ತುಮಕೂರು | ಶಬರಿ, ಮಂಥರೆಯಂತಹ ಪಾತ್ರಗಳನ್ನು ಶ್ರೀರಾಮನಷ್ಟೇ ಘನವಾಗಿ ಕುವೆಂಪು ಚಿತ್ರಿಸಿದ್ದಾರೆ; ಪ್ರೊ ನಿತ್ಯಾನಂದ ಬಿ ಶೆಟ್ಟಿ ಅಭಿಮತ

Date:

ಒಂದು ಕ್ಷುಲ್ಲಕ ಎಂದು ಭಾವಿಸಲಾಗಿರುವ ಮಂಥರೆಯ ಪಾತ್ರಕ್ಕೆ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ‘ಗ್ರಾಂಡ್ ಎಂಟ್ರಿ’ಯನ್ನು ಕೊಡುತ್ತಾರೆ. ಅಲ್ಲದೇ, ತನ್ನ ಜೀವ ಕೊಟ್ಟು ರಾಮನ ಜೀವ ಉಳಿಸುವ ಮೂಲಕ ಶಬರಿಯು ರಾಮನಿಗಿಂತಲೂ ಹೇಗೆ ಒಂದು ಹೆಜ್ಜೆ ಮಿಗಿಲು ಎಂಬುದನ್ನು ಚಿತ್ರಿಸುತ್ತಾರೆ. ಇದು ಕುವೆಂಪು ಯಾವ ರೀತಿಯ ಸ್ತ್ರೀ ಪಾತ್ರಗಳನ್ನು ನಮಗೆ ಕಾಣಿಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನ. ಕುವೆಂಪು ಅವರ ತೀಕ್ಷ್ಣವಾದ ವಿಮರ್ಶೆಗೆ ಅಯೋಧ್ಯೆಯೂ ಹೊರತಲ್ಲ ಎಂದು ಪ್ರೊ ನಿತ್ಯಾನಂದ ಬಿ ಶೆಟ್ಟಿ ಅಭಿಪ್ರಾಯಪಟ್ಟರು.


ತುಮಕೂರು ನಗರದ ಜನ ಚಳವಳಿ ಕೇಂದ್ರದಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ವಿಚಾರ ಮಂಟಪ ಬಳಗ ತುಮಕೂರು ಇವರ ಸಹಯೋಗದಲ್ಲಿ ನಡೆದ ‘ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿನ ಸ್ತ್ರೀ ಪಾತ್ರಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಕ್ರಾಫ್ಟ್ಸ್ ಮೆನ್‌ಶಿಫ್ ಎಂಥಹದ್ದು ಎಂಬುದು ನಮಗೆ ರಾಮಾಯಣದರ್ಶನಂ ಮಹಾ ಕಾವ್ಯದ ಪ್ರತಿ ಸಂದರ್ಭದಲ್ಲಿಯೂ ಕಾಣುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ, ಕುಟಿಲತೆಯೇ ಸಾಕಾರಗೊಂಡAತೆ, ಹಿಂದಿಲ್ಲದ ಮುಂದಿಲ್ಲದ ಮಂಥರೆಯನ್ನು ಚಿತ್ರಿಸಿದರೆ, ಕುವೆಂಪು ಮಂಥರೆ ಹೀಗಾಗಲು ಕಾರಣವೇನು? ಎಂಬುದನ್ನು ಕಾಣಿಸುವ ಪ್ರಯತ್ನ ಮಾಡುತ್ತಾರೆ. ಮಂಥರೆ ಮಂತ್ರಿ ಸುಮಂತ್ರನೂ ಪರಿಹರಿಸಲಾರದ ರಾಮನ ಆಸೆಯನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವಷ್ಟು ಜಾಣೆ. ಆದರೆ, ಇವಳ ಹೃದಯದಲ್ಲಿನ ಮೈತ್ರಿ ನುಚ್ಚುನೂರಾಗುವಂತೆ ‘ಮುಟ್ಟದಿರು ಕಂದನಿಗೆ ಅಮಂಗಳA’ ಎಂದು ಕೌಸಲ್ಯೆ ಅವಳನ್ನು ಅವಮಾನಿಸುತ್ತಾಳೆ. ಹೀಗೆ ಮಂಥರೆಯಲ್ಲಿ ಅರಮನೆಯೇ ವಿಷವನ್ನು ಭಿತ್ತಿದ ಸಂದರ್ಭವನ್ನು ಕುವೆಂಪು ಬಹು ದೀರ್ಘವಾಗಿ ಚಿತ್ರಿಸಿದ್ದಾರೆ ಎಂದರು.


ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ಧಾನ್ಯಮಾಲಿನಿ, ತ್ರಿಜಟೆ, ಸೀತೆ, ಅನಲೆ, ಕೈಕೇಯಿ ಮುಂತಾದ ಪ್ರಬುದ್ಧ ಸ್ತ್ರೀ ಪಾತ್ರಗಳನ್ನು ಕುವೆಂಪು ಚಿತ್ರಿಸಿರುವ ಬಗೆ ಅತ್ಯಧ್ಬುತವಾದದ್ದು. ಕೈಕೆಯಿ ಯುದ್ಧ ಕಲೆ ತಿಳಿದಿದ್ದವಳು. ಆಡಳಿತದಲ್ಲೂ ದಶರಥನಿಗೆ ಸಲಹೆ ಕೊಡುವವಳು. ಆದರೆ, ಇಡೀ ಅರಮೆನೆಗೆ ತಿಳಿದಿದ್ದ ರಾಮನ ಪಟ್ಟಾಭಿಷೇಕದ ವಿಷಯ ಕೈಕೆಯಿಗೆ ತಿಳಿಯುವುದು ಒಬ್ಬ ದಾಸಿಯಿಂದ. ಇದನ್ನ ಗಮನಿಸಿದರೆ ಅರಮನೆಯ ಅಧಿಕಾರ, ಷಡ್ಯಂತ್ರಗಳು ಎಂಥಹವು ಎಂಬುವುಗಳ ನಮಗೆ ತಿಳಿಯುತ್ತವೆ. ಈ ಹಿನ್ನೆಲೆಯಲ್ಲಿಯೂ ನಾವು ಕೈಕೆಯಿಯ ಪಾತ್ರವನ್ನು ಗಮನಿಸಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...


ಕಾರ್ಯಕ್ರಮದಲ್ಲಿ, ವಿಚಾರ ಮಂಟಪದ ಅಧ್ಯಕ್ಷ ವರುಣ್ ರಾಜ್, ಕಾರ್ಯಕ್ರಮದ ಸಂಚಾಲಕಿ ಆಶಾರಾಣಿ ಬಗ್ಗನಡು, ಡಾ. ಗೀತಾ ವಸಂತ, ಸುಗುಣಾ ದೇವಿ, ಸುರೈನಾ, ಆಶಾ ಸಚಿನ್, ಸಿ.ಎ. ಇಂದಿರಾ, ಲಲಿತಾ, ಅನುಪಮ, ಡಾ. ವೀಣಾ, ಪಾರ್ವತಮ್ಮ ರಾಜ್‌ಕುಮಾರ್, ಗಂಗಲಕ್ಷ್ಮೀ, ಚೇತನಾ, ಲೀಲಾ, ಅಕ್ಷತಾ, ಉಷಾ, ಗೀತಾನಾಗೇಶ್, ರಾಣಿಚಂದ್ರಶೇಖರ್, ಪರಿಮಳ, ಸತೀಶ್, ವಿದ್ಯಾ ಅರಮನೆ, ಶಶಿವಸಂತ್, ಮಾಮ್ತಾಜ್, ರಂಗಮಣಿ ಕಾಮೇಶ್, ಮರಿಯಂಬೀ, ಲತಾ ವಡ್ಡಗೆರೆ, ನಿರ್ಮಲಾ, ಸ್ಲಂಜನಾಃದೋಲನದ ಅರುಣ್, ತಿಲಕ್‌ಕುಮಾರ್ ಬ್ಯಾತ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...