ಮನೆ ಅಂಗಳದಲ್ಲಿದ್ದ ನಾಯಿಯನ್ನು ಚಿರತೆ ಭೀಕರವಾಗಿ ಒತ್ತಾಯ್ದ ಘಟನೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಜಾತ್ರೆ ಮೈದಾನ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಫೋಟೋ ಬಸವರಾಜ್ ಎಂಬುವವರ ಮನೆಯ ಅಂಗಳದಲ್ಲಿದ್ದ ನಾಯಿಯನ್ನು ಪ್ರಾಣ ಬಿಡುವವರೆಗೂ ಹಿಡಿದು ನಂತರ ಸತ್ತ ನಾಯಿಯನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಸರಾಗವಾಗಿ ಅಲ್ಲಿಂದ ಎಳೆದೊಯ್ದ ಘಟನೆ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹೊಸ ವರ್ಷಾಚರಣೆ; ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ
ಅಡಿಕೆ ಬೆಳೆಗಾರರು ತಮ್ಮ ತೋಟದ ಉತ್ಪನ್ನಗಳನ್ನು ಒಣಹಾಕಲು ಬಯಲು ಪ್ರದೇಶವನ್ನು ಬಳಸುತ್ತಾರೆ. ಅದರಂತೆ ಬಸವರಾಜ್ ಅವರು ತಮ್ಮ ಅಂಗಳದಲ್ಲಿ ಅಡಿಕೆ ಒಣಹಾಕಿದ್ದು, ಅದಕ್ಕೆ ಕಾವಲು ಕಾಯಲೆಂದು ಸಾಕು ನಾಯಿಯನ್ನು ಬಿಟ್ಟಿದ್ದರು. ರಾತ್ರಿಯ ನಿಶಬ್ದ ವಾತಾವರಣದಲ್ಲಿ ನಾಯಿಯು ಗಾಢ ನಿದ್ರೆಯಲ್ಲಿದ್ದಾಗ, ಚಿರತೆ ದಾಳಿ ಮಾಡಿದೆ. ಈ ಘಟನೆ ಕುರಿತು ಸುತ್ತಮುತ್ತ ಜನರು ಭಯ ಭೀತರಾಗಿದ್ದಾರೆ.





