ಸೋಮವಾರಪೇಟೆ | ಐಗೂರಿನಲ್ಲಿ ಫೆ.9ರಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

Date:

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಐಗೂರು ಗ್ರಾಮದ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆದು ಐಗೂರಿನಲ್ಲಿ ಫೆಬ್ರವರಿ.9ರಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಣಯಿಸಲಾಗಿದೆ.

ಸೋಮವಾರಪೇಟೆ ಕಸಬಾ ಹೋಬಳಿ ಐಗೂರು ಕೇಂದ್ರದಲ್ಲಿ ಊರಿನ ಜನ, ಸಂಘ-ಸಂಸ್ಥೆ, ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ತಾಲೂಕು ಸಮ್ಮೇಳನ ನಡೆಸಲು ಅನುಮತಿ ಪಡೆಯಲಾಯಿತು. ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಮ್ಮೇಳನದ ರೂಪುರೇಷೆ, ಸ್ವಾಗತ ಸಮಿತಿ ಮತ್ತು ಉಪ ಸಮಿತಿಗಳ ವಿವರ ನೀಡಿದರು. ಸಮ್ಮೇಳನವು ಬೆಳಗಿನ ಜಾವ ಎಂಟು ಗಂಟೆಗೆ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜದ ಆರೋಹಣದೊಂದಿಗೆ ಪ್ರಾರಂಭವಾಗಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರ ಗೋಷ್ಠಿ, ಬಹಿರಂಗ ಅಧಿವೇಶನ, ತಾಲೂಕಿನ ಸಾಧಕರಿಗೆ ಸನ್ಮಾನ, ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಐಗೂರಿನ ಮತ್ತು ಸುತ್ತುಮುತ್ತಲ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಮರೆಯಾದ ಹಿರಿಯ ಗಣ್ಯರನ್ನು ಗುರುತಿಸಿ ಅವರ ನೆನಪಿಗಾಗಿ 9 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಆಲೋಚಿಸಿಸಲಾಗಿದೆ. ಅದರಲ್ಲಿ, ಸಮ್ಮೇಳನದ ಪೂರ್ಣ ವಿವರ, ಸೋಮವಾರಪೇಟೆ ತಾಲೂಕಿನ ಪ್ರವಾಸಿ ಕೇಂದ್ರಗಳ ವಿವರ, ಐಗೂರಿನ ಸಮ್ಮೇಳನದಲ್ಲಿ ಸನ್ಮಾನಿಸಲ್ಪಡುವ ಸಾಧಕರ ವಿವರ, ಸಮ್ಮೇಳನಕ್ಕಾಗಿ ನಿರ್ಮಿಸಿದ ಪ್ರವೇಶ ದ್ವಾರಗಳಲಿ ಹಿರಿಯರ ತ್ಯಾಗ ಆದರ್ಶಗಳ ಕುರಿತು ಲೇಖನಗಳನ್ನು ಒಳಗೊಂಡಂತೆ ಸಂಗ್ರಹ ಯೋಗ್ಯ ಪುಸ್ತಕವನ್ನು ಹೊರತರಲಾಗುವುದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಮತ್ತು ಕೊಡಗು ಜಿಲ್ಲಾ ಕಸಾಪಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್, ಸಮ್ಮೇಳನದ ಮಹಾಪೋಷಕರಾಗಿ ಮಾಜಿ ಸಚಿವರಾದ ಬಿ.ಎ. ಜೀವಿಜಯ, ಎಂ.ಪಿ. ಅಪಚ್ಚು ರಂಜನ್, ಮಾಜಿ ವಿಧಾನಸಭಾ ಸದಸ್ಯರಾದ ಎಸ್‌.ಜಿ. ಮೇದಪ್ಪ, ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷರಾದ ಎಸ್‌.ಡಿ. ವಿಜೇತ್, ಪ್ರಧಾನ ಕಾರ್ಯದರ್ಶಿಯಾಗಿ ಐಗೂರು ಹೋಬಳಿ ಕಸಾಪ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಪ್ರದಾನ ಕಾರ್ಯದರ್ಶಿಯಾಗಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಕಾರ್ಯದರ್ಶಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್, ಪಿ. ರೇವತಿ ರಮೇಶ್, ಸಹ ಕಾರ್ಯದರ್ಶಿಯಾಗಿ ತಾಲೂಕು ಕಾರ್ಯದರ್ಶಿಗಳಾದ ಕೆ.ಆರ್. ಜ್ಯೋತಿ ಅರುಣ್ ಮತ್ತು ಎ.ಪಿ. ವೀರರಾಜು, ಜಿಲ್ಲಾ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್, ಬಿ.ಕೆ. ವಾಸು ರೈ, ಸಹಕಾರ್ಯದರ್ಶಿ ಜಲಜಾ ಶೇಖರ್, ಎ.ವಿ. ಮಂಜುನಾಥ್, ಹೋಬಳಿ ಗೌರವ ಕಾರ್ಯದರ್ಶಿ ಎಂ.ಟಿ ಸರಳ ಕುಮಾರಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ರಾಜೇ ಅರಸ್, ಕೋಶಾಧಿಕಾರಿ ಎಸ್.ಎಂ. ಬೆಳ್ಳಿಯಪ್ಪ, ಶಾಂತಳ್ಳಿ ಹೋಬಳಿ ಕಸಾಪ ಅಧ್ಯಕ್ಷ ಸಿ.ಎಸ್. ನಾಗರಾಜ್. ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ.ಬಿ. ನಾಗರಾಜ್, ಕೊಡ್ಲಿಪೇಟೆ ಕಸಾಪ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಸೋಮವಾರಪೇಟೆ ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಜೆ ಸಿ ಶೇಖರ್ ಮತ್ತು ಜವರಪ್ಪ ರವರನ್ನು ನೇಮಿಸಲಾಯಿತು.

ಸ್ವಾಗತ ಸಮಿತಿಯ ಸದಸ್ಯರುಗಳಾಗಿ ಎಚ್. ಬಿ. ಶಿವಕುಮಾರ್, ಬಿ.ಬಿ. ಸತೀಶ್, ಗೌರಮ್ಮ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು, ಹನುಮಂತಪ್ಪ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಮಿತಿಯ ಯೋಜಾನಾಧಿಕಾರಿ, ವಿಜಯಲಕ್ಷ್ಮಿ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಎಲ್ಲಾ ಉಪಸಮಿತಿಗಳ ಅಧ್ಯಕ್ಷರುಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ವಿಶೇಷ ಆಹ್ವಾನಿತರಾಗಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಅಭಿಯಂತರ, ಜಿಲ್ಲಾ ಪಂಚಾಯಿತಿ ಅಭಿಯಂತರ, ಸಿ.ಡಿ.ಪಿ.ಓ. ಎ.ಪಿ.ಎಂ.ಸಿ ಕಾರ್ಯದರ್ಶಿ, ತಾಲೂಕು ಶಿಕ್ಷಕರ ಸಂಘಗಳ ಅಧ್ಯಕ್ಷ, ತಾಲೂಕು ನೌಕರರ ಸಂಘದ ಅಧ್ಯಕ್ಷ, ಆರ್‌.ಎಫ್‌.ಒ ಅರಣ್ಯ ಇಲಾಖೆ, ಟಾಟಾ ಕಾಫಿ ಎಸ್ಟೇಟ್ ಮ್ಯಾನೇಜರ್ ಎಂ..ಟಿ. ದಾಮೋದರ್, ಗರಗಂದೂರು,ನಂದಾ ಬೆಳ್ಳಿಯಪ್ಪ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಬಿ. ಜಯಮ್ಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ. ಡಿ.ಎಸ್. ಪೊನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ. ಪೂವಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ಶಾರದಾ ಮಂದಣ್ಣ, ಆನಂದ ಪೂಜಾರಿ, ಧರ್ಮಾಧಿಕಾರಿಗಳು, ಕ್ರೈಸ್ತ ದೇವಾಲಯ, ಅಧ್ಯಕ್ಷರು ಜುಮ್ಮಾ ಮಸೀದಿ. ಎಂ.ಎಲ್. ನಾಗೇಶ್, ಮೂಲೆ ಮಜಲು ಕಾಳಪ್ಪ, ಭರತ್ ಕುಮಾರ್, ಎಸ್.ಎಂ ಚಂಗಪ್ಪ, ಡಿ ಎಸ್ ಚೆಂಗಪ್ಪ, ಅನಿತಾ ಮಾಧವ ಇರುತ್ತಾರೆ.

ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷರಾಗಿ ಕಾಳೇರಮ್ಮನ ಪಿ. ರಾಯ್, ಸಂಚಾಲಕರಾಗಿ ಎಂ. ಮನೋಜ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಡಿ. ಬೆಳ್ಳಿಯಪ್ಪ. ಸಮಿತಿ ನಿರ್ದೇಶಕರಾಗಿ ಕೆ.ಪಿ ರೋಷನ್, ಪ್ರಮೋದ್ ಬಿ.ಎಸ್, ಯೋಗೇಶ್ ಎಸ್.ಎನ್. ಆಹಾರ ಸಮಿತಿ ಅಧ್ಯಕ್ಷರಾಗಿ ಮಚ್ಚಂಡ ಎನ್. ಅಶೋಕ್, ಸಂಚಾಲಕರಾಗಿ ಬಿ.ಬಿ. ಭರತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಬೀತ ಡಿ.ಸಿ ಅವರನ್ನು ನಿಯೋಜಿಸಿರುವುದಾಗಿ ಹೇಳಿದರು.

ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸಿ.ಕೆ. ರೋಹಿತ್, ಸಂಚಾಲಕರಾಗಿ ವಿಶ್ವನಾಥ್ ರಾಜೆ ಅರಸ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ ಮುತ್ತಪ್ಪ , ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಡಿ.ಎಸ್. ಚಂಗಪ್ಪ, ಸಂಚಾಲಕರಾಗಿ ಎಸ್‌.ಪಿ. ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ ಎಚ್.ಎಮ್, ಅಲಂಕಾರ ಮತ್ತು ದ್ವಾರ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ದಿನೇಶ್, ಸಂಚಾಲಕರಾಗಿ ಎಂ.ಪಿ. ಮೇಘನ್, ಪ್ರಧಾನ ಕಾರ್ಯದರ್ಶಿಯಾಗಿ ಅನಿತಾ ಮಾಧವ್ ಮತ್ತು ಅನಿತಾ ರಮಾನಂದ.

ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಕಡ್ಲೇರ ಆರ್. ಹೊನ್ನಪ್ಪ, ಸಂಚಾಲಕರಾಗಿ ಬಿ.ಎಸ್. ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್. ಬಿ ಮತ್ತು ಕೆ. ಆರ್. ಜ್ಯೋತಿ ಅರುಣ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಹೆಚ್‌.ಕೆ. ಉಮೇಶ್ ಕುಮಾರ್, ಸಂಚಾಲಕರಾಗಿ ಯಶ್ವಂತ್ ಕುಮಾರ್ ಮತ್ತು ಅಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ವಿಜು ತೋಳೂರು ಶೆಟ್ಟಳ್ಳಿ ಮತ್ತು ಅನುಸೂಯ ಸಿ. ಇ. ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುರುಳಿಧರ್ ಎಸ್.ಎ. ಸಂಚಾಲಕರಾಗಿ ಸುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಿರೀಕರ ರವಿ.

ಈ ಸುದ್ದಿ ಓದಿದ್ದೀರಾ? ಪಿರಿಯಾಪಟ್ಟಣ | ಸಾಲಬಾಧೆಗೆ ರೈತ ಅಸಹಜ ಸಾವು

ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಪೂಪತಿ, ಸಂಚಾಲಕರಾಗಿ ಪೂರ್ಣಿಮಾ, ಪ್ರಧಾನ ಕಾರ್ಯದರ್ಶಿಯಾಗಿ ಆಶಾ ಕಾರ್ಯಕರ್ತೆಯರಾದ ಅಮೋದ ಮತ್ತು ಇಂದಿರಾ ಸ್ಮರಣ ಸಂಚಿಕೆಯ ಅಧ್ಯಕ್ಷರಾಗಿ ಎಸ್‌.ಡಿ. ವಿಜೇತ್, ಪ್ರಧಾನ ಸಂಪಾದಕರಾಗಿ ಎಸ್.ಎಂ. ಚಂಗಪ್ಪ, ಉಪ ಸಂಪಾದಕರುಗಳಾಗಿ ಪಿ.ಕೆ. ಸೋಮಯ್ಯ, ಕಾಜೂರು ಸತೀಶ್, ಐಗೂರು ಮೋಹನ್ ದಾಸ್, ಹೇಮಂತ್ ಪಾರೇರ, ನಂಗಾರು ಕೀರ್ತಿ ಪ್ರಸಾದ್, ಕೆ.ಆರ್. ಜ್ಯೋತಿ ಅರುಣ್, ಎಂ.ಟಿ. ಸರಳ ಕುಮಾರಿ ಮಹೇಶ್ ತಿಮ್ಮಯ್ಯ
ಇವರುಗಳೊಂದಿಗೆ ಐಗೂರು ಗ್ರಾಮ ಪಂಚಾಯಿತಿ ಮತ್ತು ಸುತ್ತು ಮುತ್ತಲು ಪಂಚಾಯಿತಿಗಳ ಗೌರವಾನ್ವಿತ ಸದಸ್ಯರುಗಳು, ಸಹಕಾರ ಸಂಘಗಳ ಸದಸ್ಯರುಗಳು, ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷರುಗಳು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರು, ಸೋಮವಾರಪೇಟೆ ತಾಲೂಕು ಹೋಬಳಿ ಕಾರ್ಯಕಾರಿ ಮಂಡಳಿ ಸದಸ್ಯರುಗಳನ್ನು ಎಲ್ಲಾ ಸಮಿತಿಗಳಲ್ಲೂ ಸೇರಿಸಿಕೊಂಡು ಎಲ್ಲರನ್ನೊಳಗೊಂಡ ಸಮಿತಿ ನಿರ್ಮಿಸುವಂತೆ ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಡಿ. ವಿಜೇತ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸಂಘಟನಾ ಕಾರ್ಯದರ್ಶಿ ವಾಸು ರೈ, ತಾಲೂಕು ಗೌರವ ಕಾರ್ಯದರ್ಶಿ ವಿ.ಎ. ವೀರರಾಜ್, ಅರುಣ್, ಕೋಶಾಧ್ಯಕ್ಷ ಕೆ.ಪಿ. ದಿನೇಶ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ. ಎಸ್. ನಾಗರಾಜ್, ಗ್ರಾಮ ಪಂಚಾಯಿತಿಯ ಪಿಡಿಒ ಪೂರ್ಣ ಕುಮಾರ್ ಟಿ.ಸಿ. ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...