ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಮುಂದಾಗಿದ್ದನ್ನು ಖಂಡಿಸಿ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತುಮಕೂರು ನಗರದಲ್ಲಿ ವಿ.ವಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಬಿ.ಎಚ್. ರಸ್ತೆ, ಟೌನ್ ಹಾಲ್ ಮೂಲಕ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ವಕೀಲ ರಾಕೇಶ್ ಕಿಶೋರ್ ವಿರುದ್ಧ ಘೋಷಣೆ ಕೂಗಿದರು. ಹಲ್ಲೆ ನಡೆಸಲು ಮುಂದಾದ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ನವೀನ್ ಪೂಜಾರಹಳ್ಳಿ ಮಾತನಾಡಿ ಸಿಜೆಐ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಭಾರತದ ನ್ಯಾಯಾಂಗದ ಮೇಲೆ ನಡೆದ ದಾಳಿಯಾಗಿದೆ. ಭಾರತ ಸಂವಿಧಾನದ ಆಶಯಗಳನ್ನು ಗೌರವಿಸದ ಹಾಗೂ ಗಾಂಧಿಯನ್ನು ಕೊಂದ ಮತಾಂಧ ಮನಸ್ಥಿತಿಯೇ ಇಂದು ನ್ಯಾಯಾಧೀಶರ ಮೇಲೆ ಶೂ ಎಸೆಯುವ ಪ್ರಯತ್ನದ ಹಿಂದಿನ ಕೆಲಸ ಮಾಡಿದೆ. ಈ ದುಷ್ಕೃತ್ಯವನ್ನು ತುಮಕೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಖಂಡಿಸುತ್ತೆವೆ. ಶೂ ಎಸದವನನ್ನು ಬೆಂಬಲಿಸಿದ ಭಾಸ್ಕರ್ ರಾವ್ ಅವರ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗವಾಯಿ ಅವರ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.

ತುಮಕೂರು ವಿವಿ ಸಂಶೋಧನಾರ್ಥಿ ಗಂಗಾಧರ್ ಬಿ.ಎಂ ಬಾಣಸಂದ್ರಮಾತನಾಡಿ ದೇಶದ ಅಡಿಪಾಯವೇ ಸಂವಿಧಾನ. ಇಡೀ ಭಾರತ ಸಂವಿಧಾನ ಮುಖೇನವೇ ಜಾಗೃತವಾಗಬೇಕು. ಸನಾತನವಾದ, ಮನುವಾದವು ಎಂದಿಗೂ ಬಾಬಾಸಾಹೇಬರ ಸಂವಿಧಾನವನ್ನು ಒಪ್ಪುವುದಿಲ್ಲ. ಸನಾತನವಾದ ಎಂದಿಗೂ ಸಮಾನತೆಯನ್ನು ಬಯಸುವುದಿಲ್ಲ. ವಕೀಲ ರಾಕೇಶ್ ಕಿಶೋರ್ ಎಂಬ ಸನಾತನವಾದಿಯೊಬ್ಬ ಸಂವಿಧಾನಬದ್ಧವಾದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿರುವ ಸಿಜೆಐ ಬಿ.ಆರ್ ಗವಾಯಿ ಅವರತ್ತ ಶೂ ಎಸೆಯುವ ಪ್ರಯತ್ನ ಗವಾಯಿಯವರಿಗಾದ ಅಪಮಾನವಷ್ಟೇ ಅಲ್ಲ. ಅದು ಈ ದೇಶದ ಕಾನೂನು, ಸಂವಿಧಾನ, ಎಲ್ಲ ಭಾರತೀಯರಿಗೇ ಆದ ಅಪಮಾನ. ಇಂತಹ ವಿಕೃತ ಮನಸ್ಥಿತಿಯುಳ್ಳ ರಾಕೇಶ್ ಕಿಶೋರ್ ಅವರನ್ನು, ಆತನ ನಡೆಯನ್ನು ಬೆಂಬಲಿಸುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು
ಸುಪ್ರೀಂ ಕೋರ್ಟ್‌ನಲ್ಲಿ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಎಂಬುವರು ಶೂ ಎಸೆಯಲು ಮುಂದಾಗಿದ್ದು, ಅವರ ನಡೆ-ನುಡಿಯನ್ನು ತೀವ್ರವಾಗಿ ಖಂಡಿಸಿದರು.
ಸಂಶೋಧನಾ ರ್ಥಿಗಳಾದ ಮಾರುತೇಶ ಕಸಾಪುರ, ರಾಹುಲ್,ಮಂಜುನಾಥ್, ಮಲ್ಲಿಕಾರ್ಜುನ ,ಹರೀಶ್,ಮಾರುತೇಶ್, ನವೀನ್ ಪೊನ್ನ ಸಮುದ್ರ, ಸುರೇಶ್, ರಮೇಶ್,ಅನಿಲ್ ಕುಮಾರ್ ,ನಾಗೇಂದ್ರ,ಧರ್ಮಣ್ಣ, ಧನುಷ್, ನಾಗೇಂದ್ರ ಪ್ರತಿಭಟನೆ ನೇತೃತ್ವ ವಹಿಸಿದ್ದರು.





