ಶಿರಾ | ನ್ಯಾಯಗೆರೆ ಕೆರೆ ಏರಿ ಮೇಲೆ ವಿಜಯ ನಗರ ಅರಸರ ಕಾಲದ ಶಾಸನ ಪತ್ತೆ

Date:

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನ್ಯಾಯಗೆರೆ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯ  ಕಾಲದ ಶಾಸನ ಪತ್ತೆಯಾಗಿದೆ.

ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಮುಖ್ಯಸ್ಥ ಹಾಗೂ ಪ್ರಾಚಾರ್ಯ ಡಾ.ಗುರುರಾಜ್ ಪ್ರಭು.ಕೆ ಇವರ ಮಾರ್ಗದರ್ಶನದಲ್ಲಿ ಮಹಾಲಿಂಗೇಗೌಡ.ಜಿ ಸಂಶೋಧನಾ ವಿದ್ಯಾರ್ಥಿ ಇವರು ಸಂಶೋಧನಾ ಕ್ಷೇತ್ರ ಕಾರ್ಯ ಕೈಗೊಂಡಾಗ ನ್ಯಾಯಗೆರೆ ಕೆರೆ ಏರಿಯ ಪಕ್ಕದಲ್ಲಿ ಶ್ರೀ ದೇವರಾಜಪ್ಪನವರ ಜಮೀನಿನಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಾಸನ ಪತ್ತೆಯಾಗಿದೆ. 

 ಶಾಸನವು 4 ಅಡಿ ಉದ್ದ,  2 ಅಡಿ ಅಗಲದ ಚಪ್ಪಡಿ ಕಲ್ಲಿನಲ್ಲಿ ಕನ್ನಡ ಭಾಷೆ ಲಿಪಿಯಲ್ಲಿರುವ 14-10-1528 ರಲ್ಲಿ ಬರೆಸಿರುವ ಶಿಲಾಶಾನವಾಗಿದೆ. ಇದು ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದು ಇದರಲ್ಲಿ ಶ್ರೀ ತೊಂಟಿಲಗೌಡನು ಮೂಗೆಗೆರೆ (ಮೂಗನಹಳ್ಳಿ) ಪ್ರತಿನಾಮವಾಗಿ ಚೆನ್ನಾಪುರ ಎಂಬ ಸರ್ವಮಾನ್ಯದ ಅಗ್ರಹಾರವಾದ ಇಲ್ಲಿನ ಕೆರೆಯನ್ನು ಕಟ್ಟಿಸಿದ್ದು ಮೂಗನಹಳ್ಳಿಯ ಕಂನಪ್ಪನು ತಮ್ಮ ತಂದೆ ಜುಂಜಗೌಡ ಬೊಮ್ಮಗೌಡರಿಗೆ ಧರ್ಮಾರ್ಥವಾಗಿ ಹಾಕಿಸಿದ ಶಾಸನ. ಇದು ತಿಮ್ಮರಸ ಮತ್ತು ಮಾದರಸ ಹೆಸರಿನಲ್ಲಿ ದಾನ ನಿಡಿದ್ದಾನೆ ಎಂಬ ಉಲ್ಲೇಖವಿದೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...