12ನೇ ಶತಮಾನದಲ್ಲಿ ಶುದ್ಧ ಚಿತ್ತ ಕಾಯಕದಿಂದಾಗಿ ಶರಣ ಮಡಿವಾಳ ಮಾಚಿದೇವರು ಶ್ರೇಷ್ಠ ಶರಣ ಎನಿಸಿದ್ದಾರೆ ಎಂದು ಪುರಸಭೆ ಸದಸ್ಯೆ ದಿವ್ಯಾ ರವಿ ಹೇಳಿದರು.ಅವರು ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತು, ಮಡಿವಾಳ ಸಮಾಜದ ವತಿಯಿಂದ ನಡೆದ ಶರಣ ಮಡಿವಾಳ ಮಾಚಿದೇವ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕ ಚೇತನ್ ಗೌಡ ಉಪನ್ಯಾಸ ನೀಡಿ ವೀರ ಗಣಾಧಾರಿ ವಚನ ಸಂರಕ್ಷಕ 12ನೇ ಶತಮಾನದ ಮಹಾನ್ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಮನೆ ಮನೆಗಳಲ್ಲಿ ಮನ ಮನಗಳಲ್ಲಿ ವಚನ ಸಾಹಿತ್ಯದ ಸುದೆಯನ್ನು ಮನಮನಗಳಲ್ಲಿ ಶರಣರ ವಿಚಾರಗಳನ್ನು ಪ್ರಚಾರ ಮಾಡುವ ಕೈಂಕರ್ಯದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದದ್ದು ಎಂದು ಹೇಳಿದರು
12ನೇ ಶತಮಾನದ ಅನುಭವ ಮಂಟಪದ ಯಾವುದೇ ಹೊಸ ಸದಸ್ಯರನ್ನು ಅನುಭವ ಮಂಟಪಕ್ಕೆ ಪರೀಕ್ಷೆಗ ಒಳಪಡಿಸಿ ಆಯ್ಕೆ ಮಾಡುವ ಕಾಯಕವನ್ನು ಮಾಡುತ್ತಿದ್ದ ಮಡಿವಾಳ ಮಾಚಿದೇವರು ಶರಣರ ತೊಡುಗೆಗಳನ್ನು ನಿಷ್ಕಲ್ಮಶ ಮನದಿಂದ ಪೂಜ್ಯ ಕಾಯಕವೆಂದು ನಂಬಿ ಸ್ವಚ್ಛಗೊಳಿಸುತ್ತಿದ್ದರು. ಮಡಿವಾಳ ಸಮಾಜದ ಅಧ್ಯಕ್ಷ ಚಂದ್ರಶೇಖರ ಮಾತನಾಡಿ ಸಮಾಜವು ಆಥಿ೯ಕವಾಗಿ, ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಮಾಚಿದೇವರ ಬದುಕು ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ ಮಡಿವಾಳ ಮಾಚಿದೇವ ಇಲ್ಲದೆ ಅನುಭವ ಮಂಟಪ ವಿರಲಿಲ್ಲ, ವಚನಗಳ ರಕ್ಷಣೆಯಲ್ಲಿ ಮಾಚಿದೇವ ಶ್ರಮವನ್ನು ಶರಣ ಚಳುವಳಿ ಮರೆಯಲು ಸಾಧ್ಯವಿಲ್ಲ ಮಡಿವಾಳ ಸಮಾಜದ ಅನ್ಯೋನ್ಯತೆ ಪ್ರಶಂಸನೀಯ ಎಂದರು. ಶರಣ ಸಾಹಿತ್ಯ ಪರಿಷತ್ತು ಕಾಯ೯ದಶಿ೯ ಟಿ. ಎಸ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಶರಣರ ಸ್ಮರಣೆಯ ಪ್ರಸ್ತುತತೆಯನ್ನು ಹೇಳಿದರು.
ಈ ವೇಳೆ ಪರಿಷತ್ತಿನ ಕಾರ್ಯದರ್ಶಿ ಟಿ. ಜಿ. ಸದಾನಂದ,
ಶಿಕ್ಷಕ ಕಲ್ಲೇಶ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು





