ಶಿರಸಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (KDCC) ಆಡಳಿತ ಮಂಡಳಿಗೆ ನಡೆಯುತ್ತಿರುವ ಚುನಾವಣೆಯ ಮತದಾನ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗಿನ ಮತದಾನದ ವಿವರಗಳು ಲಭ್ಯವಾಗಿದೆ. ಈ ಅವಧಿಯಲ್ಲಿ ಒಟ್ಟೂ 451 ಮತಗಳು ಚಲಾವಣೆಯಾಗಿದ್ದು, ಶೇಕಡಾ 66.62 ರಷ್ಟು ಮತದಾನ ದಾಖಲಾದಂತಾಗಿದೆ.
ಮಧ್ಯಾಹ್ನ 1 ಗಂಟೆಯವರೆಗೆ ಕ್ಷೇತ್ರವಾರು ಮತ್ತು ವಿಭಾಗವಾರು ದಾಖಲಾದ ಮತಗಳ ಮಾಹಿತಿ ಇಂತಿದೆ: ತಾಲೂಕುವಾರು ಮತದಾನದಲ್ಲಿ ಕಾರವಾರದಲ್ಲಿ 8, ಶಿರಸಿಯಲ್ಲಿ 24, ಸಿದ್ದಾಪುರದಲ್ಲಿ 22, ಯಲ್ಲಾಪುರದಲ್ಲಿ 10, ಮುಂಡಗೋಡದಲ್ಲಿ 12, ಹಳಿಯಾಳದಲ್ಲಿ 13, ಕುಮಟಾದಲ್ಲಿ 16 ಮತ್ತು ಜೊಯಿಡಾದಲ್ಲಿ 9 ಮತಗಳು ಚಲಾವಣೆಯಾಗಿವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ
ಇನ್ನು ವಿವಿಧ ಸಂಘಗಳ ವಿಭಾಗದಲ್ಲಿ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮರಾಟ ಸಹಕಾರಿ ಸಂಘದಿಂದ 10 ಮತಗಳು. ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳಿಂದ 30 ಮತಗಳು. ಔದ್ಯೋಗಿಕ ಸಹಕಾರಿ ಸಂಘದಿಂದ 19 ಮತಗಳು. ಅರ್ಬನ್ ಬ್ಯಾಂಕ್ ಹಾಗು ಕ್ರಷಿಯೇತರ ಸಹಕಾರಿ ಸಂಘಗಳಿಂದ 130 ಮತಗಳು. ಹಾಲು ಉತ್ಪಾದಕರ, ಕೂಲಿಕಾರರ ಮತ್ತು ಇತರೆ ಸಹಕಾರಿ ಸಂಘಗಳಿಂದ ಗರಿಷ್ಠ 148 ಮತಗಳು ಚಲಾವಣೆಯಾಗಿವೆ. ಇನ್ನುಳಿದ ಅವಧಿಯಲ್ಲಿ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.





