ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕು, ಬಡಗಲಪುರ ಗ್ರಾಮದ ರೈತ ಮಹಾದೇವ ಗೌಡ ಮೇಲೆ ಹುಲಿ ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು. ಅರಣ್ಯ ಇಲಾಖೆ ಸತತವಾಗಿ ಕಾರ್ಯಾಚರಣೆ ನಡೆಸಿ ಕಡೆಗೂ ಹುಲಿ ಸೆರೆ ಹಿಡಿದಿದ್ದಾರೆ.
ಸಾಕಾನೆಗಳಾದ ಅಭಿಮನ್ಯು, ಬೀಮ, ಮಹೇಂದ್ರ, ಧನಂಜಯ ಬಳಸಿ ಕೂಂಬಿಂಗ್ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಬಡಗಲಪುರ ಗ್ರಾಮದ ಮಹದೇಶ್ವರ ದೇವಸ್ಥಾನದ ಸಮೀಪ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ರೈತ ಮಹದೇವ ಗೌಡನ ಮೇಲೆ ದಾಳಿ ನಡೆಸಿದ ಹುಲಿ. ಕಾಡಿನತ್ತ ತೆರಳದೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲೇ ಓಡಾಡುತ್ತಿರುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿ ಹುಲಿಯ ಚಲನವಲನಗಳನ್ನು ಸಿಸಿಟಿವಿ ದೃಶ್ಯ ಆಲಿಸಿ ಕೂಂಬಿಂಗ್ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ

ಹುಲಿ ಹೆಜ್ಜೆ ಆಧರಿಸಿ ಪತ್ತೆ ಮಾಡಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಹುಲಿ ಸೆರೆ ಹಿಡಿದ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಭಯದ ವಾತಾವರಣದಲ್ಲೇ ಇದ್ದ ಗ್ತಾಮಸ್ಥರು ಮಹಾದೇವ ಗೌಡನ ಮೇಲಾದ ದಾಳಿಯಿಂದ ಭಯಬೀತಾರಾಗಿದ್ದರು. ಗ್ರಾಮಸ್ಥರು ಹೇಳುವ ಪ್ರಕಾರ ಅರಣ್ಯ ಇಲಾಖೆಯವರು ಈಗ ತೋರಿದ ಆಸಕ್ತಿ ಈ ಹಿಂದೆಯೇ ತೋರಿದ್ದರೆ, ರೈತ ಯುವಕ ಮಹಾದೇವ ಗೌಡನ ಬದುಕು ಹಾಳಾಗುತ್ತಿರಲಿಲ್ಲ. ಇನ್ನಾದರೂ ಅರಣ್ಯ ಇಲಾಖೆಯವರು ಇಂತಹ ವಿಚಾರಗಳನ್ನು ಹಗುರವಾಗಿ ಕಾಣದೆ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.





