ʼಈ ದಿನ ಸರಣಿʼ ಭಾಗ-1 | ಮಂಡ್ಯದ ಕಾಳಿಕಾಂಬ ಕೊಳಗೇರಿಯ ಕೋರ್ಟ್‌ ತೀರ್ಪು ಮೀರಿದ ಬಲಾಢ್ಯರು: ನ್ಯಾ. ಎಂ. ನಾಗಪ್ರಸನ್ನ ಕಳವಳ

Date:

ಕೊಳಗೇರಿ ನಿವಾಸಿಗಳ ಪರ ಆದೇಶ ಬಂದ ನಂತರ ಜಾಗದ ರಕ್ಷಣೆಗೆ ಕೆವಿಯೆಟ್ ಸಲ್ಲಿಕೆಯಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ರಿನೀವಲ್ ಮಾಡಬೇಕು. ಆದರೆ, ಬಲಾಢ್ಯರ ಜತೆ ಶಾಮೀಲಾದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು 13 ವರ್ಷಗಳು ಕಳೆದರೂ ಈವರೆಗೆ ಮನೆ ನಿರ್ಮಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಮಂಡ್ಯ ನಗರದ ಕಾಳಿಕಾಂಬ ಕೊಳಗೇರಿ ಪ್ರದೇಶದ ಹೋರಾಟ ಬರೋಬ್ಬರಿ 22 ವರ್ಷಕ್ಕೂ ಅಧಿಕ. ಬಲಾಢ್ಯರು, ದೇವಸ್ಥಾನ ಸಮಿತಿ ಭಕ್ತರ ಮೂಲಕ ಕೊಳಗೇರಿ ನಿವಾಸಿಗಳ ಜಾಗ ಕಬಳಿಸಲು, ಒಕ್ಕಲೆಬ್ಬಿಸಲು ಇನ್ನಿಲ್ಲದ ತರಾವರಿ ಪ್ರಯತ್ನ ನಡೆಸಿ ಹೋರಾಟಗಾರರ ಹೋರಾಟಕ್ಕೆ ಮಂಡಿಯೂರಿದ್ದಾರೆ. ನ್ಯಾಯಮೂರ್ತಿಗಳೇ ಕಳವಳ ವ್ಯಕ್ತಪಡಿಸುವ ಮಟ್ಟಿಗೆ ವಾದದ ಸಾರಾಂಶಗಳು ಕಂಡಿಕೆಗಳಲ್ಲಿ ಅಡಕವಾಗಿದ್ದವು.

ಬಡವರು, ನಿರ್ಗತಿಕರು, ನಿರಾಶ್ರಿತರು, ಕೊಳಗೇರಿ ಜನರು ಇರುವುದೇ ಅಸಹ್ಯ, ಅಪವಿತ್ರ ಎನ್ನುವಂತಹ ಮಟ್ಟಿಗೆ ಘನ ನ್ಯಾಯಾಲಯಕ್ಕೆ ದೂರಿನ ಪ್ರಾರ್ಥನೆಯಲ್ಲಿ ಉಲ್ಲೇಖಪಡಿಸಿದಾಗ, ನ್ಯಾಯಮೂರ್ತಿಗಳೂ ಕೂಡ ಚಕಾರ ಎತ್ತಿ, ಇಂತಹ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ʼಇಂತಹ ಘಟನೆಗಳು ಘಟಿಸಬಾರದು, ಇದು ಭೀಕರತೆಗೆ ಸಮʼವೆಂತಲೇ ವಿಷಾದಿಸಿದ್ದಾರೆ. 2013ರಲ್ಲಿ ಉಚ್ಚ ನ್ಯಾಯಾಲಯ, 2018ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಹಾಗೂ 2025ರಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನೇ ಮರು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಮೂರು ಬಾರಿ ಕಾಳಿಕಾಂಬ ಕೊಳಗೇರಿ ಪ್ರದೇಶದ ನಿವಾಸಿಗಳ ಪರ ತೀರ್ಪು ಪ್ರಕಟವಾಗಿದೆ.

ಬಲಾಢ್ಯರು ಘನ ನ್ಯಾಯಾಲಯದ ತಿರ್ಪನ್ನೇ ಮೀರಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಬಾರಿ. ಹೋರಾಟಗಾರರು ಕಾಳಿಕಾಂಬ ನಿವಾಸಿಗಳ ಪರ ನಿಂತು ಗೆಲುವು ಸಾಧಿಸಿದ್ದಾರೆ. 2006ರಲ್ಲಿ ಮಂಡ್ಯ ನಗರ ಸ್ಲಮ್ ನಿವಾಸಿಗಳ ಒಕ್ಕೂಟ ಹೆಸರಿನಿಂದ ಹೋರಾಟ ಆರಂಭಗೊಂಡು, ದಿನ ಕಳೆದಂತೆ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ಸತತವಾಗಿ 20 ವರ್ಷಗಳ ಕಾಲ ಹೋರಾಟ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ನವೆಂಬರ್ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ 6 ದಿನಗಳ ಅನಿರ್ದಿಷ್ಟಾವಧಿ ಹೋರಾಟ ನಡೆದು, ಕಾಳಿಕಾಂಬ ಕೊಳಗೇರಿ ಪ್ರದೇಶದ ಸರ್ವೇ ನಂಬರ್ 843-44ರಲ್ಲಿ 20 ಕುಂಟೆ ಜಾಗವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಆರ್‌ಟಿಸಿ ಇಂಡೀಕರಣ ಮಾಡಿ ಜಿಲ್ಲಾಧಿಕಾರಿ ಡಾ. ಕುಮಾರ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ಹಸ್ತಾಂತರ ಮಾಡಿದರು.

ಕಾಳಿಕಾಂಬ ದೇವಸ್ಥಾನ ಸಮಿತಿ 35 ಜನ ಭಕ್ತಾದಿಗಳ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದೇವಾಲಯ ಪಕ್ಕದಲ್ಲಿ ಕೊಳಗೇರಿ ನಿವಾಸಿಗಳು ಇರುವುದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ. ಭಕ್ತಾದಿಗಳು ಬಂದು ಹೋಗುವುದರಿಂದ ಪ್ರಶಾಂತ ವಾತಾವರಣವಿರದೆ ಕೆಟ್ಟ ವಾತಾವರಣಕ್ಕೆ ಕಾರಣಗವಾಗುತ್ತದೆಂದು ಪ್ರಮಾಣಪತ್ರ ಸಲ್ಲಿಸಿರುತ್ತಾರೆ. ಅಲ್ಲಿಂದ ಸ್ಥಾಳಾಂತರ ಮಾಡುವಂತೆಯೂ ಕೋರಿರುತ್ತಾರೆ.

ಕಾಳಿಕಾಂಬ ಕೊಳಗೇರಿ ಪ್ರದೇಶದ ಜನರ ಮನೆ ನಿರ್ಮಾಣ ಮಾಡದಂತೆ, ಸ್ಥಳ ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ರದ್ಧತಿ ಕೋರಿದಾಗ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕಳವಳ ವ್ಯಕ್ತಪಡಿಸಿ “ದೂರುದಾರರ ಹಿಂದಿರುವ ವಾದ ಗಮನಿಸಿದರೆ ಕೊಳಗೇರಿ ವಾಸಿಗಳು ಕೆಳವರ್ಗದ ಕೀಳು ಮಟ್ಟದ ಜನರೆಂತಲೂ, ದೇವಾಲಯದ ಸುತ್ತಮುತ್ತ ಪೂಜಾ ಸ್ಥಳಗಳಲ್ಲಿ ಬದುಕಲು ಅರ್ಹರಿಲ್ಲದವರೆಂದು ಹೇಳುತ್ತದೆ. ಇಂತಹ ವಾದ ಮನಸ್ಸನ್ನು ಘಾಸಿಗೊಳಿಸಿದೆ. ಸಂವಿಧಾನದಡಿ ಎಲ್ಲರಿಗೂ ಸಮಾನತೆ ಇರುವಾಗ, ಅತ್ಯಂತ ಕೀಳುಮಟ್ಟದ ಕಾರಣಗಳು ಸರಿಯಾದುದಲ್ಲ” ಎಂದು ಘನ ನ್ಯಾಯಲಯಕ್ಕೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ವಜಾಗೊಳಿಸುವುದರ ಮೂಲಕ ಕಾಳಿಕಾಂಬ ಕೊಳಚೆ ಪ್ರದೇಶದ ನಿವಾಸಿಗಳ ಪರವಾಗಿ ತಿರ್ಪನ್ನು ನೀಡಿದ್ದಾರೆ.

ಸರ್ವೇ ನಂಬರ್ 845ರಲ್ಲಿದ್ದ 20 ಕುಂಟೆ ಜಾಗದ ಬದಲಿಗೆ 2013ನೇ ಮಾರ್ಚ್ 01ರಂದು ಘನ ನ್ಯಾಯಾಲಯದಲ್ಲಿ ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಂ ಕೆ ರಾಮಲಿಂಗೇಗೌಡ, ಸಹ ಕಾರ್ಯದರ್ಶಿ ಎಂ ಬಿ ಶ್ರೀನಿವಾಸ್ ಹಾಗೂ ಸದಸ್ಯರುಗಳು ಹಾಗೂ ಕಾಳಿಕಾಂಬ ಕೊಳಚೆ ಪ್ರದೇಶದ ನಿವಾಸಿಗಳ ಸಂಘದ ಕಾರ್ಯದರ್ಶಿ ಎಂ ಬಿ ನಾಗಣ್ಣ ಸೇರಿದಂತೆ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ ತೆಗೆದುಕೊಂಡ ತೀರ್ಮಾನದಂತೆ ‘ಪರಸ್ಪರ ರಾಜೀ ಒಪ್ಪಂದ ಹಾಗೂ ದಾನ ಪತ್ರ ಅನುಸಾರ, ಸರ್ವೇ ನಂಬರ್ 843 ರಲ್ಲಿ 17 ಕುಂಟೆ, ಸರ್ವೇ ನಂಬರ್ 844 ರಲ್ಲಿ 11. 1/2 ಕುಂಟೆ. ಅಂದರೆ ಒಟ್ಟು 28. 1/2 ಕುಂಟೆ ಜಾಗದಲ್ಲಿ 08.08 ಕುಂಟೆ ಜಾಗವನ್ನು ಕಾಳಿಕಾಂಬ ಸೇವಾ ಸಮಿತಿಗೆ ಬಿಟ್ಟುಕೊಟ್ಟು, ಉಳಿದ 20 ಕುಂಟೆ ಜಾಗವನ್ನು ಕಾಳಿಕಾಂಬ ಕೊಳಚೆ ನಿವಾಸಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟವರಿಗೆ ಕರ್ನಾಟಕ ಕೊಳಚೆ ಪ್ರದೇಶ ಅಧಿನಿಯಮ ಕಾಯ್ದೆ 1973 ಸೆಕ್ಷನ್ 3ರ ರೀತ್ಯಾ ಅಂತಿಮ ಆದೇಶ ನೀಡಿರುತ್ತದೆ.

ಮೈಶುಗರ್ ಲ್ಯಾಂಡ್ ಹೆಸರಿನಲ್ಲಿದ್ದ 5 ಎಕರೆ 25 ಕುಂಟೆ ಜಾಗದಲ್ಲಿ ಕಾಳಿಕಾಂಬ ದೇವಸ್ಥಾನ ಸಮಿತಿಯವರು ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಈ ಕುರಿತಾಗಿ ಅಂದು 2013ರಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಅನ್ವಯ ಜಿಲ್ಲಾಧಿಕಾರಿಯಾಗಿದ್ದ ಜಾಫರ್ ಅವರು ಒತ್ತುವರಿ ಆಕ್ಟ್ ಪ್ರಕಾರ ತೆರವಿಗೆ ಮುಂದಾಗಿದ್ದರು. ಆಗಲೇ, ಜಾಗ ಬದಲಿ ಮಾಡಿಕೊಳ್ಳುವ ರಾಜಿ ನಡೆದು ದಾನಪತ್ರ ಮೂಲಕ ಒಪ್ಪಂದಕ್ಕೆ ಮುಂದಾಗಿ ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದ್ದರು. ಅದರಂತೆಯೇ, ನ್ಯಾಯಾಲಯವೂ ಕೂಡ ತೀರ್ಪನ್ನು ನೀಡಿ, ವರ್ಷದೊಳಗೆ ಮನೆ ಕಟ್ಟಿಕೊಡುವಂತೆ ಸೂಚಿಸಿತ್ತು.

ರಾಜೀವ್ ಗಾಂಧೀ ಆವಾಸ್ ಯೋಜನೆಯಡಿ 2013-14ನೇ ಸಾಲಿನಲ್ಲಿ ಒಟ್ಟು 1335 ಮನೆಗಳು ಮಂಜೂರಾಗಿದ್ದು, ಅದರಲ್ಲಿ 38 ಮನೆಗಳು ಕಾಳಿಕಾಂಬ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಂಜೂರಾಗಿತ್ತು. ಇಷ್ಟಾದರೂ ಬಲಾಢ್ಯರೆಲ್ಲರೂ ಸೇರಿ ಇಕ್ಕಲಕ್ಕಿ ರಾಮಲಿಂಗೇಗೌಡ ಅವರ ನೇತೃತ್ವದಲ್ಲಿ 8 ಜನರ ತಂಡ 2021ರಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿತ್ತು. ಕಡೆಗೂ ಘನ ನ್ಯಾಯಾಲಯ ವಾದ, ಪ್ರತಿವಾದ ಆಲಿಸಿ ಕಾಳಿಕಾಂಬ ಕೊಳಚೆ ನಿವಾಸಿಗಳ ಪರವಾಗಿ ಆದೇಶ ನೀಡಿತು.

ಈ ಸುದ್ದಿ ಓದಿದ್ದೀರಾ? ಹಾಸನ | ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಕಾರ್ಯಾಗಾರ; ಜನವರಿ.3 ರಿಂದ 6ರವರೆಗೆ: ಚುಕ್ಕಿ ನಂಜುಂಡಸ್ವಾಮಿ

ಆದೇಶ ಬಂದ ನಂತರವೂ ಸುಮ್ಮನಿರದ ಕಾಳಿಕಾಂಬ ಸೇವಾ ಸಮಿತಿ 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಸುಳ್ಳು ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾಖಲಾಗಿದ್ದ 27 ಜನರ ಆಪೀಲು ವಜಾಗೊಳಿಸಿದರು. ಇಲ್ಲಿಯೂ ಕೊಳಗೇರಿ ನಿವಾಸಿಗಳ ಪರ ಆದೇಶ ಬಂದ ನಂತರ ಜಾಗದ ರಕ್ಷಣೆಗೆ ಕೆವಿಯೆಟ್ ಸಲ್ಲಿಕೆಯಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ರಿನೀವಲ್ ಮಾಡಬೇಕು. ಆದರೆ, ಬಲಾಢ್ಯರ ಜತೆ ಶಾಮೀಲಾದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು 13 ವರ್ಷಗಳು ಕಳೆದರೂ ಈವರೆಗೆ ಮನೆ ನಿರ್ಮಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ವಿಶೇಷ ಸಂಚಿಕೆ ಮುಂದುವರೆಯುತ್ತದೆ………..

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...