ಬೀದರ್ | ಸತ್ಯ, ಅಹಿಂಸೆ, ಶಾಂತಿ ಸಂದೇಶಗಳು ಗಾಂಧಿ ತತ್ವದಲ್ಲಿ ಮಾನ್ಯತೆ ಪಡೆದಿವೆ: ಡಾ.ಭೀಮಾಶಂಕರ್

Date:

ಗಾಂಧೀಜಿ ಚಿಂತನೆ ಹಾಗೂ ಗಾಂಧಿವಾದದಲ್ಲಿ ಬದುಕಿನ, ಸಮಾಜದ ಹಲವು ಹುಡುಕಾಟದ ನೆಲೆಗಳಿವೆ. ನೈತಿಕ ವಿಕಾಸವೇ ಬದುಕಿನ ಸಮಾಜದ ಬೆಳವಣಿಗೆಯಾಗಿ ಗಾಂಧೀಜಿ ಗ್ರಹಿಸಿದ್ದರು ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.

ಬಸವಕಲ್ಯಾಣ ನಗರದ ಎಸ್.ಎಸ್.ಕೆ.ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ, ʼಸಾಮಾಜಿಕ ಹಾಗೂ ಆರ್ಥಿಕ ಸತ್ಯಗಳಿಗೂ ಸ್ವಾನುಭವಕ್ಕೂ ಇರುವ ಗಾಢವಾದ ಸಂಬಂಧವನ್ನು ಗಾಂಧಿಯವರ ಶೋಧನೆಯಲ್ಲಿ ಕಂಡುಬರುತ್ತದೆʼ ಎಂದರು.

ʼಗಾಂಧೀಜಿ ರಾಜಕಾರಣವನ್ನು ಮನುಷ್ಯನ ನೈತಿಕ ನೆಲೆಯ ಪ್ರಕ್ರಿಯೆಯಾಗಿ ಗ್ರಹಿಸಿದ್ದರು. ವೈಯಕ್ತಿಕವಾಗಿ ಮೆಚ್ಚಿದ ಮೌಲ್ಯಗಳನ್ನು ಸಾರ್ವತ್ರಿಕ ವ್ಯವಹಾರದಲ್ಲಿ ಆಚರಿಸಬೇಕೆಂದು ಆದೇಶಿಸಿದ್ದರು. ಗಾಂಧೀಜಿ ತಮ್ಮ ಸುತ್ತಲಿನ ಸಂಗತಿಗಳನ್ನು ಶೋಧನಾತ್ಮಕ ದೃಷ್ಟಿಯಿಂದಲೇ ಕಂಡಿದ್ದಾರೆ. ಗಾಂಧಿ ತತ್ವದಲ್ಲಿ ಅಧಿಕಾರ, ಸಂಪತ್ತು, ಆಧುನಿಕ ನಾಗರಿಕತೆಗೆ ಸ್ಥಾನವಿಲ್ಲ. ಸತ್ಯ, ಅಹಿಂಸೆ, ತ್ಯಾಗ ಮತ್ತು ಶಾಂತಿ ಸಂದೇಶಗಳು ಗಾಂಧಿ ಚಿಂತನೆಯಲ್ಲಿ ಮಾನ್ಯತೆ ಪಡೆದಿವೆ. ಅಹಿಂಸೆ ಮತ್ತು ಯುದ್ಧ ವಿರೋಧದ ಗಾಂಧಿ ತತ್ವಗಳನ್ನು ಜಗತ್ತು ಅರಿಯುವ ತುರ್ತು ಈ ಕಾಲದಲ್ಲಿದೆʼ ಎಂದು ವಿಶ್ಲೇಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಗಾಂಧೀಜಿ ಹಳ್ಳಿಗಳ ಪುನರುಜ್ಜೀವನದ ಕನಸುಗಾರ. ಜ್ಞಾನದ ಜೊತೆಗೆ ಕಸುಬುಗಾರಿಕೆ, ಆರ್ಥಿಕ ಭದ್ರತೆಗೆ, ಸ್ವಾವಲಂಬನೆಗೆ ಆದ್ಯತೆ ನೀಡಿದ್ದರು. ಬಹುಭಾಷಿಕತೆಗಳ ಮಹತ್ವ ಅರಿತ ಅವರು ಭಾರತೀಯ ಎಲ್ಲ ಭಾಷೆಗಳಲ್ಲಿನ ಜ್ಞಾನ ಪರಂಪರೆಯನ್ನು ಗೌರವಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಪರಿಕಲ್ಪನೆಯು ಗಾಂಧಿಜಿಯವರ ಗ್ರಾಮ ಸ್ವರಾಜ್‌ದ ಅಂಶವಾಗಿದೆ. ಸ್ವಾವಲಂಬನೆ, ಸಹಕಾರ, ಪ್ರೇಮ, ನ್ಯಾಯ ಮತ್ತು ಸರ್ವಸಮಾನತೆ, ಸರ್ವೊದಯವೇ ಸ್ವರಾಜ್ ಆಗಿದೆ. ಇದರ ಫಲಿತಾಂಶವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ನಾಗರಿಕತ್ವವನ್ನು ಗುಣಗಳನ್ನು ಬೆಳೆಸುತ್ತದೆʼ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಕೆ.ಬಸವೇಶ್ವರ ಪದವಿ ಕಾಲೇಜು ಐಕ್ಯೂಎಸಿ ಸಂಯೋಜಕ ಡಾ. ಶಿವಕುಮಾರ ಪಾಟೀಲ ಮಾತನಾಡಿ, ʼಶಿಸ್ತು ವಿದ್ಯಾರ್ಥಿ ಜೀವನದ ಬಹುದೊಡ್ಡ ಧೋರಣೆಯಾಗಿದೆ. ಬದುಕಿನ ಪ್ರತಿಯೊಂದರಲ್ಲೂ ಶಿಸ್ತು ಬದ್ಧತೆಯಿದ್ದರೆ ಜೀವನಕ್ಕೊಂದು ಅರ್ಥವಿದೆ. ಎನ್‌ಎಸ್‌ಎಸ್ ಶಿಸ್ತಿನ ದಾರಿಯಾಗಿದೆ. ಹಳ್ಳಿಗಳ ಸುಧಾರಣೆಯಿಂದಲೇ ದೇಶದ ಪ್ರಗತಿ ಸಾಧ್ಯ. ಅದರ ಸಣ್ಣ ಪ್ರಯತ್ನ ಎನ್ನೆಸ್ಸೆಸ್ ಘಟಕವಾಗಿದೆʼ ಎಂದರು.

ʼವಸಾಹತುಶಾಹಿ ಶಿಕ್ಷಣ ವ್ಯವಸ್ಥೆ ಭಾರತದಲ್ಲಿ ಕೆಲಸ ಸೃಷ್ಟಿಸುವ ಶಿಕ್ಷಣ ನೀಡಿದೆ. ಭಾರತದ ಮೂಲ ಶಿಕ್ಷಣ ಪದ್ಧತಿ ಮತ್ತು ಗಾಂಧಿಜಿಯವರ ಶೈಕ್ಷಣಿಕ ಪರಿಕಲ್ಪನೆ ಸೇವಾಗುಣಕ್ಕೆ ಮಹತ್ವ ನೀಡಿದೆ. ನಮ್ಮ ಸುತ್ತಲಿನ ಸಮಸ್ಯೆಗಳ ಅರಿವು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಎನ್‌ಎಸ್‌ಎಸ್ ನಿಂದ ಆಗುತ್ತದೆʼ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಠೋಬಾ ಡೊಣ್ಣೇಗೌಡರು ಮಾತನಾಡಿ, ʼನಾಡು, ನುಡಿ, ನೆಲ, ಸಂಸ್ಕೃತಿ ಬಗ್ಗೆ ಕಾಳಜಿ ಮತ್ತು ಪ್ರೀತಿ ಮೂಡಿಸುವ ಕೆಲಸ ಎನ್‌ಎಸ್‌ಎಸ್ ನಿಂದ ನೆರವೇರುತ್ತದೆ. ಕುವೆಂಪು ಅವರ ‘ನಿರಂಕುಶ ಮತಿಗಳಾಗಿ’, ವಿಚಾರ ಕ್ರಾಂತಿಗೆ ಆಹ್ವಾನ, ಗಾಂಧೀಜಿ ಅವರ ಗ್ರಾಮ ಸ್ವರಾಜ್, ಹಿಂದ್ ಸ್ವರಾಜ್ ಸೇರಿ ಹಲವು ಕೃತಿಗಳನ್ನು ಓದುವ ಮೂಲಕ ಸಾಹಿತ್ಯ ಸಂಸ್ಕೃತಿ ಕುರಿತು ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯʼ ಎಂದರು.

ಎನ್ನೆಸ್ಸೆಸ್ ಅಧಿಕಾರಿ ಮಹಾದೇವ ದೇಗಾಂವ ಮಾತನಾಡಿ, ʼಸಮಾಜ, ಪರಿಸರ, ಸ್ವಚ್ಛತೆ, ಶಿಸ್ತು, ಬದ್ಧತೆಗಳನ್ನು ಬೆಳೆಸುವ ಗುಣ ಎನ್ನೆಸ್ಸೆಸ್‌ಗಿದೆ. ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಬಿತ್ತುವ ಕೆಲಸ ಇಲ್ಲಿಂದ ಆಗಿರುತ್ತದೆ. ಯುವ ಸಮೂಹದಲ್ಲಿ ಸೇವಾ ಮನೋಭಾವ ಎನ್ನೆಸ್ಸೆಸ್ ಹುಟ್ಟಿಸುತ್ತದೆʼ ಎಂದರು.

ಈ ಸುದ್ದಿ ಓದಿದ್ದೀರಾ? ಪೋಕ್ಸೋ ಪ್ರಕರಣ: ಮುರುಘಾ ಶ್ರೀಗೆ ಜಾಮೀನು ಮಂಜೂರು

ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಸುರೇಶ ಎಚ್.ಆರ್. ಪ್ರಾಧ್ಯಾಪಕರಾದ ಡಾ. ರಮೇಶ, ಸೂರ್ಯಕಾಂತ ನಾಸೆ, ದೀಪಕ ಕಾಡಾದಿ, ಶರಣಬಸವ ಮಠಪತಿ, ಭಾರತಿ ಮಠ, ಆಶ್ವಿನಿ, ವೈಶಾಲಿ, ಶಿಲ್ಪಾ ಬಿರಾದಾರ, ಕಲ್ಯಾಣಪ್ಪ ನಾವದಗಿ, ಭೀಮಾಶಂಕರ ಪೂಜಾರಿ, ಸಚಿನ್ ರಾಠೋಡ, ಸುಮನ್ ರೆಡ್ಡಿ ಮೊದಲಾದವರಿದ್ದರು. ಮೀನಾಕ್ಷಿ ಸ್ವಾಗತಿಸಿದರು. ನೇತ್ರಾ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...