ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅರೋಪಿಯಾಗಿದ್ದ ಸಂತೋಷ್ ರಾವ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
2012ರ ಅಕ್ಟೋಬರ್9ರಂದು ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಸಂತೋಷ್ ರಾವ್ ಅವರನ್ನು ಪೊಲೀಸರು ಬಂಧಿಸಿ, ಬರೋಬ್ಬರಿ 6 ವರ್ಷ ಜೈಲಿನಟ್ಟಿದ್ದರು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಅಂತಿಮವಾಗಿ, 2023ರ ಜೂನ್ 16ರಂದು ಸಂತೋಷ್ ರಾವ್ ನಿರಪರಾಧಿ ಎಂದು ಘೋಷಿಸಿದ್ದ ಸಿಬಿಐ ಕೋರ್ಟ್, ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಅಲ್ಲದೆ, ಸಿಬಿಐ ತನಿಖೆಯಲ್ಲಿ ಹಲವಾರು ಲೋಕಗಳಿವೆ ಎಂದೂ ಸಿಬಿಐ ಕೋರ್ಟ್ ಹೇಳಿತ್ತು. ಸಂತೋಷ್ ರಾವ್ ಅವರನ್ನು ನಿರ್ದೋಷಿಯೆಂದು ಘೋಷಿಸಿದ ಸಿಬಿಐ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಸಂಬಂಧ ಸಂತೋಷ್ ರಾವ್ ಅವರಿಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಈ ವರದಿ ಓದಿದ್ದೀರಾ?: ಸಂತೋಷ್ ನಿರಪರಾಧಿಯಾದರೆ, ಆರೋಪಿಗಳು ಯಾರು?; ಸೌಜನ್ಯ ಹತ್ಯೆ – ಧರ್ಮಸ್ಥಳದಲ್ಲಿನ ಅಧರ್ಮ: ಈದಿನ.ಕಾಮ್ ಸಾಕ್ಷಾತ್ ವರದಿ
ಸಂತೋಷ್ ರಾವ್ ನಿರ್ದೋಷಿ ಎಂದು ಸೌಜನ್ಯ ಕುಟುಂಬಸ್ಥರು ಕೂಡ ಹೇಳುತ್ತಿದ್ದಾರೆ. ಪೊಲೀಸ್, ಸಿಐಡಿ ಹಾಗೂ ಸಿಬಿಐ ತನಿಖೆಯು ಏಕ ಮುಖವಾಗಿ ನಡೆದಿದೆ. ಎಸ್‌ಐಟಿ ರಚನೆ ಮಾಡಿ, ಪ್ರಕರಣವನ್ನು ಮರು ತನಿಖೆಗೆ ನೀಡಬೇಕು. ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಸಹೋದರನ ಮಗ ಮತ್ತು ಆತನ ಸಹಚರರ ಮೇಲೆ ಅನುಮಾನವಿದೆ ಎಂದು ಕುಟುಂಬ ಹೇಳುತ್ತಿದೆ.
ಪ್ರಕರಣದ ಮರು ತನಿಖೆಗೆ ನೀಡುವಂತೆ ಹಾಗೂ ನೈಜ ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಲವಾರು ಸಂಘಟನೆಗಳು ರಾಜ್ಯಾದ್ಯಂತ ನಿರಂತರ ಪ್ರತಿಭಟನೆಗಳನ್ನೂ ನಡೆಸಿವೆ. ಆದರೆ, ಸರ್ಕಾರ ಮರುತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇದೆಲ್ಲದರ ನಡುವೆ, ಸಂತೋಷ್ ರಾವ್‌ಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಈ ವರದಿಯನ್ನೂ ಓದಿ: ಧರ್ಮಸ್ಥಳ | 11 ವರ್ಷದ ಹಿಂದೆ ಸೌಜನ್ಯ, 36 ವರ್ಷದ ಹಿಂದೆ ಪದ್ಮಲತಾ – ಈ ಅತ್ಯಾಚಾರ, ಕೊಲೆಗಳಿಗೆ ಕಾರಣ ಯಾರು?




