ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಶಾಲೆಯಲ್ಲಿ ‘ಸಂವಿಧಾನದ ದೃಷ್ಟಿಯಲ್ಲಿ ಮಾನವ ಹಕ್ಕುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
ನಡೆಯಿತು.
1948 ಡಿಸೆಂಬರ್ 10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights – UDHR) ಗೆ, ಇಂದಿಗೆ 77 ವರ್ಷಗಳ ಹರೆಯ. ಮಾನವ ಹಕ್ಕುಗಳ ಘೋಷಣೆಯ ಸಂತಸದ ದಿನದ ಹಿನ್ನಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಕೂಲ್ ಆಫ್ ಲಾ ಹಾಗೂ ಪೀಪಲ್ಸ್ ಲೀಗಲ್ ಫೋರಂ ಮೈಸೂರು ಸಹಯೋಗದೊಂದಿಗೆ ಸಂವಿಧಾನದ ದೃಷ್ಟಿಯಲ್ಲಿ ಮಾನವ ಹಕ್ಕುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕಾನೂನೂ ಶಾಲೆಯ ಡಾ. ಬಿ.ಅರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ‘ಎಲ್ಲರಿಗಾಗಿ ಮಾನವ ಹಕ್ಕುಗಳನ್ನು ಎತ್ತಿಹಿಡಿಯೋಣ’ ಎಂಬ ಪ್ರತಿಜ್ಞಾವಿಧಿಗೆ ಸಹಿ ಮಾಡುವ ಮುಖಾಂತರ ಉದ್ಘಾಟಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅರಣ್ಯಾಧಾರಿತ ಬುಡಕಟ್ಟು ವರ್ಗಗಳಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ
ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಿನಯ್ ಕೆ. ಶ್ರೀನಿವಾಸ್, ಪೀಪಲ್ಸ್ ಲೀಗಲ್ ಫೋರಂನ ಸಂಸ್ಥಾಪಕ ನಿರ್ದೇಶಕ ಹಾಗೂ ವಕೀಲರಾದ ಬಾಬುರಾಜ್ ಪಲ್ಲದನ್, ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕಾನೂನು ಶಾಲೆಯ ನಿರ್ದೇಶಕ ಪ್ರೊ. ಟಿ.ಆರ್. ಮಾರುತಿ, ಸಮತ ವೇದಿಕೆಯ ಪ್ರೊ. ರತಿ ರಾವ್, ಪ್ರೊ. ಲತ ಬಿದ್ಧಪ, ಪ್ರೊ .ಶ್ರೀದೇವಿ, ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ವಿದ್ಯಾರ್ಥಿಗಳಾದ ಚಿರಾಗ್ ಎಸ್. ಕೆ. ಮೂರ್ತಿ, ಎಂ. ಎಸ್. ಪ್ರಗತಿ, ಡಿ. ಅಭಿ, ಪೀಪಲ್ಸ್ ಲೀಗಲ್ ಫೋರಂನ ಸಂಯೋಜಕ ಜಿ.ವಿ. ಯತೀಶ್, ಸರಸ್ವತಿ ಸೇರಿದಂತೆ ಎಲ್ಲಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಇದ್ದರು.





