ಮುಳಬಾಗಿಲು ತಾಲೂಕು ಅಭಿವೃದ್ಧಿ ಕಡೆ ಸಾಗಬೇಕು, ರಾಜ್ಯ ಸರ್ಕಾರ ಅನುದಾನಗಳನ್ನು ನಮಗೆ ಸರಿಯಾಗಿ ನೀಡುತ್ತಿಲ್ಲ, ಆದರೂ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನಗಳನ್ನು ಪಡೆದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.
ತಾಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, “ಯಳಗೊಂಡಹಳ್ಳಿ ಮಿಣಜೆನಳ್ಳಿ ರಸ್ತೆ ಅಭಿವೃದ್ಧಿಗೆ ಸುಮಾರು ಎರಡುವರೆ ಕೋಟಿ ರೂ.. ವರದಗಾನಹಳ್ಳಿ ಮತ್ತು ದೊಡ್ಡಹೊನಶೆಟ್ಟಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ತಲಾ 20 ಲಕ್ಷ ರೂ. ಹನುಮನಹಳ್ಳಿ ವಾನಿಗಾನಹಳ್ಳಿ ರಸ್ತೆ ಅಭಿವೃದ್ಧಿಗೆ ಏಳು ಕೋಟಿ ಅನುದಾನ ನೀಡಲಾಗಿದೆ ಗುತ್ತಿಗೆದಾರರು ಗುಣಮಟ್ಟದಿಂದ ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು” ಸೂಚಿಸಿದರು.
“ತಾಲೂಕಿನಲ್ಲಿ ಶೇಕಡ 90ರಷ್ಟು ರಸ್ತೆಗಳು ಅಭಿವೃದ್ಧಿಯಾಗಿವೆ. ಇನ್ನು ಉಳಿದ ರಸ್ತೆಗಳನ್ನು ಸಹ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾ ಗುವುದು. ಗಡಿನಾಡ ತಾಲೂಕು ಮುಳಬಾಗಿಲು ಆಗಿರುವುದರಿಂದ, ರಾಜ್ಯ ಸರ್ಕಾರ ತಾಲೂಕಿಗೆ ಹೆಚ್ಚು ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು
ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಬಿ.ವಿ ಶಾಮೆಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿರೆಡ್ಡಿ, ಗೊಲ್ಲಹಳ್ಳಿ ಜಗದೀಶ್, ಗ್ರಾಮ ವಿಕಾಸ ಎಂ.ವಿ.ಎನ್ ರಾವ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಕೆ.ಟಿ ನಾರಾಯಣಸ್ವಾಮಿ, ಚಂಗಲರಾಯಪ್ಪ, ಎಂ.ಸಿ ಯಲ್ಲಪ್ಪ, ಪಿಡ ಬ್ಲೂಡಿ ಇಲಾಖೆ ಎಡಬ್ಲ್ಯೂ ಮೂಡಲಗಿರಿ, ಗುತ್ತಿಗೆದಾರ ಅತ್ತಿಹಳ್ಳಿ ಶ್ರೀನಿವಾಸ್ ಮತ್ತಿತರರಿದ್ದರು.





