“ಶ್ರಮ ಶಕ್ತಿ ನೀತಿ” 2025 ದುಡಿವ ಜನರಿಗೆ ದ್ರೋಹ ಬಗೆಯುವ 4 ಕಾರ್ಮಿಕ ಕಾನೂನುಗಳನು ರದ್ದುಮಾಡಬೆಕು. ದುಡಿವ ಜನರಿಗೆ ಶಾಸನ ಬದ್ದ ಸವಲತ್ತುಗಳನ್ನು ನೀಡಬೇಕೆಂದು ಅಗ್ರಹಿಸಿ ಎರಡನೇ ದಿನಕ್ಕೆ ಕಾಲಟ್ಟ ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ಅಹೋರಾತ್ರಿ ಧರಣೆ.
ಈ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಪ್ರೊ. ಕೆ.ದೊರೆರಾಜ್ ಅವರು ಮಾತನಾಡಿ ಸರ್ಕಾರದ ಯೋಜನೆಗಳು ಸೌಲಭ್ಯಗಳು ಜನತೆಗೆ ತಲುಪಿಸಲು ತಳಸ್ಪರ್ಶವಾಗಿ ದುಡಿಯುವ ನೌಕರರ, ಬದುಕು ಉತ್ತಮ ಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕು ಎಂದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ನವರು ಮಾತನಾಡಿ ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಕೇಂದ್ರ ಸರ್ಕಾರ – ಜನತೆಯ ತೆರಿಗೆ ಹಣವನ್ನು ವಿವಿಧ ಯೊಜನೆಗಳ ನೆಪದಲ್ಲಿ ಶ್ರೀಮಂತ ಕಾಪೋರೇಟ್ ಬಂಡವಾಳಿಗರಿಗೆ ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಬಡಜನರು ಮತ್ತು ಅವರ ಪರ ಇರುವ ಯೋಜನೆಗಳಾದ ಐಸಿಡಿಎಸ್. ಬಿಸಿಊಟದಂತಹ ಯೋಜನೆಗಳಿಗೆ ಅನುದಾನ ಹೆಚ್ಚಳಮಾಡಬೇಕು ಎಂದರು.
ಹೆಚ್‌ಎಂಟಿ ನೌಕರರ ಸಂಘದ ಅಧ್ಯಕ್ಷರಾದ ರೇವಣ್ಣಸಿದ್ದಯ್ಯ ಮಾತನಾಡಿ ಸ್ಕೀಮ್ ನೌಕರರಿಗೆ ಕನಿಷ್ಟ ಕೂಲಿ ನೀಡದೆ ದುಡಿಸುವುದು ಅಮಾನವಿಯ ಎಂದರು. ತುಮಕೂರು ಮಾಜಿ ಮಹಾಪೌರರಾದ ಗೀತಾ ರುದ್ರೇಶ್ ತಕ್ಷಣವೇ ಕೇಂದ್ರ ಸಚಿವರ ಸ್ಥಳಕ್ಕೆ ಬಂದು ಈ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷ ಬಿ.ಉಮೇಶ್ ಮಾತನಾಡಿ 2009 ರಿಂದ ಬಿಸಿಊಟ ನೌಕರಿಗೆ ಕೇವಲ 600 ರೂಗಳಿಗೆ ದುಡಿಸಲಾಗುತ್ತಿದೆ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು. ಯಾವುದೇ ಸ್ವರೂಪದಲ್ಲಿಯೂ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದ ಎಂದರು.
ಈ ಹೋರಾಟಕ್ಕೆ ಬೆಂಬಲವಾಗಿ ತುಮಕೂರು ಮಹಾನಗರಪಾಲಿಕೆಯ ಕಸದ ಆಟೋಚಾಲಕರು, ಸಹಾಯಕರು ಲೋಡರ್ಸ್ ಮತ್ತು ಕ್ಲೀರ‍್ಸ್ಗಳ ಪ್ರಧಾನಕಾರ್ಯದರ್ಶಿ ಮಾರುತಿ ಮಾತನಾಡಿ ಕನಿಷ್ಠಕೂಲಿ ವೇತನವನ್ನು ಕೂಡದೆ ದುಡಿಸಿಕೊಳ್ಳತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿರು.
ಸಿಐಟಿಯು ತುಮಕೂರು ನಾಯಕರಾದ ಸುಜೀತ್ ನಾಯಕ್. ಇಂತಿಯಾಜ್ ಪಾಷ, ವಸಿಂ ಅಕ್ರಮ.. ಜನವಾಧಿ ಮಹಿಳಾ ಸಂಘಟನೆಯ ಟಿ.ಆರ್ ಕಲ್ಪನಾ ಭಾಗವಹಿಸಿದರು.





