ಮಂಡ್ಯದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ನಡೆದ ಎಸ್ಐಆರ್ ಕುರಿತ ತರಬೇತಿ ಶಿಬಿರದಲ್ಲಿ ಮಾತನಾಡಿದ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ‘ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಗೊಂದಲಗಳಿದ್ದು, ಎನ್ಯೂಮರೇಷನ್ ಹಂತಕ್ಕೆ ಪೂರ್ವ ಸಿದ್ಧತೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಉಳಿಯುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯ ವಿಷಯವಲ್ಲ; ಅದು ಸಂವಿಧಾನಿಕ ಮತದಾನದ ಹಕ್ಕಿನ ಪ್ರಶ್ನೆಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಹಲವೆಡೆ ತಾಂತ್ರಿಕ ದೋಷಗಳು, ಮಾಹಿತಿಯ ಹೊಂದಾಣಿಕೆಯ ಸಮಸ್ಯೆಗಳು ಹಾಗೂ ನೆಲಮಟ್ಟದಲ್ಲಿ ಸ್ಪಷ್ಟ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿದೆ. ಇನ್ನೂ ಎನ್ಯೂಮರೇಷನ್ ಫಾರ್ಮ್‌ಗಳ ಭರ್ತಿ ಮತ್ತು ದಾಖಲೆ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿಲ್ಲ. ಆದರೆ, ಮುಂದಿನ ಹಂತದಲ್ಲಿ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಪೂರ್ವ ಸಿದ್ಧತೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕೇವಲ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಮತದಾರರ ಹೆಸರು ಸಂಪೂರ್ಣವಾಗಿ ಸುರಕ್ಷಿತವಾಗುವುದಿಲ್ಲ. ಎನ್ಯೂಮರೇಷನ್ ಹಂತ ಆರಂಭವಾದಾಗ ಫಾರ್ಮ್‌ಗಳ ಸರಿಯಾದ ಭರ್ತಿ, ಅಗತ್ಯ ದಾಖಲೆಗಳ ಸಿದ್ಧತೆ ಹಾಗೂ ತಾಂತ್ರಿಕ ತಿಳುವಳಿಕೆ ಬಹುಮುಖ್ಯವಾಗಿರುತ್ತದೆ. ಆದ್ದರಿಂದ, ಕಾರ್ಯಕರ್ತರು ಮತ್ತು ಸಾರ್ವಜನಿಕರು ಈಗಿನಿಂದಲೇ ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯನಿರತ ಎಸ್‌ಡಿಪಿಐ ವಾಲಂಟಿಯರ್‌ಗಳು ಮತ್ತು ಬೂತ್ ಲೆವೆಲ್ ಸಹಾಯಕರು (ಬಿಎಲ್ಓ)ಗಳಿಗೆ ವಿಡಿಯೋ ಹಾಗೂ ಪಿಪಿಟಿ ಆಧಾರಿತ ಪೂರ್ವಭಾವಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಅಕ್ಕಿಹೆಬ್ಬಾಳು ಶಾಲೆ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಶಿಕ್ಷಣ ಸಚಿವರಿಗೆ ದೂರು
ಕಾರ್ಯಾಗಾರದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಮುಕ್ತಿಯಾರ್, ಮುಬಾರಕ್, ಅಫ್ರೋಜ್ ಸೇರಿದಂತೆ ಇನ್ನಿತರರು ಇದ್ದರು.





