ಎಸ್.ಐ.ಆರ್: ಮೌನವಾಗಿ ಬೆನ್ನಿಗೆ ಇರಿದ ಸರ್ಕಾರ: ಚಿಂತಕ ಶಿವಸುಂದರ್

Date:

ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ಅಂಬೇಡ್ಕರ್ ಭವನದಲ್ಲಿ ಗುರುವಾರ ‘ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ’ ನೇತೃತ್ವದಲ್ಲಿ ‘ಸಂವಿಧಾನದ ಅಳಿವು-ಉಳಿವು ಸಂರಕ್ಷಣೆ’ ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರದಲ್ಲಿ ಮಾತನಾಡಿದ ಸಾಮಾಜಿಕ ಚಿಂತಕ ಹಾಗೂ ಲೇಖಕರಾದ ಶಿವಸುಂದರ್ ಎಸ್.ಐ.ಆರ್ ವಿಚಾರವಾಗಿ ಸರ್ಕಾರ ಮೌನವಾಗಿ ಬೆನ್ನಿಗೆ ಇರಿದಿದೆ ಎಂದು ವ್ಯಾಖ್ಯಾನಿಸಿದರು.

“ದೇಶದಲ್ಲಿನ ಕೇಂದ್ರ, ರಾಜ್ಯ ಸರ್ಕಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಜನ ಸಾಮಾನ್ಯರ ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಸದ್ದಿಲ್ಲದೆ ಎಸ್ಐಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿಯುವ, ಒಂದು ಸಮುದಾಯವನ್ನ ನಿರ್ದಿಷ್ಟವಾಗಿ ಗುರಿಯಾಗಿಸಿ ನಾಗರಿಕತ್ವ ಇರದಂತೆ ಮಾಡುವ ಹುನ್ನಾರ. ನರೇಗಾ ಯೋಜನೆಯನ್ನ ತೆಗೆಯುವ ಕೆಲಸಕ್ಕೆ ಮುಂದಾಗಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ಜೊತೆಗೆ ನಿರಂತರ ದಾಳಿ ನಡೆಸುತ್ತಿದೆ. ಅಲ್ಲದೇ, ಕೆಪಿಎಸ್ ಹೆಸರಿನಲ್ಲಿ ಕನ್ನಡ ಶಾಲೆಗಳನ್ನ ಮುಚ್ಚುವ ಕೆಲಸ ನಡೆಸುತ್ತಿದೆ” ಎಂದು ವಿಷಾಧಿಸಿದರು.

“ಎಸ್.ಐ.ಆರ್(ಸ್ಪೆಷಲ್ ಇಂಟನ್ಸಿವ್ ರಿವಿಷನ್) ಅಕ್ಟೋಬರ್ 27, 2025 ರಂದು ರಾಷ್ಟ್ರವ್ಯಾಪಿ ಜಾರಿಮಾಡಲಾಗಿದೆ. ಬಿಹಾರ ರಾಜ್ಯಗಳಲ್ಲಿ ನಡೆದು, ಎರಡನೇ ಹಂತದಲ್ಲಿ ಛತ್ತೀಶ್ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದ 9 ರಾಜ್ಯಗಳು ಮತ್ತು ಅಂಡಮಾನ್-ನಿಕೋಬಾರ್, ಲಕ್ಷದ್ವೀಪ, ಪುದಚೇರಿ ಸೇರಿದ ಮೂರು ಕೇಂದ್ರಾಡಳಿತ ಪ್ರದೇಶಗಳಲಿ ನಡೆಯಲಿದೆ. ಈ ಪ್ರಕ್ರಿಯೆ ಹಿಂದಿರುವ ಆತಂಕಕಾರಿ ವಿಷಯಗಳ ಮನನ ಮಾಡಲೇಬೇಕು. ಕೇಂದ್ರ ಸರ್ಕಾರ ಎಸ್.ಐ.ಆರ್ ಜಾರಿ ಮಾಡಿರುವ ಉದ್ದೇಶ ಎಲ್ಲಾ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸುವುದು, ಅನರ್ಹರನ್ನು ತೆಗೆಯುವುದು. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಮನೆ ಬಾಗಿಲಿಗೆ ಬರಲಿದ್ದಾರೆ, ಇನ್ನುಮೇರೇಷನ್ (enumeration) ನಮೂನೆ ನೀಡುತ್ತಾರೆ. ಒಂದು ತಿಂಗಳ ಒಳಗಾಗಿ ಅಗತ್ಯ ದಾಖಲೆಯೊಡನೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೆ ಇದ್ದಲ್ಲಿ ಮತದಾರ ಪಟ್ಟಿಯಿಂದ ಕೈಬಿಡಲಾಗುತ್ತದೆ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೆ ಅಗತ್ಯ ದಾಖಲೆಗಳಾಗಿ ಜನನ ಪ್ರಮಾಣಪತ್ರ, ಶಿಕ್ಷಣ ಪ್ರಮಾಣ ಪತ್ರ (ಮೆಟ್ರಿಕ್ ಪಾಸ್), ಪಾಸ್ ಪೋರ್ಟ್, ಆಸ್ತಿಪತ್ರ ಸೇರಿದಂತೆ 11 ದಾಖಲೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ 1987ರ ಜುಲೈ 1ರ ಮೊದಲು ಜನಿಸಿದವರು, ಭಾರತದಲ್ಲಿ ಜನಿಸಿದಕ್ಕೆ ಮೇಲ್ಕಂಡ ದಾಖಲೆಗಳಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಒದಗಿಸಬೇಕು, 1987ರ ಜುಲೈ.1 ರಿಂದ 2004ರ ಡಿಸೆಂಬರ್.2ರ ಒಳಗೆ ಜನಿಸಿದವರು, ತಮ್ಮ ಪೋಷಕರ ಜನ್ಮ ದಿನಾಂಕ, ಜನ್ಮಸ್ಥಳದ ದಾಖಲೆಯನ್ನು ಒದಗಿಸಬೇಕು. ಆದರೇ, ದೇಶದ ಬಹುಸಂಖ್ಯಾತರು ಶೇ.60ರಷ್ಟು ಜನ ದಾಖಲೆ ಹೊಂದಿರುವುದಿಲ್ಲ. ಭಾರತೀಯರಾಗಿ ದಾಖಲೆ ಇಲ್ಲದಿರುವ ಕಾರಣಕ್ಕೆ ಮತದಾನದ ಹಕ್ಕು ಸಿಗುತ್ತೋ, ಇಲ್ಲವೋ ಎನ್ನುವ ಆತಂಕ ಮನೆ ಮಾಡಿದೆ. ಕಾನೂನನ್ನು ಮಾಡುವುದು ಸಂಸತ್ತು. ಸಂವಿಧಾನ ಸಂಸತ್ತು ಹೇಗೆ ನಡೆಯಬೇಕು ಎನ್ನುವುದನ್ನು ಹೇಳಿದರೆ, ಸಂಸತ್ತು ಚುನಾವಣೆ ಹೇಗೆ ನಡೆಸುವುದು, ಕಾನೂನು ರಚಿಸುವ ಕೆಲಸ ಮಾಡುತ್ತೆ. ಚುನಾವಣಾ ಆಯೋಗ ಕೂಡ ಹದ್ದುಮೀರಿ ನಡೆದಾಗ ಕಡಿವಾಣ ಹಾಕುವ ಕೆಲಸ ಸಂಸತ್ತಿನದು”.

ಸಂಸತ್ತಿನಲ್ಲಿ ಚರ್ಚೆ ಆಗಬೇಕು ಎನ್ನುವಾಗ, ಎಸ್.ಐ.ಆರ್ ಚರ್ಚೆ ಮಾಡಲು ಅಸಾಧ್ಯ. ಅದನ್ನ ಹೊರತು ಪಡಿಸಿ. ಚುನಾವಣಾ ಸುಧಾರಣೆ (ಇಲೆಕ್ಟ್ರಾಲ್ ರಿಫಾರ್ಮ್ಸ್) ಭಾಗವಾಗಿ ಪ್ರಶ್ನೆ ಮಾಡಿ ಅದರ ಕುರಿತಾಗಿ ಚರ್ಚೆ ಮಾಡೋಣ ಎಂದು ಬೇರೊಂದು ಮಾರ್ಗ ಅನುಸರಿಸಿದರು. ಚರ್ಚೆ ಆರಂಭವಾಗಿ ವಿರೋಧ ಪಕ್ಷಗಳು ಪ್ರಜಾತಂತ್ರಕ್ಕೆ ಎದುರಾಗಿರುವ ಆತಂಕಗಳ ಬಗ್ಗೆ ಸಮರ್ಥವಾಗಿ ಮಂಡಿಸಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನಿರ್ಭೀತವಾಗಿ ಚುನಾವಣೆಗಳು. ನಡೆಯಬೇಕು. ಮುಕ್ತವಾಗಿ ಚುನಾವಣೆ ನಡೆಯಬೇಕು ಎನ್ನುವುದಾದರೆ ಚುನಾವಣಾ ಆಯೋಗ ಸರ್ಕಾರದಿಂದ ಮುಕ್ತವಾಗಿ ಇರಬೇಕು. ಪೂರ್ವಾಗ್ರಹ ಪೀಡಿತರಾಗಿ ಇರಕೂಡದು.

ಆದರೆ, ಕಳೆದ ಒಂದಷ್ಟು ವರ್ಷಗಳಲಿ ಚುನಾವಣಾ ಆಯೋಗ ಸರ್ಕಾರದ ಮಧ್ಯವರ್ತಿಯಂತೆ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಗಂಭೀರವಾಗಿ ವಿರೋಧ ಪಕ್ಷಗಳು ಪ್ರಶ್ನೆ ಮಾಡುವುದರ ಜೊತೆಗೆ ಎಸ್.ಐ.ಆರ್ ಪ್ರಕ್ರಿಯೆ ಬಗ್ಗೆ ಹಲವು ಪ್ರಶ್ನೆ ಮಾಡಿದ್ದಾರೆ. ವಿರೋಧ ಪಕ್ಷಗಳ ಆಕ್ಷೇಪಣೆಗಳನ್ನ ತಿರಸ್ಕಾರದಿಂದ, ಬೆದರಿಕೆಯಿಂದ ವರ್ತಿಸುವುದು ಪ್ರಜಾತಂತ್ರಕ್ಕೆ ಕಳಂಕ ತರುವಂತದ್ದು. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧೀ ವೋಟ್ ಚೋರಿ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರಿನ ಮಹದೇವಪುರ, ಆಳಂದ, ಹರಿಯಾಣದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಎಸ್.ಐ.ಆರ್ ಬಗ್ಗೆ ಪ್ರಶ್ನೆ ಮಾಡಿದಾಗ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಬೆದರಿಸುವ ದಾಟಿಯಲ್ಲಿ ಮಾತಾಡುತ್ತಾರೆ.

ವಿದೇಶಿ ನುಸುಳುಕೋರರ ಪತ್ತೆ ಮಾಡುವ, ಭಾರತದಲ್ಲಿ ಮತ ಹಾಕದಂತೆ ಮಾಡಲು ಎಸ್.ಐ.ಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಮುಖವಾಗಿ ತೀಕ್ಷವಾಗಿ ಕೆಲಸ ಮಾಡಲಿದೆ ಎನ್ನುವ ಸಬೂಬು. ಜೊತೆಗೆ ಮತಪಟ್ಟಿಯನ್ನ ಹೊಸದಾಗಿ, ಶುದ್ಧವಾಗಿ ಪರಿಷ್ಕರಣೆ ಮಾಡುವುದು ಎಂಬುದಾಗಿದೆ. 18 ವರ್ಷ ಪ್ರಾಯದವರನ್ನ ಸೇರ್ಪಡೆ ಮಾಡುವುದೇ ಮೂಲ ಉದ್ದೇಶ ಎಂದು ಹೇಳಿದ್ದಾರೆ. ಇದೊಂದು ಬಾರಿ ಸುಳ್ಳು. ಬರೀ ಮತಪಟ್ಟಿ ಪರಿಷ್ಕರಣೆ ಆಗಿದ್ದರೆ ವಿರೋಧ ವ್ಯಕ್ತವಾಗುತಿರಲಿಲ್ಲ, ಇದೊಂದು ಒಳಸಂಚು. ಇದರಲ್ಲಿ ಹೇಳಿರುವುದು ವಿದೇಶಿಯರನ್ನ ಹೊರ ಹಾಕಲು ಮಾಡಿರುವುದು ಎನ್ನುವ ಹಸಿ ಹಸಿ ಸುಳ್ಳು.

ಎಸ್.ಐ.ಆರ್ ಪ್ರಕ್ರಿಯೆ ನಿಜಕ್ಕೂ ಮತಪಟ್ಟಿ ಶುದ್ಧ ಪರಿಸ್ಕರಣೆಗೆ ಮಾಡುತ್ತಿರುವುದಾ? ಎನ್ನುವುದೇ ಯಕ್ಷಪ್ರಶ್ನೆ. 2003ರ ನಂತರ 2025ಕ್ಕೆ ಮತಪಟ್ಟಿ ಪರಿಷ್ಕರಣೆ ಮಾಡುವಂತದಲ್ಲ. ಚುನಾವಣಾ ಆಯೋಗಕ್ಕೆ ಕೊಟ್ಟಿರುವ ನಿರ್ದೇಶನದ ಪ್ರಕಾರ, ಮತಪಟ್ಟಿಗಳ ನಿಯಮಗಳ ಪ್ರಕಾರ 1950ರ ರೆಪ್ರೀಸೆಂಟ್ ಪೀಪಲ್ ಆಕ್ಟ್ ಹಾಗೂ ಮತದಾರರ ಪಟ್ಟಿ (ಇಲೆಕ್ಟ್ರಾಲ್ ರೂಲ್ಸ್) ಹೇಗೆ ರಚಿಸಬೇಕು ಎನ್ನುವ ನಿಯಮಗಳ ಆಧಾರದಲ್ಲಿ ನಿರ್ಧಾಷ್ಟವಾಗಿ ಕಾಲ ಕಾಲಕ್ಕೆ ನಾಲ್ಕು ಬಗೆಯ ಪರಿಷ್ಕರಣೆ ಕರ್ತವ್ಯವನ್ನು 1960 ರಿಂದಲೇ ನೀಡಲಾಗಿದೆ.

ಮೊದಲನೆಯದು ಸಮ್ಮರಿ ರಿವಿಷನ್; “ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯ ನಡುವೆ ಆ ಕಾಲಘಟ್ಟದಲ್ಲಿ ಹೊಸದಾಗಿ 18 ವರ್ಷ ತುಂಬಿದವರಿಗೆ ಮತಪಟ್ಟಿಯಲ್ಲಿ ಅವಕಾಶ ಕಲ್ಪಿಸುವ, 18 ವರ್ಷ ಮೇಲ್ಪಟ್ಟವರ ನಿಧನರಾದವರ ಹೆಸರನ್ನು ಮತಪಟ್ಟಿಯಿಂದ ಕೈಬಿಡುವುದು, ಒಂದು ಮತ ಕ್ಷೇತ್ರದಿಂದ ಇನ್ನೊಂದು ಮತ ಕ್ಷೇತ್ರಕ್ಕೆ ಸ್ಥಾಳಾಂತರ ಹೊಂದಿದವರ ಸೇರ್ಪಡೆ ಮಾಡಿ, ಹಿಂದಿನದರಿಂದ ಕೈಬಿಡುವುದು. ಇದಕ್ಕಾಗಿಯೇ ಫಾರಂ ನಂ 6, 7 ಇತ್ಯಾದಿ ಇದೆ. ಇದು ವರ್ಷಪೂರ್ತಿ ನಡೆಯುವ ಪ್ರಕ್ರಿಯೆ. ಮೋದಿ ಸರ್ಕಾರ ಮಾಡುವ ಪ್ರಕ್ರಿಯೆಯಲ್ಲ. ಸಂವಿಧಾನದಲ್ಲಿ ಆರ್ಟಿಕಲ್ 324ರ ಕಾಯ್ದೆ ಪ್ರಕಾರ ಚುನಾವಣಾ ಆಯೋಗ ನೇಮಕ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯನ್ನ ಉಸ್ತುವಾರಿ ನೋಡುವುದು, ನಿಯಂತ್ರಣ ಮಾಡುವುದು ಹಾಗೂ ಮಾರ್ಗದರ್ಶನ (ಸುಪರಿಡೆಂಟ್ಸ್ ಡೈರೆಕ್ಷನ್ ಕಂಟ್ರೋಲ್ ಆಫ್ ಪ್ರೊಸೆಸ್) ಮಾಡುವುದಾಗಿದೆ. ಇದು ಸಾಂವಿಧಾನಿಕ ಕರ್ತವ್ಯ”.

ಎರಡನೆಯದು ಇಂಟನ್ಸಿವ್ ರಿವಿಸಿನ್ ಸಮ್ಮರಿ; “ತೀವ್ರವಾದ ಪರಿಷ್ಕರಣೆಯನ್ನು ಐದು, ಹತ್ತು ವರ್ಷಕ್ಕೊಮ್ಮೆ ಚುನಾವಣಾ ಅಧಿಕಾರಿಗಳೇ ಮನೆ ಬಾಗಿಲಿಗೆ ತೆರಳಿ ಮಾಹಿತಿ ಪಡೆಯುವುದು. ಇರುವಿಕೆ, ಬಂದಿರುವಿಕೆ, ಇಲ್ಲದಿರುವಿಕೆಯ ಅಂದರೆ, ವಯಸ್ಸು, ವಸತಿ, ಬದುಕಿರುವುದರ ಬಗ್ಗೆ ಪರಿಶೀಲನೆ ಮಾಡುವುದು. ಇದರ ಉದ್ದೇಶ ಚುನಾವಣಾ ಆಯೋಗ ಮತದಾನದ ಹಕ್ಕನ್ನ ನೀಡುವುದು ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ”.

ಮೂರನೆಯದು ಸ್ಪೆಷಲ್ ರಿವಿಷನ್ ಸಮ್ಮರಿ; “ನಿರ್ದಿಷ್ಟ ಪ್ರದೇಶದಲ್ಲಿ ಮತದಾರರ ಪಟ್ಟಿಯಲ್ಲಿ ವಿಶೇಷ ಸಮಸ್ಯೆಗಳು ಕಂಡು ಬಂದಿದ್ದರೆ, ಆ ನಿರ್ದಿಷ್ಟ ಕ್ಷೇತ್ರಕ್ಕೆ ತೆರಳಿ ಮನೆ ಮನೆಗೆ ಭೇಟಿ ನೀಡಿ ಪಟ್ಟಿ ತಯಾರಿಸಿ, ಗ್ರಾಮ ಪಂಚಾಯತಿ, ವಾರ್ಡ್ ಸಭೆ ಇತ್ಯಾದಿಗಳಲ್ಲಿ ಘೋಷಣೆ ಮಾಡುವುದು”.

ನಾಲ್ಕನೆಯದು ಪಾರ್ಟ್ಲಿ ಇಂಟನ್ಸಿವ್ ಹಾಗೂ ಪಾರ್ಟ್ಲಿ ಸಮ್ಮರಿ; “ವಿಶೇಷ ಸಂದರ್ಭಗಳಲಿ ಚುನಾವಣಾ ಅಧಿಕಾರಿಗಳೇ ಮನೆ ಬಾಗಿಲಿಗೆ ತೆರಳಿ, ಅರ್ಹರನ್ನ, ಅನರ್ಹರನ್ನ ಗುರುತಿಸಿ. ಅಂದರೆ, ವಯಸ್ಸು, ವಿಳಾಸ, ಬದುಕಿದ್ದಾರ ಇದಿಷ್ಟೇ ಪ್ರಶ್ನೆಗಳ ಮೂಲಕ ಸಾಬೀತು ಮಾಡಿಕೊಳ್ಳುವುದು. ಇದರ ಮೂಲಕ ಮಾತ್ರವೇ ಪ್ರಕ್ರಿಯೆ ಕೈಗೊಳ್ಳಬೇಕು”.

ಇಲ್ಲಿರುವ ಪ್ರಶ್ನೆ ಯಾವುದು ಹೊಸದಲ್ಲ, ಆದರೆ, ಈಗಾಗುತ್ತಿರುವುದು ಸ್ಪೆಷಲ್ ಇಂಟನ್ಸಿವ್ ರಿವಿಷನ್. ಏನಿದು ಸ್ಪೆಷಲ್! ಇದನ್ನ ಮೋದಿ ನೇತೃತ್ವದ ಸರ್ಕಾರ ಹೇಳಲು ಸಿದ್ದವಿಲ್ಲ. ವಿಚಾರ ಮುಚ್ಚಿಟ್ಟು ತಪ್ಪು ಮಾಹಿತಿಯನ್ನ ಸದನದಲ್ಲಿ ಕೊಡುವುದರ ಮೂಲಕ ದೇಶದ ದಿಕ್ಕನ್ನು ತಪ್ಪಿಸಿದ್ದಾರೆ.

“ಮತದಾನದ ಹಕ್ಕು ಎನ್ನುವಾಗ, ಭಾರತೀಯರಿಗೆ ಮತದಾನದ ಮೂಲ ಹಕ್ಕಿರುವುದು. 1950 ರಿಂದಲೂ ಇಲ್ಲಿಯೇ ಹುಟ್ಟಿದವರು, ಪೋಷಕರ ಹುಟ್ಟಿನಿಂದ ಆಧರಿಸಿದ ಮೊದಲ ಪಟ್ಟಿ ತಯಾರಾಗಿದೆ. ವಿದೇಶಿಗರು, ನುಸುಳುಕೋರರ ಗುರುತಿಸುವುದು, ಮತದಾನದ ಹಕ್ಕನ್ನು ನಿರಾಕರಿಸುವುದು ನಿಜಕ್ಕೂ ಚುನಾವಣಾ ಆಯೋಗದ ಕರ್ತವ್ಯವೇ. ಆದರೆ, ಎಲ್ಲಿ ನಿರ್ಧಾಷ್ಟವಾಗಿ ವಿದೇಶಿಗರು (ನುಸುಳುಕೋರರು) ಇದ್ದಾರೆಂದು ದೂರು ಬಂದಿರುತ್ತದೆಯೋ, ಅಲ್ಲಿಗೆ ತೆರಳಿ ಅವರ ನಾಗರಿಕತ್ವ ಪ್ರಶ್ನೆ ಮಾಡಬೇಕು ವಿನಃ, ದೇಶದ 140 ಕೋಟಿ ಜನರ ಅಥವಾ ನೂರು ಕೋಟಿ ಮತದಾರರ ಪ್ರಶ್ನೆ ಮಾಡುವಂತದ್ದು ಅಲ್ಲಾ. ಇಂತಹ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲವೇ ಇಲ್ಲಾ. ಇದನ್ನ ಸದನದಲ್ಲಿ ಮರೆಮಾಚಿದ್ದಾರೆ.

ಈ ಬರಹ ಓದಿದ್ದೀರಾ? ‘ಮಾದಾರಿ ಮಾದಯ್ಯ’: ವರ್ತಮಾನದ ಅವಶ್ಯ ರಂಗ ಪ್ರಯೋಗ

ಈ ಪ್ರಕಾರವಾಗಿ ಕೇಂದ್ರ ಸರ್ಕಾರ ಸುಳ್ಳಿನ ಮೂಲಕ ಭವಿಷ್ಯದಲ್ಲಿ ಅಧಿಕಾರ ಹೊಂದಲು, ಮತದಾನದ ಹಕ್ಕನ್ನು ಕಸಿಯಲು ಸಿದ್ದಮಾಡಿಕೊಂಡ ಅಸ್ತ್ರ. ಸಂವಿಧಾನ ವಿರೋಧಿಯಾಗಿ ಮುಸ್ಲಿಮರನ್ನೇ ಗುರಿಯಾಗಿಸಿದೆ ಎಂದು ನಿವೇದಿಸಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...