ಕೋಲಾರ : ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ನರೇಗಾ ಮಾದರಿ ವಸ್ತು ಪ್ರದರ್ಶನ ಜನ ಮನಸೂರೆಗೊಳ್ಳುತ್ತಿದೆ ಈ ಮಾದರಿ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರು ಪ್ರದರ್ಶನಕ್ಕೆ ಚಾಲನೆ ನೀಡಿದರು.
ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕೃಷಿಹೊಂಡ ಎಜೋಲಾ ತೋಟಗಾರಿಕಾ ಬೇಳೆಗಳು ಧನ್ವಂತರಿ ವನ ಮಾದರಿಶಾಲೆಯಲ್ಲಿ ಅಡುಗೆಕೋಣೆ ಶೌಚಾಲಯ ಆಟದ ಮೈದಾನ ಸಮಗ್ರ ಅಭಿವೃದ್ಧಿ ಮಾದರಿ ಗ್ರಾಮದಲ್ಲಿ ಹಳ್ಳಿ ಸಂತೆ ಸಂಜೀವಿನಿ ಶೆಡ್ ರಾಜೀವ್ ಗಾಂಧಿ ಸೇವಾ ಕೇಂದ್ರ ದನದಕೊಟ್ಟಿಗೆ ಕುರಿ ಮೇಕೆ ಕೊಟ್ಟಿಗೆ ಗೋದಾಮು ಗೋಮಾಳ ಅಭಿವೃದ್ಧಿ ಗೋಕುಂಟೆ ರಾಜಕಾಲುವೆ ಕಾಮಗಾರಿಗಳು ಜನರ ಕಣ್ಮನ ಸೆಳೆದವು.
ಇದನ್ನು ಓದಿದ್ದೀರಾ..? ಗ್ರೀನ್ ವುಡ್ಜ್ ಪ್ರೋ ನಿಂದ ಮಕ್ಕಳಲ್ಲಿ ಕ್ರೀಯಾಶೀಲ ಯಶಸ್ವಿಗೆ ಪೂರಕ: ಶ್ರೀನಿವಾಸ್
ನರೇಗಾ ಕಾಮಗಾರಿಗಳ ಅನುಷ್ಠಾನಕ್ಕೆ ಆಕರ್ಷಿತಗೊಂಡ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಸಿಬ್ಬಂದಿಯನ್ನು ಶ್ಲಾಘಿಸಿದರು ಬಳಿಕ ಪ್ರತಿಯೊಂದು ಗ್ರಾಮದ ಸ್ಮಶಾನದಲ್ಲಿ ಮಾದರಿಯುತ ಮುಕ್ತಿದಾಮ ನಿರ್ಮಿಸಲು ಸೂಚಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ಜನ ಮನಸೂರೆಗೊಂಡ ನರೇಗಾ ಮಾದರಿ
ಪೋಸ್ಟ್ ಹಂಚಿಕೊಳ್ಳಿ:




