ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಮಹಾನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಯುಕ್ತರಾದ ಶೇಕ್ ತನ್ವಿರ್ ಆಸೀಫ್ ಮಾತನಾಡಿ, ವಿದ್ಯಾರ್ಥಿಗಳು ಪೋಷಕರ ಬೆಂಬಲ ಮನಗಾಣುವಂತೆ ಕಿವಿಮಾತು ಹೇಳಿದರು.
ಪೋಷಕರು ಮಕ್ಕಳಿಂದ ಯಾವುದೇ ನಿರೀಕ್ಷೆ ಮಾಡದೆ, ನಿಮ್ಮ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಪೋಷಕರ ಪರಿಶ್ರಮ ಹೆಚ್ಚಿದೆ. ತಮ್ಮ ಯಾವುದೇ ಕಷ್ಟ ಇದ್ದರು ನಿಮಗೆ ಸ್ಪಂದಿಸುತ್ತಾರೆ. ಪ್ರತಿ ನಿತ್ಯ ಪೋಷಕರ ದುಖಃ, ಸಮಸ್ಯೆಗಳನ್ನು ನೋಡಿರುತ್ತಿರಿ. ಇದನ್ನರಿತು ಸಮಾಜದಲ್ಲಿ ಒಳ್ಳೆಯ ಸ್ಥಾನಕ್ಕೇರಲು ಚಿಂತನೆ ನಡೆಸಿ. ನಿಮಗೆ ಭವಿಷ್ಯ ರೂಪಿಸುವುದೊಂದೆ ಪೋಷಕರ ಗುರಿ ಆಗಿರುತ್ತದೆ.
ಪೋಷಕರ ಹೊರತಾಗಿ ಮತ್ತಾರು ನಿಮ್ಮ ನೆರವಿಗೆ ಬರುವುದಿಲ್ಲ. ನಿಮ್ಮ ಜೀವನಕ್ಕೆ ನಿಸ್ವಾರ್ಥ ಸೇವೆ ಮಾಡುವ ಅವರಿಗೆ, ನೀವು ಸಾಧನೆ ಮಾಡುವ ಮೂಲಕ ಋಣ ತಿರಿಸಬಹುದಾಗಿದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಮುಂದಿನ ದಿನಗಳಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಿ ತೋರಿಸಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದ 30ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ದೇಶ ಸದೃಢ: ಸಚಿವ ಶಿವರಾಜ್ ತಂಗಡಗಿ
ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಗಳಾದ ದಾಸೇಗೌಡ, ಸೋಮಶೇಖರ್, ಸಂಘದ ಅಧ್ಯಕ್ಷೆ ಎಸ್. ಯಶೋಧರ, ಉಪಾಧ್ಯಕ್ಷೆ ಕೆ. ಸುಮಂಗಳ, ಖಜಾಂಚಿ ನಸುಲ್ಲಾ, ನಿರ್ದೇಶಕರಾದ ಬಿ. ಪ್ರಸಾದ್, ಎಸ್. ಮೈತ್ರಿ, ಎನ್. ಮಂಜುನಾಥ್, ಎಚ್.ಎಂ. ಶಿವಪ್ರಸಾದ್, ವಿ. ರಾಜೇಶ್ವರಿ ಬಾಯಿ, ಎಂ. ಬಸವಣ್ಣ, ಡಿ. ಸುರೇಂದ್ರಕುಮಾರ್, ಕೆ. ವಿಶ್ವನಾಥ್, ಬಿ. ರಾಜು, ಕಾರ್ಯದರ್ಶಿ ಎನ್. ಶಿವಕುಮಾರ್ ಇನ್ನಿತರರು ಇದ್ದರು.





