ಸಿಂಧನೂರು ಮತ್ತು ಮಸ್ಕಿ ಹೆದ್ದಾರಿಯ ಬಳಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲ್ಲೂಕು ಬೂತಲದಿನ್ನಿ ಗ್ರಾಮದ ಹತ್ತಿರ ನಡೆದಿದೆ.
ಮೃತಪಟ್ಟಿರುವ ಲಿಂಗಸೂಗೂರು ತಾಲ್ಲೂಕು ಹಿರೇನಗನೂರು ಹಾಗೂ ಯದ್ದಲದೊಡ್ಡಿ ಗ್ರಾಮದ ಬೈಕ್ ಸವಾರರು ಎನ್ನಲಾಗಿದೆ. ವಿಷಯ ತಿಳಿದು ಸಂಚಾರಿ ಠಾಣೆಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಹುಸೇನಸಾಬ್, ನರಸಿಂಹಪ್ಪ ಆಯ್ಕೆ
ಈಗಾಗಲೇ ಬ್ರಿಡ್ಜ್ ಕಾಮಗಾರಿ ಪ್ರಾರಂಭವಾಗಿ ಹಲವು ಕಾರಣಗಳಿಂದ ವರ್ಷಗಳೇ ಕಳೆದರೂ ಕೂಡ ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಇನ್ನಷ್ಟು ಬಲಿಯಾಗುವ ಮುಂಚೆ ಜನಪ್ರತಿನಿಧಿಗಳು ಜೀವಹಾನಿಯಾಗುವುದು ತಪ್ಪಿಸಬೇಕಿದೆ. ಈ ದಿಶೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಬೇಕು ಎಂದು ಸಾರ್ವಜನಿಕರು, ಕುಟುಂಬದವರು, ಆಕ್ರೋಶ ವ್ಯಕ್ತಪಡಿಸಿದರು.





