ಆಗ‌ಸ್ಟ್‌ನಲ್ಲಿ ಇರದ ದಾರಿದ್ರ್ಯ ಸೆಪ್ಟೆಂಬರ್‌ನಲ್ಲಿ ಬಂದಿದ್ದು ಯಾರಿಗೆ: ಕಾಂಗ್ರೆಸ್‌ ಲೇವಡಿ

Date:

ಆಗ‌ಸ್ಟ್‌ನಲ್ಲಿ ಇರದ ದಾರಿದ್ರ್ಯ ಸೆಪ್ಟೆಂಬರ್‌ನಲ್ಲಿ ಬಂದಿದ್ದು ಯಾರಿಗೆ, ಜೆಡಿ‌ಎಸ್‌ಗೋ? ಅಥವಾ ಬಿಜೆಪಿಗೋ? ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್‌ (ಟ್ವಿಟ್ಟರ್)ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಕುಟುಕಿರುವ ಕಾಂಗ್ರೆಸ್‌, “ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಮೊದಲು ಹೇಳಿದ್ದರು. ಕುಮಾರಸ್ವಾಮಿಯೊಂದಿಗೆ ಹೋಗುವ ದಾರಿದ್ರ್ಯ ಬಿಜೆಪಿಗೆ ಬಂದಿಲ್ಲ ಎಂದು ಸುನಿಲ್ ಕುಮಾರ್ ನಂತರ ಹೇಳಿದ್ದರು. ಇಂತಹ ಯೂಟರ್ನ್ ಗಳಿಂದಲೇ ಉಭಯ ಪಕ್ಷಗಳನ್ನು ರಾಜ್ಯದ ಜನತೆ ನಂಬಿಕೆಗೆ ಅರ್ಹವಲ್ಲ ಎಂದು ತೀರ್ಮಾನಿಸಿ ಹೀನಾಯವಾಗಿ ತಿರಸ್ಕರಿಸಿದೆ. ದಾರಿದ್ರ್ಯ ಬಂದಿದ್ದು ಯಾರಿಗೆ ಎಂಬುದನ್ನು ಉಭಯ ಪಕ್ಷಗಳೂ ಅವಲೋಕನ ನಡೆಸಿ ರಾಜ್ಯದ ಜನತೆಗೆ ತಿಳಿಸಲಿ!” ಎಂದಿದೆ.

“ಜೆಡಿಎಸ್‌ನವರು ವಚನ ಭ್ರಷ್ಟರು, ಜೀವಮಾನದಲ್ಲಿ ಅವರ ಸಹವಾಸ ಮಾಡುವುದಿಲ್ಲ ಎನ್ನುತ್ತಿದ್ದ ಯಡಿಯೂರಪ್ಪವರು ಜೆಡಿಎಸ್ ಜೊತೆಗಿನ ಸಖ್ಯ ಬೆಳೆಸುವ ಮಾತಾಡಿದ್ದರು, ಈಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ. ಮೈತ್ರಿಯ ಚೌಕಸಿ ವ್ಯವಹಾರ ಕುದುರಲಿಲ್ಲವೇ ಅಥವಾ ಯಡಿಯೂರಪ್ಪನವರನ್ನು ಕಟ್ಟಿಹಾಕಲು ಬಿಜೆಪಿ ಈ ಕಡಿವಾಣ ಹಾಕುತ್ತಿದೆಯಾ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...