ಸಂವಿಧಾನ ರಕ್ಷಣೆಗೆ ವಿದ್ಯೆಯ ಜೊತೆಗೆ ಶಿಸ್ತು ರೂಢಿಸಿಕೊಳ್ಳಬೇಕು, ಜವಾಬ್ದಾರಿ ನಾಗರೀಕರಾಗಿ ದೇಶಕ್ಕೆ ಅನೇಕ ಕರ್ತವ್ಯಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಇತಿಹಾಸ ಪ್ರಾಧ್ಯಾಪಕ ಪ್ರೋ.ಶಿವರಾಜು ತಿಳಿಸಿದರು
ತುಮಕೂರು ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜೀನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚಣೆಯಲ್ಲಿ ಮಾತನಾಡಿದ ಅವರು, ಸಂವಿಧಾನ ರಚನಾಸಮಿತಿ ಸುಮಾರು 2 ವರ್ಷ, 11 ತಿಂಗಳು ಹಾಗೂ 18 ದಿನಗಳ ನಿರಂತರ ಶ್ರಮ ಮತ್ತು ಅನೇಕ ಚರ್ಚೆ-ಸಂವಾದಗಳ ಫಲಶೃತಿ ನಮ್ಮ ಈ ಸಂವಿಧಾನ. ಇದರಿಂದ ನಮ್ಮೆಲ್ಲರ ಜೀವನ ಉತ್ತಮಗೊಳ್ಳುತ್ತಿದೆ ಎಂದರು.

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಮಧುಸೂಧನ.ಕೆ.ಪಿ ಮಾತನಾಡಿ ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಘನತೆ ಮತ್ತು ಸ್ವಾಭಿಮಾನದ ಬದುಕನ್ನು ಒದಗಿಸಿದೆ, ಎಲ್ಲರ ವ್ಯಕ್ತಿತ್ವವು ಸರ್ವತೋಮುಕ ಬೆಳವಣಿಗೆಗೆ ಹಾಗೂ ಸಮಾಜದ ಮುಮ್ಮುಕ ಚಲನೆಗೆ ಸಂವಿಧಾನ ಕಾರಣವಾಗಿದೆ, ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ ಎಂದು ತಿಳಿದು ಅದನ್ನು ರಕ್ಷಿಸೋಣ ಎಂದರು
ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಜಗದೀಶ್ ಎಂ.ಎಸ್ ಮಾತನಾಡಿ ಹಕ್ಕುಗಳನ್ನಷ್ಟೇ ಅನುಭವಿಸಿ ಕರ್ತವ್ಯಗಳನ್ನು ಕಡೆಗಣಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದ್ವಿತೀಯ ಬಿ.ಎ ವಿದ್ಯಾರ್ಥಿಗಳು ಸಂವಿಧಾನ ರಚನಾ ಸಭೆಯ ಪ್ರಮುಖ ಚರ್ಚೆಗಳಾದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಹಾಗೂ ಅಸ್ಪೃಶ್ಯತೆ ಆಚರಣೆ ನಿಶೇಧ ಗಳ ಕುರಿತು ಕಿರುನಾಟಕ ಪ್ರದರ್ಶನ ಮಾಡಿದರು ಹಾಗೂ ಎಲ್ಲರೂ ಸಂವಿಧಾನ ಪ್ರಸ್ತಾವನೆಯನ್ನು ಪಠಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧೀಕ್ಷಕ ಭಾರತೀ ಸುತ, ಅತಿಥಿ ಉಪನ್ಯಾಸಕರಾದ ಡಾ.ಶ್ರೀನಿವಾಸ್, ಡಾ.ರಾಕೇಶ್, ರಾಮಪ್ರಕಾಶ್ ಉಪಸ್ಥಿತರಿದ್ದರು.





