ಉಡುಪಿ | ಸಮಾಜಮುಖಿ ಕಾರ್ಯದಲ್ಲಿ ಟೀಮ್ ಮಲೆನಾಡು: 53 ಕುಟುಂಬಗಳಿಗೆ ಸಹಾಯಹಸ್ತ

Date:

ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ (ರಿ), ಬೆಳ್ವೆ ವತಿಯಿಂದ ಗ್ರಾಮೀಣ ಪ್ರದೇಶದ ಅರ್ಹ 53 ಕುಟುಂಬಗಳಿಗೆ ‘ರಂಝಾನ್ ಕಿಟ್–2026’ ವಿತರಣಾ ಕಾರ್ಯಕ್ರಮ ಇಂದು ಬೆಳ್ವೆಯ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನೆರವೇರಿತು.

ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರು ಸಾಹೇಬ್ ಹಾಗೂ ಟ್ರಸ್ಟಿ ಮತ್ತು ನಮ್ಮ ನಾಡ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಹಾರೂನ್ ರಶೀದ್ ಸಾಸ್ತಾನ ಜಂಟಿಯಾಗಿ ಉದ್ಘಾಟಿಸಿದರು.

1009656011

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾಮಿಯಾ ಉಲ್ ಉಲೇಮಾ ಉಡುಪಿ ಜಿಲ್ಲಾ ಅಧ್ಯಕ್ಷ ಹಾಗೂ ಟ್ರಸ್ಟಿ ಮೌಲಾನಾ ಜಮೀರ್ ಅಹ್ಮದ್ ರಷಾದಿ ಪ್ರಾಸ್ತಾವಿಕವಾಗಿ ಮಾತನಾಡಿ, ರಂಝಾನ್ ತಿಂಗಳ ಪವಿತ್ರತೆಯನ್ನು ವಿವರಿಸಿ ದಾನಧರ್ಮ, ಸಹಕಾರ ಹಾಗೂ ಸಹಬಾಳ್ವೆಯ ಅಗತ್ಯತೆಯನ್ನು ಒತ್ತಿಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ದಿನ.ಕಾಮ್ ಜೊತೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, “ಕಳೆದ ಮೂರು ವರ್ಷಗಳಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್‌ಗಳನ್ನು ವಿತರಿಸುತ್ತಾ ಬಂದಿದ್ದೇವೆ. ಈ ಬಾರಿಯೂ 53 ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ನೀಡಲಾಗಿದೆ. ಗ್ರಾಮೀಣ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಟ್ರಸ್ಟ್ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ” ಎಂದು ತಿಳಿಸಿದರು.

1009656016 1

ಕಾರ್ಯಕ್ರಮದಲ್ಲಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ, ಸ್ಥಳೀಯ ಮುಖಂಡ ಅಬ್ದುಲ್ ಖಾದರ್ ಅಲ್ಬಾಡಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ, ಕೋಶಾಧಿಕಾರಿ ಮೊಹಮ್ಮದ್ ಆಸಿಫ್ ಅಲ್ಬಾಡಿ ವಿಶೇಷ ಸಹಕಾರ ನೀಡಿದರು. ಟ್ರಸ್ಟಿ ಮೊಹಮ್ಮದ್ ರೇಯನ್ ಕಾರ್ಯಕ್ರಮ ನಿರೂಪಿಸಿದರು, ಟ್ರಸ್ಟಿ ಅರಾಫತ್ ಅಲ್ಬಾಡಿ ಸ್ವಾಗತಿಸಿದರು. ಬೆಳ್ವೆ ಜುಮ್ಮಾ ಮಸೀದಿಯ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಕುರ್‌ಆನ್ ಪಠಿಸಿ ದುಆ ಮಾಡಿದರು. ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಂದಿಸಿದರು.

ಈ ಸಂದರ್ಭದಲ್ಲಿ ಅನ್ವರ್ ಕಂಡ್ಲೂರ್, ಸರ್ಫರಾಜ್ ಕುವೈಟ್, ಆಸೀರ್ ಬೆಂಗಳೂರು, ಇಲ್ಯಾಸ್ ಬೆಳ್ವೆ, ನಝೀರ್ ಶಾ, ಅಬ್ದುಲ್ ಸಮಿ ಬೈಂದೂರು, ಅನ್ಸಾರ್ ಹೊಸಂಗಡಿ, ಅಲ್ತಾಫ್ ಫಾಲ್ಕನ್ ಲಾಜಿಸ್ಟಿಕ್ಸ್ ಬೆಂಗಳೂರು, ಇಸ್ಮಾಯಿಲ್ ಸಾಹೇಬ್ ಶಿರೂರು, ಪರ್ವೇಜ್ ಅಲ್ಬಾಡಿ, ಶರೀಫ್ ಸಾಹೇಬ್ ಬೆಳ್ವೆ, ಶಾಕಿರ್, ಶಾಬಾಜ್, ಹನೀಫ್ ಬೆಳ್ವೆ, ಹನೀಫ್ ಟಿಕೆ ರೋಡ್ ದುಬೈ, ಇರ್ಷಾದ್ ಅಲ್ಬಾಡಿ, ನವಾಜ್ ಅಲ್ಬಾಡಿ, ಫಾಝಿಲ್ ಆದಿ ಉಡುಪಿ, ರಫೀಕ್ ಗಂಗೊಳ್ಳಿ, ಶಬ್ಬುದೀನ್ ಶಿವಮೊಗ್ಗ, ಶಬ್ಬೀರ್ ಸಾಹೇಬ್ ಬೆಳ್ವೆ, ಸೈಯದ್, ಇರ್ಷಾದ್, ಸಾಧಿಕ್ ಅಲ್ಬಾಡಿ ಸೇರಿದಂತೆ ಹಲವರು ಸಹಕರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...