ಉಡುಪಿ | ವರ್ಗಾವಣೆಗೊಂಡ ಜಿಲ್ಲಾ ಸರ್ಜನ್ ಅಶೋಕ್ ರವರನ್ನು ಈ ಕೂಡಲೇ ಅಮಾನತು ಗೊಳಿಸಿ – ಸುಂದರ ಮಾಸ್ತರ್

Date:

ಈಗಾಗಲೇ ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ವರ್ಗಾವಣೆಗೊಂಡು ಬಿಡುಗಡೆ ಆಗಿರುವ ಮಾಜಿ ಜಿಲ್ಲಾ ಸರ್ಜನ್ ಹೆಚ್.ಎಸ್. ಅಶೋಕ ರವರು ಬಲಾತ್ಕಾರವಾಗಿ ಜಿಲ್ಲಾ ಸರ್ಜನ್ ಕುರ್ಚಿಯಲ್ಲಿ ಕೂತು ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸುತ್ತದೆ.

ಈಗಾಗಲೇ ಚಾರ್ಜ್ ತೆಗೆದುಕೊಂಡ ನಿತ್ಯಾನಂದ ನಾಯಕರವರಿಗೆ ಕರ್ತವ್ಯ ನಿರ್ವಹಿಸಲು ಬಿಡದೆ ಉಡಾಪೆಯಿಂದ ವರ್ತಿಸುತ್ತಿರುವುದು ಅಕ್ಷಮ್ಯ. ಬೇರೆಕಡೆಗೆ ಬಿಡುಗಡೆಗೊಂಡಿದ್ದರೂ ಈ ಹಿಂದೆ ಕರ್ತವ್ಯ ವಿರ್ವಸುತ್ತಿದ್ದ ಸಂದರ್ಭದಲ್ಲಿ ದಲಿತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರಕುಳ ಕೊಟ್ಟು ಅದು ಸಾಬೀತಾಗಿ 5 ಇಂಕ್ರಿಮೆಂಟ್ ಕಡಿತಗೊಂಡು ಶಿಕ್ಷೆ ಆಗಿದ್ದರೂ ಇಲ್ಲಿ ಈಗ ಅದೇ ರೀತಿ ಅನಧಿಕೃತವಾಗಿ ರಾತ್ರಿ ಪಾಳಿಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ರೋಗಿಗಳ ವಾರ್ಡನಲ್ಲಿ ರಾತ್ರಿ ಹೊತ್ತು ವಾರ್ಡಿಂದ ವಾರ್ಡಿಗೆ ‌ಸುತ್ತಾಡುತ್ತಾ ರೋಗಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ.

ಈ ಕೂಡಲೇ ಈ ಮಾಜಿ ಜಿಲ್ಲಾ ಸರ್ಜನ್ ಮೇಲೆ ಕಾನೂನು ಕ್ರಮಕೈಗೊಂಡು ಅಮಾನತು ಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ‌ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...