ತಾಲ್ಲೂಕಿನ ಮಾಡಶಿರವಾರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಶುಕ್ರವಾರ ಮಾಡಶಿರವಾರ ಗ್ರಾಮದ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಯುವ ಮುಖಂಡ ನಿರುಪಾದಿ ಕೆ.ಗೋಮರ್ಸಿ ಮಾತನಾಡಿ, ಮಾಡಶಿರವಾರ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದಾಗಿ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗಿದೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಕಡಿವಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶೋಷಿತ ಸಮುದಾಯಗಳ ಕಲ್ಯಾಣಕ್ಕೆ; ಮುಂಬರುವ ಬಜೆಟ್‌ನಲ್ಲಿ ಆದ್ಯತೆ ನೀಡಲಿ; ಎಸ್ ಡಿಪಿಐ ಆಗ್ರಹ
ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜ ಗೋಡಿಹಾಳ, ಮಹಿಳಾ ಮುಖಂಡರಾದ ವಿರುಪಮ್ಮ, ಇಂದ್ರಮ್ಮ, ಲಕ್ಷ್ಮೀ, ಮುಖಂಡರಾದ ವೀರೇಶ ಮಾಡಶಿರವಾರ, ನಾಗರಾಜ, ಜಗದೀಶ, ವೀರೇಶ, ಶಿವರಾಜ ಇತರರು ಇದ್ದರು.





