ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ‘ಮೈ ಭಾರತ್’ ಅಂತರ್ ಜಿಲ್ಲಾ ಯುವ ವಿನಿಮಯ ಸಮಾರೋಪ ಸಮಾರಂಭದಲ್ಲಿ ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಪ್ರೊ. ಎಂ.ಬಿ. ಸುರೇಶ್ ಮಾತನಾಡಿ, ಸಹಿಷ್ಣುತೆಯ ಗುಣ ವ್ಯಕ್ತಿತ್ವದ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಹಾರ, ಭಾಷೆ, ವೇಷ-ಭೂಷಣಗಳಲ್ಲಿ ವಿಚಾರ ವಿನಿಮಯ ಆದಾಗ ವ್ಯಕ್ತಿತ್ವದಲ್ಲಿ ಮತ್ತಷ್ಟು ಗಟ್ಟಿಯಾಗುತ್ತೇವೆ. ಸಾಂಸ್ಕೃತಿಕ ವಿನಿಮಯ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಮೈಸೂರು ಸಾಂಸ್ಕೃತಿಕ ನಗರಿಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕು ಹಸನಾಗಲಿಲ್ಲ; ನಿರೀಕ್ಷೆ ತಪ್ಪಲಿಲ್ಲ!
ಮಹಾರಾಣಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಪಿ. ಪ್ರಸನ್ನ ಮಾತನಾಡಿ, ‘ಮೈ ಭಾರತ್’ ಪರಿಕಲ್ಪನೆ ಯುವಕರಲ್ಲಿ ಮೂಡಬೇಕು. ಕುವೆಂಪುರವರ ಮತಮತೀಯ ಭಾವನೆ ನಿಮ್ಮ ಯುವ ಮನಸುಗಳಲ್ಲಿ ಒಂದಾಗಬೇಕು. ನಿಮಗೆ ಈ ಅನುಭವ ಮತ್ತೆ ಸಿಗುವುದಿಲ್ಲ ಸಂದರ್ಭ ಒದಗಿಸಿದೆ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹುಣಸೂರು | ಮಕ್ಕಳು ವೈಜ್ಞಾನಿಕ ಮನೋಭಾವನೆ-ವೈಚಾರಿಕತೆ ಬೆಳೆಸಿಕೊಳ್ಳಬೇಕು: ಮಹದೇವ
ಕಾರ್ಯಕ್ರಮದಲ್ಲಿ ಮೈ ಬಾರತ್ ಮೈಸೂರು ಅಧಿಕಾರಿ ಪಿ. ಅಕಿಲ್, ಕಾರ್ಯಕ್ರಮ ಸಂಚಾಲಕ ಪಿ.ಎಲ್. ಅಮಿತ್. ಸಿ. ಚಿರಂಜೀವಿ, ಕುಮಾರ್, ಮಹದೇವ್ ಸೇರಿದಂತೆ ಇನ್ನಿತರರು ಇದ್ದರು.





