ಅಕಾಲಿಕ ಮಳೆಗೆ ಮುಳುಗಿತು ಬೆಳೆ: ಬಾಡಿತು ರೈತರ ಬದುಕು, ನೆರವು ನೀಡುವುದೇ ಸರ್ಕಾರ?

Date:

ಈವರೆಗೆ ಕಲಬುರಗಿ ಜಿಲ್ಲೆಯ ರೈತರ ಪರಿಸ್ಥಿತಿ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸಲಿಲ್ಲವೆಂಬುದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ಮರೆತಿರುವುದನ್ನು ತೋರಿಸುತ್ತಿದೆ. ಯಾವುದೇ ರೈತ ಕೂಡ ಯಾವುದೇ ಬೆಳೆಗಳಲ್ಲಿ ಸಮಕ್ಷಮ ಕಾಣಲಿಲ್ಲ. ಸರ್ಕಾರ ಮತ್ತು ಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. 

ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ರೈತರು ಸರಿಯಾದ ಸಮಯಕ್ಕೆ ಮಳೆ ಬಂದಿದ್ದರಿಂದ ಅನ್ನದಾತರು ಖುಷಿ ಪಟ್ಟಿದ್ದರು. ಸರಿಯಾದ ಸಮಯಕ್ಕೆ ಮುಂಗಾರು ಬಿತ್ತನೆ ಮಾಡಿದ ರೈತರು ಈ ವರ್ಷದ ರೊಕ್ಕದ ಮಾಲುಗಳಾದ ಉದ್ದು, ಹೆಸರಿನಂತಹ ಬಂಪರ್ ಬೆಳೆಗಳು ಬೆಳೆದು ನಿಂತವು. ಈ ವರ್ಷ ರೈತರು ನಿಟ್ಟುಸಿರು ಬಿಟ್ಟಂತಾಗಿತ್ತು. ಮೊನ್ನೆ 4 ಹಗಲು 3 ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಹೊಲದಲ್ಲಿದ್ದ, ಉದ್ದು, ಹೆಸರು ಮೊಳಕೆಯೊಡೆದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದೀಗ ರೈತರು ನೆಲಕ್ಕೆ ಹಾಸಿಗೆ ಹಾಕಿದ್ದಾರೆ, ರೈತರ ನೆರವಿಗೆ ರಾಜ್ಯ ಸರ್ಕಾರ ಬರಬೇಕೆಂದು ರೈತ ಸಂಘ ಒತ್ತಾಯಿಸುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 606884 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ, 28,655 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ, 55,444 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, ಬೆಳೆಗಳ ಮೇಲೆ ನಂಬಿಕೆ ಇಟ್ಟುಕೊಂಡು ಕುಳಿತಿದ್ದ ರೈತರಿಗೆ, ಏಕಾಏಕಿ ಸುರಿದ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೆಸರು ಬೆಳೆ ಇನ್ನೂ ಕನಿಷ್ಠ ಶೇ.30ರಷ್ಟು ಬೆಳೆ ಹೊಲದಲ್ಲಿಯೇ ಇದ್ದು, ಮಳೆ ನೀರಿನಲ್ಲಿ ನೆನೆದು ಗಿಡದಲ್ಲಿನ ಹೆಸರು ಕಾಳು ಮೊಳಕೆಯೊಡೆದಿದೆ. ಉದ್ದು ಸಂಪೂರ್ಣ ರಾಶಿಯೇ ಆಗಿಲ್ಲ, ಇನ್ನೂ ಹೊಲದಲ್ಲಿಯೇ ಇದೆ ಮತ್ತು ತೊಗರಿ ಬೆಳೆಯಲ್ಲಿಯೂ ಕೂಡ ಉದ್ದುವನ್ನು ಮಿಶ್ರ ಬೆಳೆಯನ್ನಾಗಿ ಬಿತ್ತನೆ ಮಾಡಿದ್ದಾರೆ. ಶೇ.10ರಷ್ಟು ಮಾತ್ರ ಉದ್ದು ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಿದ್ದಾರೆ. ಇನ್ನೂ ಶೇ.90ರಷ್ಟು ಉದ್ದು ಗಿಡದಲ್ಲಿ ಮೊಳಕೆಯೊಡೆದು ಹಾಳಾಗಿ ಹೋಗಿದೆ. ಮೊಳಕೆಯೊಡೆದ ಹೆಸರು ಮತ್ತು ಉದ್ದುವನ್ನು ಹೊಲದಲ್ಲೇ ಬಿಡುವಂತಿಲ್ಲ. ಕೊಯ್ದು ರಾಶಿ ಮಾಡಿ ಮನೆಗೆ ತಂದ ಮೇಲೆ ಅದಕ್ಕೆ ಬೆಲೆ ಸಿಗುವುದಿಲ್ಲ. ಲಾಗೋಡಿ (ಬೆಳೆಯ ಮೇಲಿನ ಖರ್ಚು) ರೈತರಿಗೆ ಸಾಲ ಭಾರವಾಗುತ್ತದೆ. ಹೀಗಾಗಿ ಈ ವರ್ಷ ಸಂಪೂರ್ಣ ಬೆಳೆನಷ್ಟವಾಗಿದೆ. ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರು ಮುಖಕ್ಕೆ ಟವೆಲ್ ಹಾಕಿಕೊಂಡು ಗೋಳಾಡುತ್ತಿದ್ದು, ರೈತರು ಹತಾಶರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತೊಗರಿಯ ನಾಡಿನಲ್ಲಿ ಈ ವರ್ಷ ತೊಗರಿ ಬೆಳೆ ಹಳ್ಳದ ಹೊಲಗಳು, ತೆಗ್ಗಿನ ಹೊಲಗಳು, ನಾಲದ ಹೊಲಗಳು, ಕೆರೆ ನದಿ ದಂಡೆಯಲ್ಲಿರುವ ಹೊಲಗಳು, ಮೆನ್ ಕ್ಯಾನಲ್ ಮರಿಗಾಲುವೆ ಪಕ್ಕದಲ್ಲಿರುವ ಹೊಲಗಳಲ್ಲಿ ಬೆಳೆದ ತೊಗರಿ ಹಳದಿ ಬಣ್ಣಕ್ಕೆ ತಿರುಗಿ ನೀರು ಜಾಸ್ತಿಯಾಗಿ ಹಾನಿಯುಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈವರೆಗೆ ಕಲಬುರಗಿ ಜಿಲ್ಲೆಯ ರೈತರ ಪರಿಸ್ಥಿತಿ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸಲಿಲ್ಲವೆಂಬುದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ಮರೆತಿರುವುದನ್ನು ತೋರಿಸುತ್ತಿದೆ. ಯಾವುದೇ ರೈತರೂ ಕೂಡ ಯಾವುದೇ ಬೆಳೆಗಳಲ್ಲಿ ಸಮಕ್ಷಮ ಕಾಣಲಿಲ್ಲ. ಸರ್ಕಾರ ಮತ್ತು ಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮಾತನಾಡುವಂತಾಗಿದೆ. ಹೀಗಾದರೆ ರೈತರ ಒಕ್ಕಲುತನದ ಗತಿ ಏನು? ಎಂದು ರೈತರು ಚಿಂತಾಜನಕರಾಗಿದ್ದಾರೆ. ಕಲಬುರಗಿ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಅತಿ ಮಳೆಯಿಂದ ಹಾನಿಯುಂಟಾದ ಬೆಳೆಸಮೀಕ್ಷೆ ನಡೆಸಿ ಪ್ರತಿ ಎಕರೆ ಬೆಳೆವಾರು ಉತ್ಪಾದನೆ ಆಧಾರದಲ್ಲಿ ಬೆಳೆಹಾನಿ ಅಂದಾಜಿಸಿ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು.

ಹತ್ತಿ ಬೆಳೆಗೆ ಬೆಂಬಲ ಬೆಲೆ

ಕಲಬುರಗಿ ಜಿಲ್ಲೆಯಾದ್ಯಂತ ನದಿ, ಕೆರೆ, ಹಳ್ಳಕೊಳ್ಳ ನಾಲ ನರಿ ರಸ್ತೆಗಳು ಹದಗೆಟ್ಟು ಹೋಗಿವೆ. ಡಾಂಬರು ರಸ್ತೆಗಳು ಕಿತ್ತುಹೋಗಿವೆ, ತಗ್ಗು ಗುಂಡಿಗಳು ಬಿದ್ದಿವೆ. ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಜನ ಜಾನುವಾರುಗಳು, ಜನರು ಓಡಾಡಲು ಬಾರದಂತಾಗಿವೆ. ಅದು ಎಷ್ಟೋ ಹಳ್ಳಿಗಳಲ್ಲಿ ಮನೆಗಳು ಬಿದ್ದಿವೆ, ಎಷ್ಟೋ ಹಳ್ಳಿಗಳಲ್ಲಿ ಮನೆಗಳಿಗೂ ಕೂಡ ನೀರು ಹೊಕ್ಕಿ ಸತ್ಯಾನಾಸ್ ಆಗಿವೆ. ಬಡವರ ಮನೆಗಳು ಬೀದಿಗೆ ಬಿದ್ದಿವೆ. ಸೂರು ಇಲ್ಲದೆ ಜನರು ಸಾರ್ವಜನಿಕರು ಪರದಾಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು, ಮನೆಗಳಲ್ಲಿ ಮಳೆ ನೀರು ಹುಕ್ಕಿರುವ ಕುಟುಂಬಸ್ಥರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ತೊಗರಿಯ ನಾಡಿನಲ್ಲಿ ತೊಗರಿ ಕಟಾವು ಮಾಡುವ ಮೊದಲೇ ಅಕ್ಟೋಬರ್ ತಿಂಗಳಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಲು ಜಿಲ್ಲಾಡಳಿತ, ಜಿಲ್ಲಾ ಟಾಸ್ಕ್ ಫೋರ್ಸ್ ಸಭೆ ನಡೆಸಿ ವರದಿ ಕಳುಹಿಸುವ ಬಗ್ಗೆ ಎಲ್ಲ ತರಹದ ಪೂರ್ವ ಸಿದ್ಧತೆ ಮಾಡುವುದು ಸೂಕ್ತವಾಗಿದೆ.

ಕಲಬುರಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್‌ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡರಿಂದಲೂ ಪಾರಾಗಿ ಬಂದರೂ ಕೂಡ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುವಂತಾಗಿದೆ.

ಸೆಪ್ಟೆಂಬರ್ 15-30ರ ನಡುವೆ, ಬಂಗಾಳದಲ್ಲಿ ರೂಪುಗೊಂಡ ಕಡಿಮೆ ಒತ್ತಡದಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 4-6 ದಿನಗಳ ಧಾರಾಕಾರ ಮಳೆ ಸುರಿದಿತ್ತು. ಇದರಿಂದಾಗಿ ತುಂಬಿ ಹರಿದ ಭೀಮಾ ನದಿಯ ಪ್ರದೇಶಗಳಲ್ಲಿ ನೀರು ತುಂಬಿ, ಎಲ್ಲ ಬೆಳೆಗಳೂ ನಾಶಗೊಂಡವು.

ಬಿತ್ತನೆಯಾಗಿದ್ದ ಮುಖ್ಯ ಬೆಳೆಗಳುಬಿತ್ತನೆಯಾದ ಪ್ರದೇಶ (ಹೆಕ್ಟೇರ್)ನಾಶ ಪ್ರಮಾಣದ ಮೌಲ್ಯ
ತೊಗರಿ595150595.15 ಕೋಟಿ ರೂಪಾಯಿ
ಹೆಸರು50,12150 ಕೋಟಿಯ 12 ಲಕ್ಷ ರೂಪಾಯಿ
ಉದ್ದು30,890 28 ಕೋಟಿಯ 96 ಲಕ್ಷದ 23 ಸಾವಿರ ರೂಪಾಯಿ
ಸೋಯಾ ಬೀನ್23,440 3 ಕೋಟಿಯ 18.5 ಲಕ್ಷ ರೂ.
ಹತ್ತಿಬೆಳೆ 98,550245 ಕೋಟಿಯ 27.5 ಲಕ್ಷ ರೂಪಾಯಿ

ಕಲಬುರಗಿ ಜಿಲ್ಲೆಯ ವಾಣಿಜ್ಯ ಬೆಳೆ ತೊಗರಿ

ತೊಗರಿ ಬಿತ್ತನೆ 595150 ಹೆಕ್ಟೇರ್-14,87,875 ಎಕರೆ ಭೂಮಿ-1487875 x 8000 ರೂ. ಒಂದು ಕ್ವಿಂಟಲ್ ತೊಗರಿಗೆ MSP ಪ್ರಕಾರ = ಒಟ್ಟು 14,87,875 ಪ್ರತಿ ಎಕರೆಗೆ ಸರಾಸರಿ 4 ಕ್ವಿಂಟಲ್ ತೊಗರಿ ಅಂದ್ರೆ ಒಟ್ಟು 59,51,500 ಕ್ವಿಂಟಲ್ ತೊಗರಿಗೆ ಒಟ್ಟು 1,190 ಕೋಟಿ 31 ಲಕ್ಷ -ಇದರ ಅರ್ಧದಷ್ಟು ಅಂದರೆ 595.15 ಕೋಟಿ ರೂಪಾಯಿ ಕಲಬುರಗಿ ಜಿಲ್ಲೆಯ ಒಂದೇ ಬೆಳೆಗೆ ಹಾನಿಯಾಗಿದೆ.

50,121 ಹೆಕ್ಟೇರ್ ಅಂದ್ರೆ 1,25,302 ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. 125302 x 8000 ಕ್ವಿಂಟಲ್‌ಗೆ MSP ಪ್ರಕಾರ ಒಟ್ಟು -ಸರಾಸರಿ 100 ಕೋಟಿ 27 ಲಕ್ಷ ರೂ. ಇದರ ಅರ್ಧದಷ್ಟು 50 ಕೋಟಿಯ 12 ಲಕ್ಷ ರೂಪಾಯಿ ಹಾನಿಯಾಗಿದೆ.

30,890 ಹೆಕ್ಟೇರ್ ಅಂದರೆ 77,225 ಎಕರೆ ಭೂಮಿಯಲ್ಲಿ ಉದ್ದು ಬಿತ್ತನೆ ಮಾಡಿದ್ದಾರೆ. 77225 x 7500 ಕ್ವಿಂಟಲ್‌ಗೆ ಒಟ್ಟು 57,91,87,500 ರೂ-ಇದರ ಅರ್ಧದಷ್ಟು 28 ಕೋಟಿಯ 96 ಲಕ್ಷದ 23 ಸಾವಿರ ರೂಪಾಯಿ ಹಾನಿಯಾಗಿದೆ.

ಇದನ್ನೂ ಓದಿದ್ದೀರಾ? ಗೋವಿನಜೋಳ ಬೆಳೆಗಾರರ ಕಥೆ… ವ್ಯಥೆ!

ಸೋಯಾ ಬೀನ್ 23,440 ಹೆಕ್ಟೇರ್ ಅಂದರೆ 58,600 ಎಕರೆ ಭೂಮಿಯಲ್ಲಿ ಬಿತ್ತನೆಯಾಗಿದೆ.
58600 x 4500 ರೂ MSP ಪ್ರಕಾರ 26 ಕೋಟಿಯ 37 ಲಕ್ಷ ಒಟ್ಟು ಇದರ ಅರ್ಧದಷ್ಟು 3 ಕೋಟಿಯ 18.5 ಲಕ್ಷ ಹಾನಿಯಾಗಿದೆ.

ಹತ್ತಿಬೆಳೆ 98,550 ಹೆಕ್ಟೇರ್ ಅಂದರೆ 2,46,375 ಎಕರೆ ಬಿತ್ತನೆಯಾಗಿದೆ 246375 x 4000 ರೂ MSP ಪ್ರಕಾರ 48 ಕೋಟಿಯ 55 ಲಕ್ಷ ಒಟ್ಟು ರೂ-ಇದರ ಅರ್ಧದಷ್ಟು 245 ಕೋಟಿಯ 27.5 ಲಕ್ಷ ರೂಪಾಯಿ ಮೌಲ್ಯದ ಬೆಳೆಹಾನಿಯಾಗಿದೆ. ಉಳಿದಿರುವ ಹತ್ತಿ ಬೆಳೆಗಾದರೂ ಸರ್ಕಾರ ಬೆಂಬಲ ಬೆಲೆ ನೀಡಿ ರೈತರನ್ನು ಉಳಿಸಬೇಕು. ಮುಂದಿನ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು.

IMG 20251129 WA0000
ಶರಣಬಸಪ್ಪ ಮಮಶೆಟ್ಟಿ
+ posts

ಸಾಮಾಜಿಕ ಹೋರಾಟಗಾರರು, ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಮುಖಂಡರು.

ಪೋಸ್ಟ್ ಹಂಚಿಕೊಳ್ಳಿ:

ಶರಣಬಸಪ್ಪ ಮಮಶೆಟ್ಟಿ
ಶರಣಬಸಪ್ಪ ಮಮಶೆಟ್ಟಿ
ಸಾಮಾಜಿಕ ಹೋರಾಟಗಾರರು, ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಮುಖಂಡರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...