ತುಮಕೂರು | ಉದ್ಯೋಗ ಖಾತ್ರಿಯಲ್ಲಿ ಗಾಂಧಿ ಹೆಸರು ತೆಗೆದ ಮಾತ್ರಕ್ಕೆ ಗಾಂಧಿ ಕೊನೆಗೊಳ್ಳುವುದಿಲ್ಲ : ಡಾ.ವೂಡೇ ಪಿ. ಕೃಷ್ಣ

Date:

ಭಾರೀ ವಿರೋಧದ ನಡುವೆಯೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ವಿಬಿ – ಜಿ ರಾಮ್‌ ಜಿ ಹೆಸರನ್ನು ಇಟ್ಟ ಮಾತ್ರಕ್ಕೆ ಗಾಂಧಿ ವಿಚಾರಧಾರೆಗಳನ್ನು ಕೀಳಲು ಸಾಧ್ಯವಿಲ್ಲ ಎಂದು ರಾಜ್ಯ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ.ಕೃಷ್ಣ  ಬೇಸರವ್ಯಕ್ತಪಡಿಸಿದರು

ತುಮಕೂರು ತಾಲೂಕಿನ ದೊಡ್ಡಹೊಸೂರು ಗ್ರಾಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಮಹಾತ್ಮಗಾಂಧಿ ಬೇಸಾಯ ಆಶ್ರಮದ ಸಂಯುಕ್ತಾಶ್ರಮದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಪುತ್ಥಳಿ ಅನಾವರಣ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಗಾಂಧಿ ಕೇವಲ ಹೆಸರಲ್ಲ, ಜಗತ್ತಿನ ಆದರ್ಶ, ಇದು ಎಲ್ಲಿಯವರೆಗೆ ಜೀವಂತವಾಗಿರುತ್ತೋ ಅಲ್ಲಿಯವರೆಗೆ ಶಾಂತಿ ಮತ್ತು ಅಹಿಂಸೆ ಜೀವಂತವಾಗಿರುತ್ತೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಭಾರಿಯ ಶೃಂಗಸಭೆಯ ನಂತರ ೨೦ ದೇಶಗಳ ಪಧಾನಿಗಳು ಬಯಸಿದ್ದು, ಗಾಂಧಿ ಸಮಾಧಿಗೆ ನಮನ ಸಲ್ಲಿಸುವ ಪ್ರಸ್ತಾಪವನ್ನು ಈ ಮೂಲಕ ಗಾಂಧೀಜಿಯ ಮಹತ್ವವೆಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಗಾಂಧಿಯನ್ನು ನಮ್ಮ ನಿರಂತರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.‌ ಪಾಟೀಲ್‌ ಅವರು ಮಾತನಾಡುತ್ತಾ, ಗಾಂಧಿ ಸ್ವರಾಜ್ಯದ ಕಲ್ಪನೆಯನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನಗಳು ನಡೆದಿವೆ, ಅದು ಯಶಸ್ವಿ ಸಾಕಾರಗೊಳಿಸುವ ಕಡೆ ಜನಸಾಮಾನ್ಯರಾದಿಯಾಗಿ ಶ್ರಮಿಸಿದರೆ ಈ ಗ್ರಾಮ ಭಾರತ ಸಶಕ್ತವಾಗಲು ಸಾಧ್ಯವಿದೆ. ಗಾಂಧಿಯ ಆದರ್ಶ ಕಠಿಣ, ಆದರೆ ಆ ದಾರಿ ಅನಿವಾರ್ಯ. ನಾವು ಸಂವೇದನೆಗಳನ್ನ ಬೆಳೆಸಿಕೊಳ್ಳಬೇಕಿದೆ. ಸಮಾಜದ ಅಸಮಾನತೆ, ಕ್ರೌರ್ಯ, ಅಸಹಿಷ್ಣುತೆ, ಅಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಸುತ್ತಲಿನ ತಪ್ಪುಗಳನ್ನು ತಿದ್ದುವ ಮತ್ತು ಸುಧಾರಿಸುವ ಕೆಲಸಗಳು ಆಗಬೇಕು ಎಂದರು.

1002535716

ಕೃಷಿಯನ್ನ ಲಾಭದಾಯಕ ಕಸುಬನ್ನಾಗಿಸಲು ರಾಸಾಯನಿಕ ಕೃಷಿಯನ್ನು ಪೂರ್ಣಬಿಡಬೇಕಿದೆ. ಇಂತಹ ಬದಲಾವಣೆ ತರುವ ಕೆಲಸಗಳು ನಿರಂತರವಾಗಿ ಆಗುತ್ತಿರಬೇಕು ಎಂದರು. ತಮಗೆ ಬೇಕಾದ ಸರ್ಕಾರಗಳನ್ನು ರೂಪಿಸುವ ಸಾಮರ್ಥ್ಯ ಜನಸಾಮಾನ್ಯರಿಗೆ ಬರಬೇಕು ಆಗ ಮಾತ್ರ ಗಾಂಧಿ ಕಂಡ ಕನಸು ನನಸಾಗಲಿದೆ ಎಂದರು.

ಗಾಂಧಿ ಕಂಡ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿರಾಜ್ಯ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್‌ ಮಾತನಾಡಿ  ಈ ಸಂದರ್ಭದಲ್ಲಿ ಇಂದು ಪೋಷಕರಾದಿಯಾಗಿ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವ ಕಡೆ ಹೆಚ್ಚು ಗಮನಕೊಡಬೇಕಿದೆ. ಕೇವಲ ಅಂಕಪಟ್ಟಿಯ ಸುತ್ತ ತಿರುಗುವ ಮನಸ್ಥಿತಿಯನ್ನು ಬಿಡಬೇಕು. ತಮ್ಮ ಮಕ್ಕಳಿಗೆ ಶ್ರಮದ ಮೌಲ್ಯವನ್ನ ಅರ್ಥಮಾಡಿಸಬೇಕಿದೆ. ಮಾಹಿತಿಯುಗದಲ್ಲಿ ಅದನ್ನ ತಂತ್ರಜ್ಞಾನವನ್ನ ಹೇಗೆ ಉಪಯೋಗಿಸಬೇಕು ಎಂಬುದಕ್ಕೂ ಮಾರ್ಗದರ್ಶನಬೇಕಿದೆ. ಕಳೆದ 35 ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ನನಗೆ ಒಬ್ಬ ಪೋಷಕರು ತನ್ನ ಮಕ್ಕಳು ಶಾಲೆಯಲ್ಲಿ ಬಿಟ್ಟುಹೋದ ಬೆಲೆಬಾಳುವ ವಸ್ತುಗಳಕುರಿತು ವಿಚಾರಿಸಲು ಪೋನ್‌ ಕರೆಗಳನ್ನ ಮಾಡಿಲ್ಲ, ಆದರ್ಶಗ್ರಾಮ ಕಲ್ಪನೆ ಅಸಾಧ್ಯ ಅಂತ ಹೇಳಿದ ಜನಕ್ಕೆ ಈಗ ಮನವರಿಕೆಯಾಗಿದೆ ಗಾಂಧಿ ಶಿಕ್ಷಣ ಇಂದಿನ ಅಗತ್ಯವೆಂದು.  ವಿದ್ಯೆ ಕಲಿತನಂತರ ಅದು ಸಮಾಜಮುಖಿಯಾಗಿ ಹೊರಹೊಮ್ಮಬೇಕಿದೆ.  ಕೇವಲ ಹಣಗಳಿಕೆಯ ದೃಷ್ಟಿಕೋನದ ಶಿಕ್ಷಣದಿಂದ ಏನೂ ಉಪಯೋಗವಿಲ್ಲವೆಂದರು. ಜಗತ್ತಿನ ದೊಡ್ಡ ಜವಾಬ್ದಾರಿ ಪ್ರಾಥಮಿಕ ಶಿಕ್ಷಣವನ್ನು ಸರಿಮಾಡುವುದರ ಬಗ್ಗೆ ಇರಬೇಕೆಂದರು. ಇದರ ಜೊತೆಗೆ ಸ್ಥಳೀಯವಾದ ಕೌಶಲ್ಯಗಳ ಕಡೆ ಗಮನಕೊಡಬೇಕು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನ್ಯೂಸ್‌ ಲೆಟರ್‌ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

 ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ  ಎಂ.ಸಿ ನರೇಂದ್ರ ಅವರು ಗಾಂಧಿ ಪುತ್ಥಳಿ ಅನಾವರಣಗೊಳಿಸಲಾಯಿತು.  ಈ ವೇಳೆ ಕೃಷಿ ತಜ್ಙ ಡಾ. ಮಂಜುನಾಥ್‌, ಫ್ರೊ.ಶಿವರಾಜ್‌, ಸಿ.ಯತಿರಾಜು ಸೇರಿದಂತೆ ಸಹಜ ಬೇಸಾಯ ಶಾಲೆಯ ವಿದ್ಯಾರ್ಥಿಗಳು, ರೈತರು ಸೇರಿದಂತೆ ಮತ್ತಿತರ ಗಣ್ಯರು  ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...