ಚಿಕ್ಕಸಿಂದಗಿ ಬೈಪಾಸ್‌ನಿಂದ ಶಹಾಪುರ ಪೆಟ್ರೋಲ್ ಬಂಕ್‌ವರೆಗೆ ರಸ್ತೆ ಹದೆಗೆಟ್ಟಿದ್ದರಿಂದ ಅದನ್ನು 4.69 ಕೋಟಿ ವೆಚ್ಚದಲ್ಲಿ ಸುಧಾರಣೆಗೊಳಿಸಲಾಗುವುಸು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಆಲಮೇಲೆ ಮುಖ್ಯರಸ್ತೆಯ 18.39 ಕಿಮೀ 19.50 ಕಿಮೀವರೆಗೆ ರಸ್ತೆ ವಿಸ್ತರಣೆ ಹಾಗೂ ಬಿದಿದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಪಟ್ಟಣವನ್ನು ಸೌಂದರ್ಯೀಕರಣ ಪಟ್ಟಣವನ್ನಾಗಿಸುವುದು ನನ್ನ ಸಂಕಲ್ಪವಾಗಿದೆ. ಈ ದಿಷೆಯಲ್ಲಿ ಎರಡೂವರೆ ವರ್ಷದ ಅವಧಿಯಲ್ಲಿ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಕಾರ್ಯ ಪ್ರವೃತ್ತಾನಾಗಿರುವೆ” ಎಂದರು.
“1994ರಂದು ಪಟ್ಟಣದಲ್ಲಿ ಅಂದಿನ ಶಾಸಕರಾಗಿದ್ದ ದಿ. ಎಂ ಸಿ ಮನಗೂಳಿ ಅವರು ಮಹಾತ್ಮ ವೃತ್ತ ಸ್ಥಾಪಿಸಿ ಪುತ್ಥಳಿ ಅನಾವರಣಗೊಳಿಸಿದ್ದರು. ಈಗ ಈ ವೃತ್ತವನ್ನು ಸ್ಥಳಾಂತರಿಸಿ ಹತ್ತಿರದಲ್ಲಿಯೇ ಜ.26ರಂದು ನೂತನ ವೃತ್ತ ಪುತ್ಥಳಿ ಅನಾವರಣಗೊಳಿಸಲಾಗುವುದು. ಈಗಿದ್ದ ವೃತ್ತದಲ್ಲಿ ರಾಷ್ಟ್ರೀಯ ಲಾಂಛನವುಳ್ಳ ಸ್ಥಂಬದತ್ತ ನಿರ್ಮಿಣ ಮಾಡಲಾಗುವುದು” ಎಂದು ತಿಳಿಸಿದರು.
“ಏಳು ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಟ್ರ್ಯಾಫಿಕ್ ಸಿಗ್ನಲ್ ಅಳವಡಿಸಲು ಈಗಾಗಲೇ 2ಕೋಟಿ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಶಾಸಕರ ಅನುದಾನ 45ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಆ್ಯಂಬುಲೆನ್ಸ್ ಶೀಘ್ರ ಲೋಕಾರ್ಪಣೆಗೊಳ್ಳಲಿದೆ” ಎಂದು ವಿವರಿಸಿದರು.
ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, “ಪಟ್ಟಣದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಈವರೆಗೆ ಆಯಾ ಇಲಾಖೆಯವರು ಪುರಸಭೆ ಕಾರ್ಯಾಲಯಕ್ಕೆ ಹಸ್ತಾಂತರಿಸಿಲ್ಲ. ಕೂಡಲೇ ಹಸ್ತಾಂತರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ 62 ವಸತಿನಿಲಯಗಳ ಅನುಮೋದನೆ ಸ್ವಾಗತಾರ್ಹ: ರಮೇಶ ಕಾಳೆ
ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲಕ್ಷ್ಮಣ ನಿಂಬರಗಿ, ಅವರು ರಾಷ್ಟ್ರೀಯ ಲಾಂಛನದ ಸ್ಥoಬದ ವೃತ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹನುಮಂತ ಗುಣಸಾಗರ, ರಮೇಶ ಹೂಗಾರ, ಎಂ ಎ ಖತಿಬ, ಜಯಶ್ರೀ ಹದನೂರ, ಸುನಂದಾ ಯಂಪುರೆ, ನಾಡಗೌಡ ಪೊಲೀಸ್ ಪಾಟೀಲ, ಗುತ್ತೇದಾರ ಎಂ ಬಿ ಬೀಳಗಿ, ಅರಣಕುಮಾರ ವಡಗೆರಿ, ಪುರಸಭೆ ಮುಖ್ಯಧಿಕಾರಿ ರಾಜಶೇಖರ ಎಸ್ ಇದ್ದರು.





