ತುಮಕೂರು | ಶಾಲಾ ವಾಹನ ಅಪಘಾತ ಪ್ರಕರಣ ಮುಚ್ಚಿಹಾಕಲು ಯತ್ನ?

Date:

ತುಮಕೂರು ತಾಲೂಕಿನ ಬಿದರೆ ಕಟ್ಟೆ ಯೂನಿವರ್ಸಿಟಿ ಕ್ಯಾಂಪಸ್ ಬಳಿ 20/09/2025 ರಂದು ನಡೆದಿದ್ದ ಕಾರು ಮತ್ತು ಶಾಲಾ ಬಸ್ ಅಪಘಾತ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 

ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟಿಸಿದ್ದು, ಶಾಲಾ ಬಸ್ ನೋಂದಣಿಯಾಗದಿದ್ದರೂ ಮಕ್ಕಳ ಪ್ರಯಾಣ, ಶಾಲಾ ಬಳಕೆಗೆ ಉಪಯೋಗವಾಗುತ್ತಿದ್ದ ಬಗ್ಗೆ ಎಫ್‌ಐಅರ್‌ ನಲ್ಲಿಯೇ ಉಲ್ಲೇಖಿಸಲಾಗಿದೆ. ಅಪಘಾತ ನಡೆದ ನಂತರ ಹೆಬ್ಬೂರು ಪೊಲೀಸರು ಶಾಲಾ ಬಸ್‌ ಅನ್ನು ಸೀಜ಼್ ಮಾಡಿದ್ದರು. ಆದರೆ ಈ ಬಗ್ಗೆ ಹಲವು ಪೊಲೀಸರ ಮೇಲೆ ಹಲವು ಅನುಮಾನಗಳು ವ್ಯಕ್ತವಾಗಿವೆ. 

ಅಪಘಾತದಲ್ಲಿ ಬಸ್ ನಜ್ಜುಗುಜಾಗಿತ್ತು. ಸಾರಿಗೆ ಇಲಾಖೆ ಆದೇಶವನ್ನು ಉಲ್ಲಂಘಿಸಿ ವಾಹನವನ್ನು ಬಳಸುತ್ತಿದ್ದರು ಎನ್ನಲಾಗಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ವಾಹನವನ್ನು ರಿಲೀಸ್ ಮಾಡದಂತೆ ಸಾರಿಗೆ ಇಲಾಖೆ ಐಎಂಇ ನೀಡಿದ್ದರೂ ಕೂಡ ಪೊಲೀಸರು ಅಪಘಾತಕ್ಕೊಳಗಾಗಿದ್ದ ಶಾಲಾ ಬಸ್ ಅನ್ನು ಮೂರು, ನಾಲ್ಕು ದಿನದಲ್ಲಿ ಬಿಟ್ಟುಕಳುಹಿಸಲಾಗಿದೆ ಎನ್ನಲಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೆಬ್ಬೂರು ಪೊಲೀಸರು ಬಸ್ ರಿಲೀಸ್ ಮಾಡುತ್ತಿದ್ದಂತೆಯೇ ಮಾಲೀಕ ಮಹಾಂತೇಶ್ ಶಾಲಾ ಬಸ್ ತೆಗೆದುಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. 

ಬಸ್ ಚಾಲಕ ಹಾಗೂ ಶಾಲಾ ಮಕ್ಕಳಿಗೆ ತೀವ್ರತರವಾಗಿ ಗಾಯಗಳಾಗಿದ್ದರೂ ಸಹ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಪಘಾತಕ್ಕೆ ಕಾರಣವಾದ ಕಾರು ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎನ್ನಾಗಿದ್ದು, ಈ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕುವ ಯತ್ನದಲ್ಲಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. 

ಸಾರಿಗೆ ಇಲಾಖೆ ಆದೇಶವನ್ನು ಹೆಬ್ಬೂರು ಠಾಣಾಧಿಕಾರಿ ಧಿಕ್ಕರಿಸಿರುವುದು ಒಂದು ಕಡೆಯಾದರೆ, ವಶಕ್ಕೆ ಪಡೆದಿದ್ದ ಶಾಲಾ ಬಸ್ ಅನ್ನು ಅದರಲ್ಲೂ ನೋಂದಣಿಯೆರ ಆಗದ ಬಸ್ ಅನ್ನು ಪೊಲೀಸರು ಬಿಡುಗಡೆಗೊಳಿಸಿದ್ದು ಯಾವಕಾರಣಕ್ಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ. ಠಾಣಾಧಿಕಾರಿ ಕರ್ತವ್ಯಲೋಪ ಎಸಗುವ ಮೂಲಕ ಪ್ರಕರಣವನ್ನೇ ದಿಕ್ಕು ತಪ್ಪಿಸಿ ಪ್ರಭಾವಿ ರಾಜಕಾರಣಿಯ ಕಾರ್ಯಕರ್ತರಂತೆ ವರ್ತಿಸಿದರೇ ಎಂಬ ಗುಮಾನಿ ಈಗ ಶುರುವಾಗಿದೆ.

1002104417

ಪ್ರಕರಣದ ಹಿನ್ನೆಲೆ ಏನು?: 

ಹೆಬ್ಬೂರು ತಿಮ್ಮಸಂದ್ರ, ಕರಡಿಗೆರೆ, ಗಂಗಸಂದ್ರ, ದೊಡ್ಡ ಸಾರಂಗಿ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಪಿಕಪ್ ಮಾಡುವುದು ಚಾಲಕನ ಪ್ರತಿದಿನದ ಕೆಲಸ. ಸೆ.20ರ ಬೆಳಿಗ್ಗೆ ವಿದ್ಯಾರ್ಥಿಗಳನ್ನು 07-00 ಗಂಟೆಗೆ ಪಿಕ್ ಅಪ್ ಮಾಡಿಕೊಂಡು 8-45ರ ಹೊತ್ತಿಗೆ ಸ್ಕೂಲ್ ಗೆ ಬಿಡಲಾಗಿತ್ತು. ಮಕ್ಕಳನ್ನು ಬಿಟ್ಟ ನಂತರ ಚಾಲಕ ಗಿರೀಶ್ ಎಸ್ಎಂ‌ಎಲ್ (SML ISUZUMBUZT54XDK0329039 ಆಗಿದ್ದು, ಇಂಜಿನ್ ನಂಬರ್ SLT6DK318847)

 ಕಂಪನಿಯ ಸ್ಕೂಲ್ ಬಸ್ ಅನ್ನು ತಮ್ಮ ಮನೆಯ ಬಳಿಯೇ ಬಿಟ್ಟುಕೊಂಡಿದ್ದರು.  ಶಾಲೆ ಮುಗಿಸಿಕೊಂಡು ವಾಪಸ್ ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಹೊರಟು ಗಂಗಸಂದ್ರ, ಕರಡಿಗೆರೆ, ಬಿದರಕಟ್ಟೆ ಗ್ರಾಮಗಳಿಗೆ ಮಕ್ಕಳನ್ನು ಡ್ರಾಪ್ ಮಾಡಿ ತಿಮ್ಮಸಂದ್ರ ಗ್ರಾಮಕ್ಕೆ ಹೋಗಲು ಬಿದರಕಟ್ಟೆ ಗ್ರಾಮದ ಯೂನಿವರ್ಸಿಟಿ ಮುಂಭಾಗ ಬರುತ್ತಿದ್ದಾಗ ಮಧ್ಯಾಹ್ನ ಸುಮಾರು 02-30 ಗಂಟೆ ಸಮಯದಲ್ಲಿ ಯೂನಿವರ್ಸಿಸಿಟಿ ಒಳಗಡೆಯಿಂದ ಮುಖ್ಯ ರಸ್ತೆಗೆ ಬರಲು ಕಾರಿನ ಚಾಲಕನೊಬ್ಬ ತನ್ನ ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ಬಸ್‌ನ ಹಿಂಭಾಗದ ಬಲಭಾಗದ ಚಕ್ರಕ್ಕೆ ರಭಸವಾಗಿ ಗುದ್ದಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಬಸ್ ಪಕ್ಕಕ್ಕೆ ಉರುಳಿಬಿದ್ದಿದೆ. 

1002104407

ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಬಂದು ಚಾಲಕ ಹಾಗೂ ಬಸ್ ನಲ್ಲಿದ್ದ ತಿಮ್ಮಸಂದ್ರ ಗ್ರಾಮದ 01 ನೇ ಪಿಯುಸಿ ವಿಧ್ಯಾರ್ಥಿಯಾದ ರೋಹಿತ್ 17 ವರ್ಷ ಈತನಿಗೆ ಎಡಗೈಗೆ ತುಂಬಾ ಪೆಟ್ಟಾಗಿ ರಕ್ತಗಾಯವಾಗಿತ್ತು. ಬಸ್ ನಲ್ಲಿದ್ದ ಆಯಾ ಅವರಿಗೆ, ಸ್ಕೂಲ್ ಮಕ್ಕಳಾದ ಮದನ್ ರಾಜ್, ಧನುಷ್, ರೋಹಿಣಿ ಅವರಿಗೆ ಯಾವುದೇ ಪೆಟ್ಟಾಗಿರಲಿಲ್ಲ. ಚಾಲಕನಿಗೆ ಮಾತ್ರ ಬಲಗಾಲು, ಬಲಗೈ ಹಾಗೂ ಎದೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ತಕ್ಷಣ ಸಾರ್ವಜನಿಕರು ವಿದ್ಯಾರ್ಥಿ ರೋಹಿತ್ ನನ್ನು ಬಸ್ ನಿಂದ ಹೊರಗೆ ಎಳೆದುಕೊಂಡು ಉಪಚರಿಸಿ ನಂತರ ಅಂಬುಲೆನ್ ಗೆ ಪೋನ್ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಪಘಾತಕ್ಕೆ ಕಾರಣವಾಗಿದ್ದ ಕಾರ್ ನ ಸಂಖ್ಯೆ KA- 16-M-9340 ಪೋರ್ಡ್ ಎಕೋ ಸ್ಪೋರ್ಟ್ ಕಾರು ಆಗಿದ್ದು, ಅಪಘಾತವಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿತ್ತು. ಶಾಲಾ ಬಸ್ ನ ಹಿಂಭಾಗದ ಬಲಗಡೆಯ ಚಕ್ರ ಹಾಗೂ ಗಾಡಿ ಬಾಡಿ ಜಖಂ ಆಗಿತ್ತು. ನಂತರ ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಬಸ್ ಅನ್ನು ಮೇಲಕ್ಕೆ ಎತ್ತಿ ನಂತರ ಬಸ್ ಹಾಗೂ ಕಾರನ್ನು ಹೆಬ್ಬೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಅಪಘಾತ ಆಗಿರುವ ವಾಹನ ಟೋಯಿಂಗ್ ಮಾಡಿಕೊಂಡು ಹೋಗಬೇಕು. ಆದರೆ ಡ್ರೖವ್ ಮಾಡಿಕೊಂಡು ಹೋಗುತ್ತಿದ್ದರಿಂದ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...