ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆ ಕೊನೆಯ (35) ಸ್ಥಾನ ಪಡೆದಿದೆ.
ಕಲಬುರಗಿ ಜಿಲ್ಲೆ 2023ರಲ್ಲಿ 29ನೇ ಸ್ಥಾನದಲ್ಲಿತ್ತು, ಕಳೆದ ವರ್ಷ 34ನೇ ಸ್ಥಾನಕ್ಕೇರಿತು. ಆದರೆ ಈ ಬಾರಿ 35ನೇ ಸ್ಥಾನ ಪಡೆಯುವ ಮೂಲಕ ಫಲಿತಾಂಶದಲ್ಲಿ ಮತ್ತೆ ಕುಸಿತ ಕಂಡಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 39,257 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 16,658 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಜಿಲ್ಲೆಗೆ ಒಟ್ಟು ಶೇ 42.43 ರಷ್ಟು ಫಲಿತಾಂಶ ಬಂದಿದೆ.
ಎರಡು ಸ್ಥಾನ ಜಿಗಿತ ಕಂಡ ಯಾದಗಿರಿ :
ಯಾದಗಿರಿ ಜಿಲ್ಲೆಗೆ ಕಳೆದ ಎರಡು ವರ್ಷಗಳಿಂದ ಸತತ ಕೊನೆಯ ಸ್ಥಾನ (35) ಸ್ಥಾನ ಭದ್ರವಾಗಿತ್ತು, ಈ ಬಾರಿ ಎರಡು ಸ್ಥಾನ ಜಿಗಿತ ಕಂಡಿದ್ದು, ಜಿಲ್ಲೆಗಳ ಪಟ್ಟಿಯಲ್ಲಿ ಯಾದಗಿರಿ 33ನೇ ಸ್ಥಾನದಲ್ಲಿದೆ.
ಈ ಬಾರಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 15,036 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,756 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು ಶೇ 51.6 ರಷ್ಟು ಫಲಿತಾಂಶ ಬಂದಿದೆ.
ಈ ಸುದ್ದಿ ಓದಿದ್ದೀರಾ? SSLC Result 2025 : ಕುಸಿದ ಫಲಿತಾಂಶ : 31ನೇ ಸ್ಥಾನಕ್ಕೇರಿದ ಬೀದರ್





