ತುಮಕೂರು | ಆರ್ ಎಸ್ಎಸ್ ಪಥಸಂಚಲನದಲ್ಲಿ ದೊಣ್ಣೆ, ಲಾಠಿ ನಿಷೇಧಕ್ಕೆ ಭೀಮ್ ಆರ್ಮಿ ಸಂಘಟನೆ ಒತ್ತಾಯ

Date:

 ಚಿತ್ತಾಪುರದಲ್ಲಿ ನ. 16 ರಂದು ನಡೆಯಲಿರುವ ಆರ್ ಎಸ್ಎಸ್ ಪಥಸಂಚಲನದಲ್ಲಿ ದೊಣ್ಣೆ, ಲಾಠಿ ನಿಷೇಧಕ್ಕೆ ಒತ್ತಾಯಿಸಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ. ವಿ. ಅವರಿಗೆ ಭೀಮ್ ಆರ್ಮಿ ಸಂಘಟನೆಯಿಂದ ಮನವಿ ಪತ್ರ ಸಲ್ಲಿಸಲಾಯಿತು

ಚಿತ್ತಾಪುರದಲ್ಲಿ ಆರ್ ಎಸ್ಎಸ್ ಗೆ ಪಥಸಂಚಲನಕ್ಕೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಪ್ರಜಾಪ್ರಭುತ್ವದ ಹಕ್ಕಿನ ರೀತಿಯಲ್ಲಿ ನಾವು ಈ ಪಥಸಂಚಲನಕ್ಕೆ ವಿರೋಧವಿಲ್ಲ. ಆದರೆ ಹಿಂದಿನ ಘಟನೆಗಳ ಆಧಾರದಲ್ಲಿ ಆರ್ ಎಸ್ಎಸ್ ಪಥಸಂಚಲನಗಳಲ್ಲಿ ದೊಣ್ಣೆ, ಲಾಠಿ, ಕೋಲು, ಬಡಿಗೆ ಮುಂತಾದ ಅಯುಧೋಪಕರಣಗಳನ್ನು ಬಳಸದಂತೆ ಎಚ್ಚರ ವಹಿಸಬೇಕು. ಬಿಎನ್ಎಸ್ಎಸ್ 163 ಪ್ರಕಾರ ಶಸ್ತ್ರವ್ಯತಿರಿಕ್ತ ಅಯುಧಗಳನ್ನು ಹಿಡಿದು ಸಾರ್ವಜನಿಕ ಮೆರವಣಿಗೆ ಮಾಡುವುದು ಕಾನೂನುಬಾಹಿರ. ಇಂತಹ ಅಯುಧೋಪಕರಣಗಳು ಜನರಲ್ಲಿ ಭಯ ಹುಟ್ಟಿಸುವುದರ ಜೊತೆಗೆ ಕಾನೂನು-ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ

 ಚಿತ್ತಾಪುರದಲ್ಲಿ ದಿನಾಂಕ 16-11-2025 ರಂದು ನಡೆಯಲಿರುವ RSS ಪಥಸಂಚಲನದಲ್ಲಿ ಯಾವುದೇ ರೀತಿಯ ದೊಣ್ಣೆ / ಲಾಠಿ / ಕೋಲು / ಬಡಿಗೆ / ಅಯುಧೋಪಕರಣಗಳನ್ನು ಬಳಸಲು ಅನುಮತಿ ನೀಡಬಾರದು ಎಂದು ಸಂಘಟನೆಯ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್ ಮೂರ್ತಿ ಒತ್ತಾಯಿಸಿದ್ದಾರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...