ಮಹಾರಾಷ್ಟ್ರ ರಾಜ್ಯದ ರೈತರ ಕಷ್ಟವನ್ನು ಅರಿಯಲು, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅತಿವೃಷ್ಟಿಯಾದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟ ಅರಿತು ₹31,628 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ರಾಜ್ಯದ ಸಿಎಂ ಸಿದ್ದರಾಮಯ್ಯನವರು ಅತಿವೃಷ್ಟಿಯಾದರೂ ಒಮ್ಮೆಯೂ ಅತಿವೃಷ್ಟಿ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಅತಿವೃಷ್ಟಿಯಿಂದ ಬೆಳೆ ಹಾಳಾದ ಪ್ರತಿ ಹೆಕ್ಟೇರ್‌ಗೆ ₹47 ಸಾವಿರ ನಗದು ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿನ ಸಿಎಂ ಮಹಾರಾಷ್ಟ್ರ ರೈತರ ಪಾಲಿಗೆ ಬೆಳಕಾಗಿದ್ದಾರೆ, ಇತರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾದರಿಯಾಗಿದ್ದಾರೆ. ರೈತರ ಪರವಾಗಿ ದೇವೇಂದ್ರ ಫಡ್ನವಿಸ್ ಜೀಯವರಿಗೆ ಅಭಿನಂದನೆಗಳು ಸಲ್ಲಿಸುವುದಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼನಮ್ಮ ರಾಜ್ಯದ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಎರಡೆರಡು ಬಾರಿ ಹೋಗಿ ಮುಖ್ಯಮಂತ್ರಿಯವರಿಗೆ ಭೇಟಿ ನೀಡಿ ಅತಿವೃಷ್ಟಿಯ ಬಗ್ಗೆ ಗಮನಹರಿಸಿ ಎಂದು ಬೇಡಿಕೊಂಡರು ಬಂದಿರಲಿಲ್ಲ, ಬಿಜೆಪಿ ಪಕ್ಷದಿಂದ ತಂಡ ರಚನೆಯಾದ ವಿಷಯ ತಿಳಿದ ಮೇಲೆ ಆದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ, ಕಾಲಹರಣ ಮಾಡುತ್ತಾ ಕುಳಿತಿದ್ದರು, ನಾಮಕೆ ವಾಸ್ತೆ ಒಂದು ದಿನ ಹೇಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಅತಿ ಕಡಿಮೆ ಪರಿಹಾರ ಘೋಷಿಸದ್ದಾರೆʼ ಎಂದರು.
ʼಇಲ್ಲಿಯವರೆಗೆ ಘೋಷಿಸಿರುವ ಪರಿಹಾರ ಬಿಡುಗಡೆ ಮಾಡದೇ ನಮ್ಮ ರೈತರ ಬಾಳಿಗೆ ಕತ್ತಲಾಗಿದ್ದಾರೆ. ರಾಜ್ಯದ ರೈತರ ಬಗ್ಗೆ
ಇಷ್ಟೊಂದು ಅಸಡ್ಡೆ, ಆಲಸ್ಯ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಮತ್ತು ಅವರ ಎಲ್ಲಾ ಉಸ್ತುವಾರಿ ಸಚಿವರುಗಳಿಗೆ ಅನ್ನದಾತರ ಶಾಪ್ ತಟ್ಟದೇ ಇರದುʼ ಎಂದು ಖೂಬಾ ಬೇಸರ ವ್ಯಕ್ತಪಡಿಸಿದ್ದಾರೆ.





