ಮೈಸೂರಿನ ಸಿ ಎಫ್ ಟಿ ಆರ್ ಐ ನ ಚೆಲುವಾಂಬ ಸಭಾಂಗಣದಲ್ಲಿ ‘ಸಂವಿಧಾನ ದಿನಾಚರಣೆ’ಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ‘ರಾಷ್ಟ್ರದ ಆಡಳಿತ ವ್ಯವಸ್ಥೆಯ ನಿಯಮಗಳ ಕೃತಿಯೇ ಸಂವಿಧಾನ’ ಎಂದರು.
ಭಾರತೀಯ ಸೇನೆಗೆ ಕೆಲಸಕ್ಕೆ ಸೇರಿದಾಗ ಭಾರತದ ಸಂವಿಧಾನದಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೆವು. ಸಂವಿಧಾನ ಆರಂಭದಲ್ಲಿಯೇ ನಾವೆಲ್ಲರೂ ಭಾರತೀಯರು ಎನ್ನುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಅಂಶವನ್ನು ಸಂವಿಧಾನ ಒಳಗೊಂಡಿದೆ.
“ಸಂವಿಧಾನ ರಚನಾ ಸಭೆಯಲ್ಲಿದ್ದ ಏಳು ಮಂದಿ ಸದಸ್ಯರು ಅಂಬೇಡ್ಕರ್ ಅವರನ್ನು ಅಧ್ಯಕ್ಷರಾಗಿ ಒಪ್ಪಿಕೊಳ್ಳುತ್ತಾರೆ. ಎರಡು ಸಾವಿರಕ್ಕೂ ಹೆಚ್ಚು ಬಾರಿ ಚರ್ಚಿಸಿ ಸಂವಿಧಾನ ಕರಡು ಪ್ರತಿಯನ್ನು ರಚನೆ ಮಾಡಲಾಯಿತು. ಸಂವಿಧಾನ ಮೂರು ಹಂತದ ಕಟ್ಟಡವಾಗಿದೆ. ಅದರಲ್ಲಿ, ಮೊದಲ ಮಹಡಿ ನ್ಯಾಯವಾದರೆ, ಎರಡನೇ ಮಹಡಿ ಸಮಾನತೆ, ಮೂರನೇ ಮಹಡಿ ಸಹೋದರತ್ವದ ಮೇಲೆ ನಿಂತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನದ ಮೇಲಿನ ದಾಳಿಗೆ ಅವಕಾಶ ನೀಡಲ್ಲ: ರಾಹುಲ್ ಗಾಂಧಿ
ಕಾರ್ಯಕ್ರಮದಲ್ಲಿ ಆಶಾ ಒಂಬತ್ಕೆರೆ, ಸಿ ಎಫ್ ಟಿ ಆರ್ ನ ನಿರ್ದೇಶಕ ಡಾ. ಗಿರಿಧರ್ ಪರ್ವತಂ, ಎಸ್ಸಿ-ಎಸ್ಟಿ ಅಸೋಸಿಯೇಷನ್ ಅಧ್ಯಕ್ಷ ಶಿವಸ್ವಾಮಿ, ಆಡಳಿತ ವಿಭಾಗದ ಕೆ. ರವಿಕುಮಾರ್ ಇದ್ದರು.





