ಶಿರಸಿ | ತೀವ್ರ ಕುತೂಹಲ ಕೆರಳಿಸಿದ ಕೆಡಿಸಿಸಿ ಬ್ಯಾಂಕ್ ಚುನಾವಣೆ; ಏನಾಗಲಿದೆ ತೀರ್ಪು?

Date:

ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ನೇತೃತ್ವದ ಬಣವು ಪ್ರಾಥಮಿಕವಾಗಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಒಟ್ಟು 16 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಫಲಿತಾಂಶ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಪ್ರಮುಖ 9 ಕ್ಷೇತ್ರಗಳ ಅಂತಿಮ ಘೋಷಣೆ ನ್ಯಾಯಾಲಯದ ಆದೇಶಕ್ಕೆ ಕಾಯ್ದಿರಿಸಲಾಗಿದೆ. ಅಧಿಕೃತವಾಗಿ ಘೋಷಿತ ಫಲಿತಾಂಶಗಳ ಪ್ರಕಾರ, ಹೆಬ್ಬಾರ ಬಣದ ಅಭ್ಯರ್ಥಿಗಳು ನಾಲ್ಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (PACS) ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಕುಮಟಾ ಕ್ಷೇತ್ರ: ರಾಜಗೋಪಾಲ ಅಡಿ (ಹೆಬ್ಬಾರ ಬಣ) 9 ಮತಗಳಿಂದ ಗೆಲುವು. ಪ್ರತಿಸ್ಪರ್ಧಿ ಶ್ರೀಧರ ಭಾಗ್ವತ್ 6 ಮತ್ತು ಗಜಾನನ ಪೈ 0 ಮತ. ಹಳಿಯಾಳ ಕ್ಷೇತ್ರ: ಎಸ್.ಎಲ್. ಘೋಟೇಕರ್ (ಹೆಬ್ಬಾರ ಬಣ) 9 ಮತಗಳಿಂದ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತ. ಜೋಯಿಡಾ ಕ್ಷೇತ್ರ: ಕೃಷ್ಣ ದೇಸಾಯಿ (ಹೆಬ್ಬಾರ ಬಣ) 5 ಮತಗಳಿಂದ ಗೆಲುವು. ಪ್ರತಿಸ್ಪರ್ಧಿ ಪುರುಷೋತ್ತಮ ಕಾಮತ್ 4 ಮತ. ಮುಂಡಗೋಡ ಕ್ಷೇತ್ರ: ಎಚ್.ಎಂ. ನಾಯ್ಕ (ಹೆಬ್ಬಾರ ಬಣ) 8 ಮತಗಳಿಂದ ಗೆಲುವು. ಪ್ರತಿಸ್ಪರ್ಧಿ ಎಲ್.ಟಿ. ಪಾಟೀಲ್ 5 ಮತ.

ನ್ಯಾಯಾಲಯದ ಆದೇಶ ಬಾಕಿ – ಮುನ್ನಡೆದಲ್ಲಿರುವ ಅಭ್ಯರ್ಥಿಗಳು ನ್ಯಾಯಾಲಯದ ಆದೇಶ ಬಾಕಿ ಇದ್ದರೂ ಮತ ಎಣಿಕೆಯ ಪ್ರಸ್ತುತ ಮುನ್ನಡೆ ಆಧರಿಸಿ ಈ ಕೆಳಗಿನವರ ಗೆಲುವು ದೃಢವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಲ್ಲಾಪುರ (ಶಾಸಕರ ಕ್ಷೇತ್ರ): ಶಾಸಕ ಶಿವರಾಮ ಹೆಬ್ಬಾರ್ 10 ಮತಗಳಿಂದ ಮುನ್ನಡೆ. ಪ್ರತಿಸ್ಪರ್ಧಿ ಜಿ.ಎನ್. ಗಾಂವಕರ 2 ಮತ. ಮಾರ್ಕೆಟಿಂಗ್ ಕ್ಷೇತ್ರ (ಶಿರಸಿ TMS): ರವಿ ಹೆಗಡೆ ಹುಳಗೋಳ 6 ಮತಗಳಿಂದ ಮುನ್ನಡೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ವೈದ್ಯ 2 ಮತ. ಕಾರವಾರ ಕ್ಷೇತ್ರ: ಪ್ರಕಾಶ ಗುನಗಿ 6 ಮತಗಳಿಂದ ಮುನ್ನಡೆ. ಔದ್ಯೋಗಿಕ ಕ್ಷೇತ್ರ: ಮಂಕಾಳ ಬಣದ ವಿಶ್ವನಾಥ ಭಟ್ ಕರ್ವಾ ಮುಂಚೂಣಿಯಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ

ನ್ಯಾಯಾಲಯದ ತೀರ್ಪಿಗೆ ಕಾಯುತ್ತಿರುವ ಪ್ರಮುಖ ಕ್ಷೇತ್ರಗಳು ಸಿದ್ದಾಪುರ ಕ್ಷೇತ್ರ: ಮತ ಎಣಿಕೆ ಸಂಪೂರ್ಣವಾಗಿ ಮುಂದೂಡಲಾಗಿದೆ. ಅರ್ಬನ್/ಸೌಹಾರ್ದ ಕ್ಷೇತ್ರ: 48 ಮತಗಳು ಬಾಕಿ ಇವೆ. ಮೋಹನ ನಾಯಕ ದೇವರಬಾವಿ 92 ಮತ, ಮೋಹನ ದಾಸ ನಾಯಕ್ 90 ಮತ ಪಡೆದು ತೀವ್ರ ಪೈಪೋಟಿ. ವಸಂತ ನಾಯಕ್ 21 ಮತ, ಸರಸ್ವತಿ ಎನ್. ರವಿ 4 ಮತ ಪಡೆದಿದ್ದಾರೆ. ಹಾಲು ಉತ್ಪಾದಕರ ಕ್ಷೇತ್ರ: 17 ಮತಗಳು ಬಾಕಿ. ಸುರೇಶ್ಚಂದ್ರ ಹೆಗಡೆ 103, ಶಂಕರ ಹೆಗಡೆ 98 ಮತಗಳಿಂದ ಕಠಿಣ ಪೈಪೋಟಿ. ಗ್ರಾಹಕರ/ಸಂಸ್ಕರಣ ಕ್ಷೇತ್ರ: 15 ಮತಗಳು ಬಾಕಿ. ತಿಮ್ಮಯ್ಯ ಹೆಗಡೆ 10, ನಿರಂಜನ ಹೆಗಡೆ 9 ಮತದಿಂದ ಅಲ್ಪ ಅಂತರದ ಪೈಪೋಟಿ. ಶಿರಸಿ ಕ್ಷೇತ್ರದ ಗೊಂದಲ ಶಿರಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಎಂ.ಎ. ಹೆಗಡೆ 13 ಮತ, ಜಿ.ಆರ್. ಹೆಗಡೆ ಬೆಳ್ಳೇಕೇರಿ 12 ಮತ ಪಡೆದಿದ್ದಾರೆ.

ನ್ಯಾಯಾಲಯದಲ್ಲಿರುವ ಒಂದು ಮತ ಜಿ.ಆರ್. ಹೆಗಡೆ ಪರವಾಗಿ ತೀರ್ಪಾದಲ್ಲಿ, ಇಬ್ಬರೂ ಸಮಬಲ (13–13) ಆಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭ ಚೀಟಿ ಆಯ್ಕೆ (Draw of Lots) ಮೂಲಕ ವಿಜೇತರನ್ನು ನಿರ್ಧರಿಸಲಾಗುವ ಸಾಧ್ಯತೆ ಇದೆ. ಒಟ್ಟಾರೆ, ಕೆಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಅಂತಿಮ ಚಿತ್ರಣವು ನ್ಯಾಯಾಲಯದ ತೀರ್ಪಿನ ಮೇಲೆಯೇ ಅವಲಂಬಿಸಿರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...