ಜನವರಿ 18 ರಂದು ಬೆಂಗಳೂರಿನಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ್ ನಾಗವಾರ ಸ್ಥಾಪಿತ) ರಾಜ್ಯ ಸಮಿತಿ ವತಿಯಿಂದ ʼಸಮಾನತೆಯ ಹಾದಿಯಲ್ಲಿ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರರ ಅಳಿಯದ ನೆನಪುʼ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆಯ ಬೆಳಗಾವಿ ವಿಭಾಗೀಯ ಸಂಚಾಲಕ ದೇವೇಂದ್ರ ಹಾದಿಮನಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಲಕ್ಷ್ಮೀನಾರಾಯಣ ನಾಗವಾರ ಈ ರಾಜ್ಯದ ಶೋಷಿತರಿಗೆ, ದಮನಿತರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತ ಮಾಣಿಕ್ಯನ ಕಳೆದುಕೊಂಡ ನಾವುಗಳು ಆ ಹೋರಾಟಗಾರನ ನೆನಪಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ. ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಸತ್ಯಾಗ್ರಹ ಮಾಡುವಂತ ಹೋರಾಟಗಾರ ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ರವರನ್ನು ಪೋಲಿಸ್ ಸಂಬಂಧಿಗಳು ಬಂಧಿಸಿದ್ದಾರೆ. ಅವರ ಪರವಾಗಿ ನಮ್ಮ ಸಂಘಟನೆ ಧ್ವನಿಯುತ್ತಬೇಕಾಗಿದೆ. ಮತ್ತೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ಬಸಮ್ಮ ಎಂಬ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆ ಪಾಪಿಗಳಿಗೆ ಮತ್ತು ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಎಸಗಿ, ಬೆದರಿಕೆ ಹಾಕಿದವರ ದರ್ಪಕ್ಕೆ ಕೊನೆಗಾಣಿಸಲು ದಲಿತ ಸಂಘರ್ಷ ಸಮಿತಿಯ ಲಕ್ಷ್ಮೀನಾರಾಯಣ ನಾಗವಾರ ಬಣ ಸಿದ್ಧವಾಗಿ ನಿಂತಿದೆ” ಎಂದರು.

ಸಮಾನತೆಯ ಹಾದಿಯಲ್ಲಿ ದಿವಂಗತ ಲಕ್ಷ್ಮೀನಾರಾಯಣ ನಾಗವಾರ ಹೋರಾಟಗಾರನ ಅಳಿಯದ ನೆನಪು ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ವಿರುದ್ಧ ಹೋರಾಟಗಾರರ ಬಂಧನ: ಬಿಡುಗಡೆಗೆ ಜನ ವೇದಿಕೆ ಸಂಘಟನೆ ಆಗ್ರಹ
ಸಭೆಯಲ್ಲಿ ಮಹೇಶ ಛಲವಾದಿ ಮಾತನಾಡಿ, ನಾಗೇಶ ಕಟ್ಟಿಮನಿ, ತಾಳಿಕೋಟೆ ತಾಲೂಕು ಸಂಚಾಲಕ ಮಾಂತೇಶ್ ಕಟ್ಟಿಮನಿ, ಕಾಶಿನಾಥ ಕಾರಗನೂರ, ದೇವು ಗೊಟಖಂಡಿಕಿ, ಭೀಮರಾವ್ ರತ್ನಾಕರ್, ಬಸವರಾಜ್ ಬಳಗಾನೂರ, ಚಂದ್ರು ದೊಡ್ಡಮನಿ, ಬಾಬು ಮೀಣಜಿಗಿ, ಸಂಜೀವ್ ಉತಾಳೆ, ಕಾಶಿನಾಥ್ ದೊಡ್ಡಮನಿ ತುಂಬಿಗಿ, ಪರಶುರಾಮ್ ನವದಗಿ, ಯುವನಾಯಕ ಕಾಶಿನಾಥ್ ಕಟ್ಟಿಮನಿ, ಅಮೋಘ ಹಂದ್ರಾಳ ಚಬನೂರ, ಕಾಶಿನಾಥ ಅಡಗಿನಾಳ, ಮುನ್ನಾ ಹುಣಸ್ಯಾಳ್ ಹಾಗೂ ಇತರರು ಇದ್ದರು.





