ವೋಟ್ ಚೋರಿ ಬಗ್ಗೆ ಸನ್ಮಾನ್ಯ ರಾಹುಲ್ ಗಾಂಧಿಯವರಿಂದ ಸಾಕ್ಷಾ ಕೇಳಿದ ಬಿಜೆಪಿ ನಾಯಕರಿಗೆ ಬಿಹಾರ ಚುನಾವಣಾ ಫಲಿತಾಂಶಕ್ಕಿಂತ ದೊಡ್ಡ ಸಾಕ್ಷ ಬೇಕೆ, ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ನಡೆದ ಲೋಕಸಭೆ, ಹರಿಯಾಣ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಚುನಾವಣೆಯಲ್ಲೂ ಮತಕಳವು ನಡೆದಿದ್ದರೆಂಬ ಸ್ಪಷ್ಟ ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ, ಆಯೋಗ ಅದನ್ನು ಪರಿಗಣಿಸದೆ ಕಾಂಗ್ರೆಸ್ ನಾಯಕರ ಮೇಲೆಯೇ ಸುಳ್ಳು ಆರೋಪ ಮಾಡಿತ್ತು. ಬಿಹಾರ ಚುನಾವಣೆಗೆ ಮುನ್ನವೇ ರಾಹುಲ್ ಗಾಂಧಿಯವರು ಮತಕಳವು ಸಂಭವಿಸುವ ಸಾಧ್ಯತೆಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದರೂ, ಬಿಜೆಪಿ ಹಾಗೂ ಜೆಡಿಯು ನೇತೃತ್ವದ ಸರ್ಕಾರದ ಪರವಾಗಿ ಆಯೋಗ ಕೆಲಸ ಮಾಡಿದೆ ಎಂಬುದು ಇದೀಗ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಬಿಹಾರದಲ್ಲಿ ಆಡಳಿತ ನರಿಸುತ್ತಿರುವ ಬಿಜೆಪಿ ಹಾಗೂ ಜೆಡಿಯು ಪಕ್ಷದ ಬಗ್ಗೆ ಜನಸಾಮಾನ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಪ್ರಚಾರಕ್ಕೆ ಹೋದ ಸಚಿವರುಗಳನ್ನೇ ಅಂದರೆ ಉಪಮುಖ್ಯಮಂತ್ರಿಯನ್ನೇ ಓಡಿಸಿದ ಘಟನೆ ಬಿಹಾರದಲ್ಲಿ ನಡೆದಿದ್ದು ಇಂದು ಅಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಸರಕಾರ ಪುನರಪಿ ಅಧಿಕಾರಕ್ಕೆ ಬರುತ್ತಿದೆ ಎಂದಾದರೆ ಇದು ಜನರು ಕೊಟ್ಟ ಮತದಿಂದ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಇದುವೇ ರಾಹುಲ್ ಗಾಂಧಿ ಅವರು ಮತ ಚೋರಿಯ ಬಗ್ಗೆ ದೇಶದಾದ್ಯಂತ ಅಭಿಯಾನ ನಡೆಸಿದ್ದು ಇಂದು ಇದಕ್ಕೆ ಸರಿಯಾದ ಸಾಕ್ಷಿ ಸಿಕ್ಕಿದೆ
ಬಿಹಾರದಲ್ಲಿ ಜನರು ಆಡಳಿತದ ವಿರುದ್ಧ ತೀವ್ರ ಅಸಮಾಧಾನದ ಸೂಚನೆ ನೀಡಿದ್ದರೂ, ಪ್ರಚಾರಕ್ಕೆ ಹೋದ ಸಚಿವರು, ಉಪಮುಖ್ಯಮಂತ್ರಿಯವರನ್ನೇ ಜನತೆ ಓಡಿಸಿದರೂ, ಅಂತಿಮ ಫಲಿತಾಂಶದಲ್ಲಿ ಮತ್ತೆ ಅದೇ ಸರ್ಕಾರಕ್ಕೆ ಗೆಲುವು ಬರೋದು ಸಾಮಾನ್ಯ ಮತದ ಫಲವಲ್ಲ. ಜನಗಳೇ ಅರ್ಥಮಾಡಿಕೊಂಡಂತೆ, ಇದು ಪ್ರಾಮಾಣಿಕ ಜನಮನದ ಫಲವಲ್ಲ, ರಾಹುಲ್ ಗಾಂಧಿ ದೇಶಾದ್ಯಂತ ಮತ ಚೋರಿಯ ವಿರುದ್ಧ ಅಭಿಯಾನ ನಡೆಸುತ್ತಿದ್ದು, ಬಿಹಾರದಲ್ಲಿ ನಡೆದದ್ದೇ ಅದರ ಜೀವಂತ ಸಾಕ್ಷಿ ಎಂದು ಆರೋಪಿಸಿದ್ದಾರೆ.





