ಎಸ್.ಎನ್.ಸುಬ್ಬಾರೆಡ್ಡಿ ಅವರ ಬಗ್ಗೆ ಹಗುರ ಮಾತು ಅಪಪ್ರಚಾರ ನಿಲ್ಲಿಸಿ

Date:

ಬಾಗೇಪಲ್ಲಿ:-ಜನಪರ ಕಳಕಳಿ ಕಾಳಜಿಯುಳ್ಳ ನಮ್ಮ ನಾಯಕರಾದ ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಮಾತನಾಡುವ ಯೋಗ್ಯತೆ ಬಿಜೆಪಿ ಮುಖಂಡ ಸಿ.ಮುನಿರಾಜು ಹಾಗೂ ಎಂ.ಎನ್.ರಾಜಾರೆಡ್ಡಿ ಮುಖಂಡರಿಗಿಲ್ಲ.ಸುಖಾಸುಮ್ಮನೆ ಆರೋಪ ಮಾಡುವ ಬದಲು ನಿಮ್ಮ ಆರೋಪಗಳಿಗೆ ತಕ್ಕ ದಾಖಲೆಗಳೊಂದಿಗೆ ಮುಕ್ತ ಚರ್ಚೆಗೆ ಬನ್ನಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಕೋಟಪ್ಪ ಎಂದು ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು ನಮ್ಮ ನಾಯಕ ಎಸ್.ಎನ್.ಸುಬ್ಬಾರೆಡ್ಡಿ ಕೇವಲ ಉದ್ಯಮಿಯಲ್ಲ ಜನಪರ ಕಾಳಜಿಯುಳ್ಳ ಸ್ನೇಹಜೀವಿ.25 ವರ್ಷಗಳಿಗೂ ಹೆಚ್ಚುಕಾಲ ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತಾ ಬಡಜನರ, ದಲಿತರ, ಕಾರ್ಮಿಕರ,ಹಾಗೂ ಸಾಮಾನ್ಯ
ಜನತೆಯ ಕಷ್ಟಕ್ಕೆ ಸುಖಗಳಲ್ಲಿ ಜತೆಗಿದ್ದವರು. ಜನರ ಪ್ರೀತಿ ವಿಶ್ವಾಸದ ಕಾರಣವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಇಂತಹ ವ್ಯಕ್ತಿ ಜನ ಮತ್ತು ವ್ಯವಸ್ಥೆಗೆ ಮೋಸ ಮಾಡುತ್ತಾರೆಂದರೆ ದೇವರು ಕೂಡ ಮೆಚ್ಚುವುದಿಲ್ಲ ಎಂದು ತಿಳಿಸಿದರು.

ಶಾಸಕರು ಇಡೀ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ದಲಿತರಿಗೆ ಕೊಳವೆ ಬಾವಿ, ಸಾಲ ಸೌಲಭ್ಯಗಳನ್ನು ನೀಡಿದ್ದಾರೆ, ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಕ್ಷೇತ್ರದಲ್ಲಿ 120 ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಿ ದಾಖಲೆ ಮಾಡಿದ್ದಾರೆ ಇಂತಹ ನಾಯಕರ ಮೇಲೆ ದಲಿತರ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರಾಜು ಬಹಳ ಗಂಭೀರ ಆರೋಪ ಮಾಡಿರುವುದು ಶುದ್ದ ಸುಳ್ಳು ಒಂದು ವೇಳೆ ದಲಿತರ ಜಮೀನು ಕಬಳಿಕೆ ಮಾಡಿದ್ದರೆ ದಾಖಲೆ ನೀಡಿ ಬಹಿರಂಗ ಚರ್ಚೆಗೆ ಬನ್ನಿ ವೈಲರ್‌ ಸವಾಲು ಹಾಕಿದರು.

ಸಿ.ಮುನಿರಾಜು ಅವರೇ ಕ್ಷೇತ್ರದವರೇ ಅಲ್ಲ ಎಲ್ಲೋ ಸರ್ಜಾಪುರದವರು ಅಲ್ಲಿ ನಮ್ಮ ದಲಿತರ ಸಾವಿರಾರು ಜಮೀನು ಲೂಟಿ ಹೊಡೆದಿರುವುದು ನೀವು ನಿಮ್ಮ ಗ್ರಾಮದ ಸರ್ಜಾಪುರದ ರಚ್ಚಕಟ್ಟೆಯನ್ನು ಕೆಡವಿ ಅಲ್ಲಿ ಬಂಗಲೆ ನಿರ್ಮಾಣ ಮಾಡಿಕೊಂಡು ಒಳ್ಳೆಯ ಐಶಾರಾಮಿ ಜೀವನ ನಡೆಸುತ್ತಿರುವುದು ನೀವು ಎಂದು ಕಿಡಿಕಾರಿದರು.

ಎಂ.ಎನ್.ರಾಜಾರೆಡ್ಡಿ ಅವರು ನಿನ್ನೆ ಒಬ್ಬ ರೌಡಿಶೀಟರ್ ಹಾಗೂ ಜೈಲಿಗೆ ಹೋಗಿ ಬಂದಿರುವ ಮುಖಂಡ ನೀನು ಸಹಾ ಸುಬ್ಬಾರೆಡ್ಡಿಯ ಬಗ್ಗೆ ಮಾತನಾಡುವ ಮೊದಲು ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಿ ವೇಶ್ಯಾವಾಟಿಕೆಯ ಮೂಲಕ ಜೀವನ ನಡೆಸುತ್ತಿರುವ ನೀವು ಸುಬ್ಬಾರೆಡ್ಡಿ ಅವರ ವಿರುದ್ದ ಮಾತನಾಡುವ ನೈತಿಕತೆ ಇದೆಯೇ ನಿಮಗೆ ಇಡೀ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಿಂಚತ್ತು ಕಾಳಜಿ ಇಲ್ಲದ ನೀವು ಪುಡಿ ರಾಜಕಾರಣಿ ಮಾಡುತ್ತಿದ್ದೀರಿ. ಸುಬ್ಬಾರೆಡ್ಡಿ ಅವರ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ನಾವು ದಾಖಲೆ ಸಮೇತ ಬರುತ್ತೇವೆ ಅಭಿವೃದ್ದಿ ಕುಂಟಿತಗೊಂಡಿದೆ ಎಂದು ದಾಖಲೆ ಸಮೇತ ಬರಲು ಸಿದ್ದರಿದ್ದೀರಾ ಎಂದು ಮುನಿರಾಜು ಮತ್ತು ರಾಜಾರೆಡ್ಡಿ ಅವರಿಗೆ ಬಹಿರಂಗ ಸವಾಲ್ ಹಾಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾಲ್ಲೂಕು ಸಂಚಾಲಕ ಎಲ್.ಎನ್.ನರಸಿಂಹಯ್ಯ ಮಾತನಾಡಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಳೆದ 25 ವರ್ಷದಿಂದ ಜಾತಿ ಧರ್ಮ ನೋಡದೆ ಅವರು ಇವರೆನ್ನದೆ ಶಿಕ್ಷಣ ಆರೋಗ್ಯ ಜತೆಗೆ ಸಾಮೂಹಿಕ ವಿವಾಹಗಳನ್ನು 2002ರಿಂದ ಮಾಡಿ ಕೊಂಡು ಬಂದಿದ್ದಾರೆ ಆದರೆ ಮುನಿರಾಜು ಅವರೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರಲ್ಲಿ ದಲಿತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಅದೇ ರೀತಿಯಲ್ಲಿ ಬಾಗೇಪಲ್ಲಿ ಕ್ಷೇತ್ರದ ದಲಿತರ ಜೀವನದ ಜೊತೆ ಚೆಲ್ಲಾಟವಾಡಲು ಬಂದರೆ ನಿಮಗೆ ತಕ್ಕ ಬುದ್ದಿ ಕಲಿಸಬೇಕಾಗುತ್ತದೆ ಸುಬ್ಬಾರೆಡ್ಡಿ ಅವರು ಜನಾದೇಶದ ಮೂಲಕ ಆಯ್ಕೆಯಾಗಿದ್ದಾರೆ ಅದೇ ರೀತಿಯಲ್ಲಿ ನೀವೂ ಸಹಾ ಜನಾದೇಶದ ಮೂಲಕ ಗೆದ್ದು ಬನ್ನಿ ಅದಕ್ಕೆ ನಮ್ಮ ವಿರೋಧವಿಲ್ಲ ಅದರ ಬದಲು ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಿ ಶಾಸಕರಾಗಿ ಆಯ್ಕೆಯಾಗುತ್ತೇನೆ ಎಂದು ಹಗಲ ಕನಸು ಕಾಣಬೇಡಿ ಎಂದರು.

ಇದನ್ನು ಓದಿದ್ದೀರಾ..? ಉದಯ್ ಭಾನು ಚಿಬ್ ಬಂಧನಕ್ಕೆ ಯುವ ಕಾಂಗ್ರೆಸ್ ಖಂಡನೆ

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಗುಲಪ್ಪ, ತಾಲ್ಲೂಕು ಸಂ.ಸಂಚಾಲಕರಾದ ಎಂ.ವಿ.ನರಸಿಂಹಪ್ಪ, ಭಗವಾನ್ ಮೂರ್ತಿ, ಸದ್ದುಪಲ್ಲಿ ಸುಧಾಕರ್, ವೈ.ನಾರಾಯಣಸ್ವಾಮಿ, ಎಸ್.ಎಸ್.ಆದಿನಾರಾಯಣ, ವೆಂಕಟೇಶ್, ಕದಿರಪ್ಪ, ಚೇಳೂರು ಸುಧಾಕರ್, ಮುಖಂಡರಾದ ಎಂ.ಎನ್.ವೆಂಕಟೇಶ್, ಜಯಪ್ಪ, ಸುಬ್ಬರಾಯಪ್ಪ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...