ತುಮಕೂರು | ವಸತಿ ಸಮುಚ್ಛಯದಲ್ಲಿ ಅಮಾನಿಕೆರೆ ಕೋಡಿಹಳ್ಳ ನಿವಾಸಿಗಳಿಗೆ ಆದ್ಯತೆ ನೀಡಿ: ನರಸಿಂಹಮೂರ್ತಿ

Date:

200 ಮನೆಗಳಿರುವ ವಸತಿ ಸಮುಚ್ಛಯಗಳಲ್ಲಿ ಅಮಾನಿಕೆರೆ ಕೋಡಿಹಳ್ಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸ್ಲಂ ಜನಾದೋಲನದ ಸಂಚಾಲಕ ಎ.ನರಸಿಂಹಮೂರ್ತಿ ಒತ್ತಾಯಿಸಿದರು.

ತುಮಕೂರು ನಗರದ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆದ ಅಮಾನಿಕೆರೆ ಕೋಡಿಹಳ್ಳ ಶಾಖೆ ವರ್ಷಾಚರಣೆ ಮತ್ತು ಪುನೀತ್‌ರಾಜ್‌ಕುಮಾರ್‌ರವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ನಗರದ ಕೋಡಿಹಳ್ಳದಲ್ಲಿ ಸ್ಲಂ ಶಾಖೆ ತೆರೆದು ಒಂದು ವರ್ಷ ಕಳೆದಿದೆ. ಸಂಘಟಿತರಾಗಿ ಬದುಕನ್ನು ಕಟ್ಟಿಕೊಳ್ಳುವ ನಿರಂತರ ಹೋರಾಟದ ಭಾಗವಾಗಿ ಜಿಲ್ಲಾಡಳಿತ ಮತ್ತು ನಗರ ಪಾಲಿಕೆ ಆಶ್ರಯ ಸಮಿತಿ ಗಮನ ಸೆಳೆಯುವಂತ ಕೆಲಸವನ್ನು ಇಲ್ಲಿನ 30 ಕುಟುಂಬಗಳು ಮಾಡಿರುವುದು ಆದರ್ಶಪ್ರಾಯವಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಮ್ಮ ಮುಂದಿನ ಹೋರಾಟ ಮತ್ತು ಜವಾಬ್ದಾರಿ ಹೊನ್ನೇನಹಳ್ಳಿ ಡಾನ್‌ ಬೋಸ್ಕೋ ಶಾಲೆಯ ಆಸುಪಾಸಿನ ಸರ್ವೇ ನಂಬರ್‌ನಲ್ಲಿ ಈಗಾಗಲೇ ಸರ್ಕಾರದಿಂದ 200 ವಸತಿ ಸಮುಚ್ಛಯಗಳ (ಮನೆಗಳ) ನಿರ್ಮಾಣವಾಗುತ್ತಿವೆ. ಈ ವಸತಿ ಸಮುಚ್ಛಯಗಳಲ್ಲಿ ಕೋಡಿಹಳ್ಳದ ಮಡಿವಾಳ(ಅಗಸ) ಮತ್ತು ಇತರೆ ವೃತ್ತಿನಿರತ 30 ಬಡಕುಟುಂಬಗಳನ್ನು ಪುನರ್ವಸತಿಗೊಳಿಸಲು ಮೊದಲ ಆದ್ಯತೆ ನೀಡಬೇಕು” ಎಂದರು.

“ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಈ ಬಗ್ಗೆ ಹಲವು ಬಾರಿ ನಗರ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಸ್ಪಂದಿಸಿದ್ದಾರೆ. ಆದ್ಯತೆ ನೀಡದೆ ಹೋದರೆ ಹೋರಾಟ ಕೈಗೆತ್ತಿಕೊಳ್ಳಲು ಸಿದ್ಧರಾಗಬೇಕಿದೆ” ಎಂದರು.

“ಪುನೀತ್ ರಾಜಕುಮಾರ್ ಅವರ ಕೆಲಸಗಳು ಮಾದರಿಯ ಕಾರ್ಯಗಳು. ಅವರು ದೈಹಿಕವಾಗಿ ಇಲ್ಲವಾದರು ಮಾನಸಿಕವಾಗಿ ನಮ್ಮ ನಡುವೆ ಇದ್ದಾರೆ” ಎಂದರು.

ಸ್ಲಂ ಸಂಘಟನೆಯ ಕಾರ್ಯದರ್ಶಿ ಅರುಣ್‌ ಮಾತನಾಡಿ, “ಸ್ಲಂಗಳಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಾಸ್ತವ್ಯ ಮಾಡಿ ಸ್ಲಂ ಜನರ ಸಮಸ್ಯೆ ಆಲಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ: ಸಚಿವ ಡಾ ಎಚ್.ಸಿ ಮಹದೇವಪ್ಪ

ಕಾರ್ಯಕ್ರಮದಲ್ಲಿ ಸ್ಲಂ ಸಮಿತಿಯ ಉಪಾಧ್ಯಕ್ಷ ಶಂಕ್ರಯ್ಯ, ಸ್ಥಳೀಯ ಮುಖಂಡರುಗಳಾದ ಮೋಹನ್‌ಕುಮಾರ್, ಕೋಡಿಹಳ್ಳ ಸ್ಲಂ ಶಾಖೆಯ ಪದಾಧಿಕಾರಿಗಳಾದ ಗಣೇಶ್, ಗೋವಿಂದರಾಜ್, ಮಂಜುನಾಥ್, ವೆಂಕಟೇಶ್, ಅಶ್ವತ್, ಜಯಮ್ಮ, ಲಕ್ಷ್ಮೀದೇವಮ್ಮ, ಕವಿತಾ, ಕೆಂಪಮ್ಮ, ಹೊನ್ನಮ್ಮ, ದೊಡ್ಡತಾಯಮ್ಮ, ಪಾಪಣಿ, ಮಂಜುಳ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...