ಕೋಲಾರ: ತಾಲೂಕಿನ ಟಮಕ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹಾಗೂ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಬೆಂಬಲಿಗರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಒಟ್ಟು 12 ನಿರ್ದೇಶಕರ ಸ್ಥಾನಗಳಲ್ಲಿ 10 ಸ್ಥಾನಕ್ಕೆ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಉಳಿದ 9 ನಿರ್ದೇಶಕರಲ್ಲಿ 7 ನಿರ್ದೇಶಕರು ಗೆಲುವು ಸಾಧಿಸುವ ಮೂಲಕ ಸಿಎಂಆರ್ ಶ್ರೀನಾಥ್ ಮತ್ತು ಸೀಸಂದ್ರ ಗೋಪಾಲಗೌಡ ಬೆಂಬಲಿಗ 8 ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನದಿಂದ ಬಿ.ಕೃಷ್ಣಪ್ಪ, ವಿ.ವೆಂಕಟರಾಜು, ಕೆ.ಶಿವಣ್ಣ, ಎ.ವೆಂಕಟೇಶ್ ಹಿಂದುಳಿದ ವರ್ಗ ಬಿ ವರ್ಗದಿಂದ ಎಂ.ರಮೇಶ್, ಮಹಿಳಾ ಮೀಸಲಾತಿಯಲ್ಲಿ ಲಕ್ಷ್ಮೀದೇವಮ್ಮ, ಭಾಗ್ಯಮ್ಮ, ಚುನಾವಣೆ ಮೂಲಕ ಆಯ್ಕೆಯಾದರೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವೆಂಕಟೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಎರಡು ಸ್ಥಾನಗಳಲ್ಲಿ ಸಾಮಾನ್ಯ ಸ್ಥಾನದಲ್ಲಿ ನಾಗೇಶ್ ಮತ್ತು ಆರ್.ವೆಂಕಟೇಶ್ ವಿರೋಧಿ ಬಣದಿಂದ ಗೆಲುವು ಸಾಧಿಸಿದರು.
ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗದ ಎ ಮೀಸಲು ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಎರಡು ಸ್ಥಾನಗಳು ಖಾಲಿ ಉಳಿದಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಬಾಬು ಘೋಷಣೆ ಮಾಡಿದರು.
ಫಲಿತಾಂಶದ ನಂತರ ಸಿಎಂಆರ್ ಶ್ರೀನಾಥ್ ಮತ್ತು ಸೀಸಂದ್ರ ಗೋಪಾಲಗೌಡ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ಡಾಬಾ ಶಂಕರ್ ಮಾತನಾಡಿ ನೂತನ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಹಿತ ಕಾಪಾಡುವ ಜೊತೆಗೆ ಸರ್ಕಾರದಿಂದ ಮತ್ತು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಉತ್ಪಾದಕರಿಗೆ ನೇರವಾಗಿ ನೀಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಇದನ್ನು ಓದಿದ್ದೀರಾ..? ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀರಾಮ್, ಹರೀಶ್, ಸಿ.ನಾರಾಯಣಸ್ವಾಮಿ, ಶ್ರೀನಿವಾಸ್, ವೆಂಕಟೇಶ್, ಪ್ರಕಾಶ್, ಮಂಜುನಾಥ್, ರಾಮರೆಡ್ಡಿ, ಎಂ.ರಾಜು, ಸೀಸಂದ್ರ ನಂದೀಶ್,ಸಂತೋಷ್ ಪಚ್ಚಿ, ರಂಜಿತ್, ವಿನಯ್, ವಿಜಯಕುಮಾರ್, ನಾಗರಾಜಪ್ಪ, ವೆಂಕಟರಾಜು, ರವಿ ಯಲ್ಲಪ್ಪ, ರಾಕಿ, ಪ್ರದೀಪ್, ಸತೀಶ್, ಯಶು, ಚಿಟ್ಟಿ, ಸೇರಿದಂತೆ ಬೆಂಬಲಿಗರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.





