೆ ಇನ್ನೂ ಜೀವಂತವಿರುವದು ತುಂಬಾ ನೋವಿನ ಸಂಗತಿ. ಇಂತಹ ಪ್ರಕರಣಗಳನ್ನು ಹೋಗಲಾಡಿಸಲು ಇಲಾಖೆ ಬದ್ದವಾಗಿದೆ. ಶೋಷಿತರ ಪರವಾಗಿ ನಮ್ಮ ಇಲಾಖೆ ಹಾಗೂ ನಮ್ಮ ಮೇಲಾಧಿಕಾರಿಗಳು ಸದಾಕಾಲ ಶ್ರಮಿಸುತ್ತೇವೆ” ಎಂದು ಹೇಳಿದರು.
ಜೇನುಗೂಡು ಕಲಾ ತಂಡ ಹಾಗೂ ಪ್ರಥ್ವಿಪ್ರಿಯಾ ಸಾರ್ವತ್ರಿಕ ಸೇವಾ ಸಂಸ್ಥೆಯವರು ಅಸ್ಪ್ರಷ್ಯತೆಯ ಕುರಿತು ಕ್ರಾಂತಿಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಿ ಜನರಲ್ಲಿ ಜಾಗ್ರತಿ ಮೂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಶಿಯವರು ಅಸ್ಪ್ರಷ್ಯತೆಯ ಆಚರಣೆಯಿಂದಾಗುವ ಮಾನದಂಡಗಳ ಕುರಿತು ಕಾನೂನು ತಿಳುವಳಿಕೆ ನೀಡಿದರು.ಈ ಸಂದರ್ಭದಲ್ಲಿ ಗದಗ ಜಿಲ್ಲಾ ಎಸ್ಸಿ ಎಸ್ಟಿ ಧೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಸುರೇಶ ವಾಯ್.ಚಲವಾದಿ.ಡಿ.ವೈ ಎಸ್ಪಿ ಗದಗ.ತಹಶಿಲ್ದಾರ್ ಗದಗ.ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಶ್ರೀಮತಿ ಮಂಜುಳಾ ಅವರು.ತಾಲೂಕಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯ್ತಿ ಆಢಳಿತ ಮಂಡಳಿ ಹಾಗೂ ಗ್ರಾಮದ ಸಮಸ್ತ. ಗುರು ಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು.




