ಶಿರಸಿ: ಬನವಾಸಿ ಕದಂಬೋತ್ಸವ–2015ರ ವೇಳೆ ಸರಕಾರಿ ಕಾರ್ಯಕ್ರಮದ ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಪ್ರೇರಿತ ಭಾಷಣ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಗುಡ್ನಾಪುರ ಗ್ರಾಮದ ರಾಘು ನಾಯ್ಕ ಅವರನ್ನು ಶಿರಸಿ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಅಲ್ತಾಫ್ ಹುಸೇನ್ ಸಾಬ ಅವರು ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.
2015ರ ಫೆಬ್ರವರಿ 8ರಂದು ರಾತ್ರಿ 8 ಗಂಟೆ ಸಮಯದಲ್ಲಿ ಕದಂಬೋತ್ಸವದ ಸಮಾರೋಪ ಸಮಾರಂಭದಲ್ಲಿ, ಅಂದಿನ ಶಾಸಕ ಶಿವರಾಮ ಹೆಬ್ಬಾರರನ್ನು ಸನ್ಮಾನಿಸಿದ ಹಿನ್ನೆಲೆಯಲ್ಲಿ ಹಾಗೂ ವೇದಿಕೆಗೆ ಅಕ್ರಮ ಪ್ರವೇಶ ಮಾಡಿ ಮೈಕ್ ಕಿತ್ತುಕೊಂಡು ರಾಜಕೀಯ ಪ್ರೇರಿತ ಭಾಷಣ ಮಾಡಿದ ಆರೋಪದಡಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ – ಏಜೆಂಟ್ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುಮಾರು 9 ವರ್ಷಗಳ ವಿಚಾರಣೆಯ ನಂತರ, ಇಂದು ನ್ಯಾಯಾಲಯದಿಂದ ಅಂತಿಮ ತೀರ್ಪು ಹೊರಬಿದ್ದಿದ್ದು, ರಾಘು ನಾಯ್ಕ ಅವರನ್ನು ಸಂಪೂರ್ಣ ನಿರ್ದೋಷಿ ಎಂದು ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರ ಪರವಾಗಿ ಹಿರಿಯ ವಕೀಲರಾದ ರವೀಂದ್ರ ನಾಯ್ಕ ಹಾಗೂ ಉದಯ ನಾಯ್ಕ ವಾದಿಸಿದರು. ಕು. ಸುರೇಖಾ ನಾಯ್ಕ ಮತ್ತು ಕು. ದಿವ್ಯಾ ನಾಯ್ಕ ಸಹಕರಿಸಿದರು.





