ಟಿಪ್ಪು ಸುಲ್ತಾನ್ ಡಿಸೆಂಬರ್ 1ರಂದು ಜನಿಸಿರುವುದಾಗಿ ಹೊಸ ಸಂಶೋಧನೆಯೊಂದು ತಿಳಿಸಿರುವ ಹಿನ್ನೆಲೆಯಲ್ಲಿ ಶ್ರೀರಂಗಟ್ಟಣದ ವಾಟರ್ ಗೇಟ್ ಸಮೀಪ, ರಾಂಪಾಲ್ ರಸ್ತೆ ಪಕ್ಕದಲ್ಲಿರುವ ಟಿಪ್ಪು ಸ್ಮಾರಕಕ್ಕೆ ರೈತ ಸಂಘದ ತಾಲೂಕು ಘಟಕದಿಂದ ಪುಷ್ಪ ನಮನ ಸಲ್ಲಿಸಿದರು.
ಸಮರ್ಪಣ ಟ್ರಸ್ಟ್ ಶ್ರೀರಂಗಪಟ್ಟಣ ತಾಲೂಕು ರೈತ ಸಂಘ ಇತರ ಸಂಘಟನೆಗಳಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ 275ನೇ ಜನ್ಮದಿನವನ್ನು ಟಿಪ್ಪು ಸುಲ್ತಾನ್ ಮೃತ ದೇಹ ದೊರೆತ ಸ್ಥಳದಲ್ಲಿ ಪುಷ್ಪಾರ್ಚನೆಯೊಂದಿಗೆ ನೆರವೇರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಒದಗಿಸಲು ಒತ್ತಾಯ
ಕಾರ್ಯಕ್ರಮದಲ್ಲಿ ರೈತ ಸಂಘ ತಾಲೂಕು ಮುಖಂಡ ಪಾಂಡು ದೊಡ್ಡೇಗೌಡನ ಕೊಪ್ಪಲು, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಅತಿಥಿ ಉಪನ್ಯಾಸಕ ಸುರೇಶ ದರಸಗುಪ್ಪೆ, ಇಬ್ರಾಹಿಂ ಬೆಳಗಾಂ, ಮನೋಜ್ ಗಾಯ್ಗೈ, ದಾಮೋದರ್, ವಿಲಾಸ್, ಗೋಮೇಂದ್ರ ನೀ ಕಾರ್, ಸೋಫನಿಲ್ ಠಾಕೂರ್ ಸೇರಿದಂತೆ ಇತರರು ಇದ್ದರು.





