ತುಮಕೂರು | ಅಂಬೇಡ್ಕರ್ ಉತ್ತರಾಧಿಕಾರಿ ಬಿ.ಬಸವಲಿಂಗಪ್ಪ ಮಾತ್ರ: ಪ್ರೊ. ಕಾಳೇಗೌಡ ನಾಗವಾರ

Date:

ಅಂಬೇಡ್ಕರ್ ಅವರ ಉತ್ತರಾಧಿಕಾರಿ ಎಂದರೆ ಅದು ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ಲೇಖಕ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಸ್ಪತ್ರೆ ಸಭಾಂಗದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಭಾನುವಾರ (ನ.26) ಸಂಜೆ  ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ಬಿ. ಬಸವಲಿಂಗಪ್ಪ ಸ್ಮರಣ ಉಪನ್ಯಾಸ ಕಾರ್ಯಕ್ರಮವನ್ನು ಲೇಖಕ ಪ್ರೊ. ಕಾಳೇಗೌಡ ನಾಗವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಬಿ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಎನ್ನಲಿಲ್ಲ. ಹೊಸ ಚಿಂತನೆ, ಹೊಸ ಆಯಾಮದ ಕಡೆಗೆ ಸಾಹಿತ್ಯ ಹೊರಳಬೇಕೆಂಬ ಉದ್ದೇಶದಿಂದ, ಬೂಸಾ ಎಂದರೆ ಹೊರತು ಸಾಹಿತ್ಯವನ್ನಲ್ಲ. ಆದರೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಹೇಳಿದ ಮಾತನ್ನು, 20ನೇ ಶತಮಾನದಲ್ಲಿ ಸತ್ಯ ಹೇಳಿ ಮಂತ್ರಿ ಪದವಿಯನ್ನೇ ಕಳೆದುಕೊಂಡ ಮಹಾವ್ಯಕ್ತಿ ಬಸವಲಿಂಗಪ್ಪ, ಮತ್ತೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಬಡವರ ಹಣದಲ್ಲಿ ದೇಗುಲ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದ ನನ್ನ ದೈರ್ಯವನ್ನು ಮೆಚ್ಚಿ, ತಮ್ಮ ಅಪ್ತ ಬಳಗಕ್ಕೆ ಸೇರಿಸಿಕೊಂಡರು. ಅವರಿಗೆ ಎಲ್ಲ ವರ್ಗದ ಪ್ರಗತಿಪರ ಬರಹಗಾರರ ಸ್ನೇಹವಿತ್ತು. ಕೊನೆಯವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉತ್ತರಾಧಿಕಾರಿಯಾಗಿ ಉಳಿದವರು ಬಿ. ಬಸವಲಿಂಗಪ್ಪ ಮಾತ್ರ ಎಂದರು.

ಬಸವಲಿಂಗಪ್ಪ ಅವರು ತಳಸಮುದಾಯದ ಯುವಕರು ವಿದ್ಯಾವಂತರಾಗಿ ಉದ್ಯೋಗಸ್ಥರಾಗಬೇಕೆಂದು ಬಯಸಿದರು, ದಲಿತರ ದೇವರ ಪೂಜೆಗೆ ವಿರೋಧ ವ್ಯಕ್ತಪಡಿಸಿದರು. ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ತನ್ನದೇ ಆದ ರೀತಿಯಲ್ಲಿ ಸಮಾಜವನ್ನು ಸುಧಾರಿಸಿದರು. ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ದೇವರಾಜ ಅರಸು ಅವರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ಸ್ವತಃ ದೇವರಾಜ ಅರಸರಲ್ಲಿತ್ತು. ದೇವರಾಜ ಅರಸು ಉತ್ತಮ ಆಡಳಿತ ನೀಡುತ್ತಿದ್ದರು ಸಹ ಸಮಾಜ ಸುಧಾರಣೆಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕೆಂದು ಬಸವಲಿಂಗಪ್ಪ ಒತ್ತಾಯ ಮಾಡುತ್ತಿದ್ದರು ಎಂದು ಸ್ಮರಿಸಿದರು.

ದೇವರಾಜ ಅರಸು ಪ್ರಗತಿಪರರಾಗಿದ್ದರೂ, ಕೆಲ ಕಾನೂನು ತರಲು ಹಿಂಜರಿಯುತ್ತಿದ್ದರು. ಬಸವಲಿಂಗಪ್ಪ ಅವರು ಪೆರಿಯಾರ್ ಅವರು ಮೈಸೂರಿಗೆ ಬಂದಿದ್ದಾಗ ಅವರನ್ನು ನೋಡಲು ಬಯಸಿದ್ದರು. ಆದರೆ, ಅರಸು ಅದು ಸರಕಾರದ ಕಾರ್ಯಕ್ರಮವಾಗುತ್ತದೆ, ಭಾಗವಹಿಸಬೇಡಿ ಎಂದು ಒತ್ತಡ ಹೇರಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾರದೆ ಪರಿತಪಿಸಿದರು. ಆನಂತರ ತಮಿಳುನಾಡಿನ ಜನತೆ ಬಸವಲಿಂಗಪ್ಪ ಅವರನ್ನು ಆಹ್ವಾನಿಸಿ ಕರ್ನಾಟಕದ ಪೆರಿಯಾರ್ ಎಂದು ಅಭಿಮಾನದಿಂದ ಕರೆದಾಗ, ಪೆರಿಯಾರ್ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಾನೆಂತಹ ತಪ್ಪು ಮಾಡಿದೆ ಎಂದು ಹಲವು ಬಾರಿ ಮರುಗಿದ್ದರು ಎಂದು ಡಾ.ಕಾಳೇಗೌಡ ನಾಗವಾರ ಹೇಳಿದರು.

ದೇಶದಲ್ಲಿ 2600 ವರ್ಷಗಳ ಹಿಂದೆ ಇದ್ದ ಬುದ್ಧನ ನಡೆಯನ್ನು ಅನುಕರಿಸಿದ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದರು. ಅವರು ಅನುಭವಿಸಿದ ಜಾತೀಯತೆಯನ್ನು ಇಂದಿಗೂ ಕಾಣುತ್ತಿರುವುದು ದುರದೃಷ್ಟಕರ. ಕುವೆಂಪು, ಮಾಸ್ತಿ, ಶಿವರಾಮ ಕಾರಂತ ಅವರು ಬುದ್ಧನ ವೈಜ್ಞಾನಿಕ ತತ್ವವನ್ನು ಅನುಕರಿಸಿದರು. ದೇಶದ ಪುರೋಹಿತ ಶಾಹಿಯ ವಿರುದ್ಧ ಹೊರಬಂದ ಮೊದಲ ಕನ್ನಡಿಗ ಬಸವಣ್ಣ. ಅವರು ನಿಜವಾಗಿಯೂ ಪೌರೋಹಿತ್ಯಕ್ಕೆ ವಿರುದ್ಧವಾಗಿ ಧರ್ಮವನ್ನು ಕಟ್ಟಿದರು ಎಂದರು.

ಸಂವಿಧಾನ ಅರ್ಪಣಾ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾಷಣದ ಅಂಶಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಎಸ್ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ. ಬಾಲಕೃಷ್ಣಪ್ಪ, ಚಿಂತಕ ದೊರೈರಾಜು, ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ, ಕಲಾವಿದ ಹನುಮಂತೇಗೌಡ, ಡಾ.ಬಸವರಾಜು, ನರಸೀಯಪ್ಪ, ಸಿಎಒ ನರಸಿಂಹಮೂರ್ತಿ, ಚಂದ್ರಪ್ಪ, ಡಾ.ಒ.ನಾಗರಾಜು, ವಕೀಲ ಮಂಜುನಾಥ್ ಎಚ್.ವಿ. ನಾಗಭೂಷಣ್ ಬಗ್ಗನಡು ಸೇರಿದಂತೆ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...