ಶಿರಸಿಯ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಕಳೆದ ತಿಂಗಳು ನಡೆದಿದ್ದ ಚುನಾವಣೆಯಲ್ಲಿ ಬಾಕಿ ಉಳಿದಿದ್ದ ಒಂಬತ್ತು ಕ್ಷೇತ್ರಗಳ ಪೈಕಿ, ಇಂದು 4 ಕ್ಷೇತ್ರಗಳ ಮತ ಎಣಿಕೆ ನಡೆದಿದ್ದು, ಫಲಿತಾಂಶ ಪ್ರಕಟಿಸಲಾಗಿದೆ.
ಮತ ಎಣಿಕೆ ಬಳಿಕ ಮಹಾಬಲೇಶ್ವರ ಅನಂತ ಹೆಗಡೆ, ಸುರೇಶ್‌ಚಂದ್ರ ಹೆಗಡೆ (ಕೆಶಿನ್ಮನೆ), ರವಿ ಗಜಾನನ ಹೆಗಡೆ ಹಾಗೂ ಶಿವರಾಮ ಮಹಾಬಲೇಶ್ವರ ಹೆಬ್ಬಾರ್ ಅವರು ಜಯಗಳಿಸುವ ಮೂಲಕ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಲಾಟರಿ ಮೂಲಕ ಫಲಿತಾಂಶ ನಿರ್ಣಯ: ಇಂದಿನ ಫಲಿತಾಂಶದಲ್ಲಿ ಹೈನುಗಾರಿಕೆ ಕ್ಷೇತ್ರದ ಸ್ಪರ್ಧೆ ಹೆಚ್ಚು ಗಮನಸೆಳೆದಿತ್ತು. ಈ ಕ್ಷೇತ್ರದಲ್ಲಿ ಸುರೇಶ್‌ಚಂದ್ರ ಹೆಗಡೆ ಹಾಗೂ ಅವರ ಎದುರಾಳಿ ಅಭ್ಯರ್ಥಿ ನಡುವೆ ಸರಿಸಮನಾದ ಮತಗಳು ಬಂದ ಹಿನ್ನೆಲೆಯಲ್ಲಿ, ಚುನಾವಣಾ ನಿಯಮಗಳ ಪ್ರಕಾರ ಚೀಟಿ ಎತ್ತುವ (ಲಾಟರಿ) ವಿಧಾನ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಅದೃಷ್ಟ ಸುರೇಶ್‌ಚಂದ್ರ ಹೆಗಡೆ ಅವರಿಗೆ ಒಲಿದಿದ್ದು, ಅವರನ್ನು ಅಧಿಕೃತವಾಗಿ ಗೆದ್ದ ಅಭ್ಯರ್ಥಿ ಎಂದು ಘೋಷಿಸಲಾಯಿತು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಶಾಲೆಯ ಅಡುಗೆ ಕೋಣೆ ಬಳಿಯೇ ಗಬ್ಬು ನಾರುತ್ತಿದೆ ಚರಂಡಿ; ಬಿಸಿಯೂಟ ಸೇವಿಸಿ 26 ಮಕ್ಕಳು ಅಸ್ವಸ್ಥ
ಚುನಾವಣಾ ಅಧಿಕಾರಿಯಾಗಿ ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ಅವರು ಕಾರ್ಯನಿರ್ವಹಿಸಿದ್ದು, ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ನಡೆಸಿಕೊಟ್ಟರು.





