ಬೀದರ್‌ | ಕಳವು ಪ್ರಕರಣ: 75.13 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ; 36 ಆರೋಪಿಗಳ ಬಂಧನ

Date:

ಬೀದರ ಜಿಲ್ಲೆಯ 8 ಪೊಲೀಸ್ ಠಾಣೆಗಳಲ್ಲಿ ದಾಖಲಾದ ವಿವಿಧ 30 ಪ್ರಕರಣಗಳಲ್ಲಿ ಭಾಗಿಯಾದ 36 ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಹೇಳಿದರು.
ಶನಿವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,”ಬಂಧಿತ ಆರೋಪಿಗಳಿಂದ ಒಟ್ಟು 75.13 ಲಕ್ಷ ರೂ. ಮೌಲ್ಯದ ವಸುಗಳನ್ನು ಜಪ್ತಿ ಮಾಡಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದರು.
ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆ, ನೂತನ ನಗರ ಪೊಲೀಸ್ ಠಾಣೆ, ಗಾಂಧಿ ಗಂಜ್ ಪೊಲೀಸ್ ಠಾಣೆ, ಹುಮನಾಬಾದ ಪೊಲೀಸ್ ಠಾಣೆ, ಚಿಟಗುಪ್ಪಾ ಪೊಲೀಸ್ ಠಾಣೆ, ಬಸವಕಲ್ಯಾಣ ನಗರ ಪೊಲೀಸ್ ಠಾಣೆ, ಹುಲಸೂರ ಪೊಲೀಸ್ ಠಾಣೆ, ಭಾಲ್ಕಿ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಬೇಧಿಸಿ ಅಂದಾಜು 26.77 ಲಕ್ಷ ರೂ. ಮೌಲ್ಯದ 495 ಗ್ರಾಂ.ಬಂಗಾರ, 18,600 ರೂ. ಮೌಲ್ಯದ 330 ಗ್ರಾಂ. ಬೆಳ್ಳಿ, 34,400 ರೂ. ನಗದು ಹಣ, 1 ಮೊಬೈಲ್, 10 ದ್ವಿಚಕ್ರ ವಾಹನ ಮತ್ತು 02 ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಸೆಂಟ್ರೀಂಗ್ ಪ್ಲೇಟ್‌, ಪ್ರಿಂಟ್ ಸೂಟ್ ಬಟ್ಟೆ, ನೀರಿನ ಪಂಪ್‌ಸೆಟ್, ಮೈಕ್ ಸೇಟ್, ಸೌಂಡ ಮಿಕ್ಸರ್ ಸೇರಿ ಒಟ್ಟು 75.13 ಬೆಲೆಯುಳ್ಳ ಸ್ವತ್ತನ್ನು ಜಪ್ತಿ ಮಾಡಿ ಒಟ್ಟು 36 ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಬೀದರ್‌ ಡಿವೈಎಸ್‌ಪಿ ಶಿವಣ್ಣಗೌಡ ಪಾಟೀಲ, ಹುಮನಾಬಾದ ಡಿವೈಎಸ್‌ಪಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...