ತುಮಕೂರು | ಸರ್ಕಾರ ಸ್ಲಂ ಜನರಿಗೆ ಭೂ ಒಡೆತನ ನೀಡುತ್ತಿದೆ:‌ ಡಾ. ಜಿ ಪರಮೇಶ್ವರ್

Date:

ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಬೇಕು. ಹಾಗಾಗಿ ‌ಕಾಂಗ್ರೆಸ್ ಸರ್ಕಾರ ಸ್ಲಂ ಜನರಿಗೆ ಭೂ ಒಡೆತನ ನೀಡುತ್ತಿದೆ‌ ಎಂದು ತುಮಕೂರು ಜಿಲ್ಲಾ ಉಸ್ತುವಾರು ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದರು.

ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ʼಸ್ಲಂ ಜನರಿಗೆ ಇ-ಸ್ವತ್ತು ವಿತರಣೆ ಹಾಗೂ ವಿವಿಧ ಸ್ಲಂಗಳ ಜನರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

“ತುಮಕೂರಿನ ಘೋಷಿತ 32 ಸ್ಲಂಗಳಲ್ಲಿ ಹಕ್ಕುಪತ್ರಗಳಿಲ್ಲದ 3,643 ಕುಟುಂಬಗಳ ಸಮೀಕ್ಷೆ ಮಾಡಿ ಅರ್ಹತೆಯಿರುವ 1,493 ಕುಟುಂಬಗಳಲ್ಲಿ ನೈಜತೆಯಿರುವ 120 ಕುಟುಂಬಗಳಿಗೆ ಹಕ್ಕುಪತ್ರ ನೋಂದಣಿ ಕರಾರಿನ ಜತೆಗೆ ನಗರ ಪಾಲಿಕೆಯಿಂದ 53 ಇ-ಸ್ವತ್ತು ನೀಡಲಾಗಿದೆ. ಇದಕ್ಕೆ ಅಧಿಕೃತವಾಗಿ ಜಿಲ್ಲಾಡಳಿತದಿಂದ ಚಾಲನೆ ನೀಡಲಾಗಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಾಗರಿಕ ಸಮಾಜದಲ್ಲಿ ಸ್ಲಂಗಳಿರುವುದು ನಮ್ಮ ಅಸಮಾನತೆಯ ಸೂಚಕವಾಗಿದೆ. ಬಹುದಿನಗಳ ಜನರ ಕನಸನ್ನು ಈಡೇರಿಸಿದ ತೃಪ್ತಿ ಸಿಕ್ಕಿದೆ. ಈ ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಿ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕು. ಕೊಳಚೆ ಪ್ರದೇಶಗಳಲ್ಲೇ ಕಟ್ಟಕಡೆಯದಾಗಿ ಜೀವಿಸುವ ಪೌರಕಾರ್ಮಿಕರ ಬದುಕೂ ಕೂಡ ಬದಲಾಗಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಮನುಷ್ಯನ ವಾಸಕ್ಕೆ ಯೋಗ್ಯವಲ್ಲದ ವಾತಾವರಣದಲ್ಲಿ ಸ್ಲಂಗಳ ಚಿಕ್ಕ ಮನೆಗಳಲ್ಲಿ 8 ರಿಂದ 10 ಜನ ಬದುಕುತ್ತಿರುವುದರಿಂದ ಆ ಪ್ರಮಾಣಕ್ಕೆ ಸರ್ಕಾರ ಸೌಲಭ್ಯಗಳನ್ನು ಕೊಡಬೇಕಿದೆ. ಗ್ರೇಟರ್ ತುಮಕೂರು ಮಾಡಲು ನಾವು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಅಡಿ ತುಮಕೂರು ನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ನಗರಗಳ ಮೇಲೆ ಜನರು ಅವಲಂಬಿತರಾಗಿ ಹೆಚ್ಚೆಚ್ಚು ವಲಸೆ ಬರುತ್ತಿರುವುದರಿಂದ ನಗರದಲ್ಲಿ ಶೇ.40ರಷ್ಟು ಜನರು ವಾಸ ಮಾಡುತ್ತಿದ್ದು, ಇದರಲ್ಲಿ ಕನಿಷ್ಠ 20ರಷ್ಟು ಜನಸಂಖ್ಯೆ ಸ್ಲಂ ಪ್ರದೇಶಗಳಲ್ಲಿದೆ. ಸ್ಲಂ ಚಿತ್ರಣವನ್ನು ಬದಲಾಯಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಈಗಾಗಲೇ 2023ರ ಪ್ರಣಾಳಿಕೆಯಲ್ಲಿ ಹಲವಾರು ಘೋಷಣೆಗಳನ್ನು ಮಾಡಿದೆ. ಸ್ಲಂ ಜನರಿಗೆ ವಸತಿ ಮತ್ತು ಭೂ ಒಡೆತನ ನೀಡಿ ಸಂವಿಧಾನದ ಘನತೆಯ ಬದುಕನ್ನು ಇಲ್ಲಿರುವ ಜನರಿಗೆ ಖಾತ್ರಿ ಮಾಡಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ” ಎಂದರು.

“ಇಂದು ಬಡವರ ಮುಖದಲ್ಲಿ ನಗು ಕಾಣುತ್ತಿರುವುದು ಅವರಿಗೆ ಒಂದು ಶಾಶ್ವತ ಸೂರು ಮತ್ತು ಭೂಮಿ ತಮ್ಮದಾಗಿರುವ ಖುಷಿ ಇದೆ. ಇದೇ ಸಂವಿಧಾನದಿಂದ ಬದಲಾವಣೆ ಬರಲು ಸಾಧ್ಯವಾಗಿರುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಈಡೇರಿದಂತಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಭಾರತದಲ್ಲಿ ಅಲ್ಪಸಂಖ್ಯಾತರ ʼಸಾಂವಿಧಾನಿಕ ಹಕ್ಕುಗಳು – ದಾಳಿಗಳುʼ ಕುರಿತ ವಿಚಾರ ಸಂಕಿರಣ

ವೇದಿಕೆಯಲ್ಲಿ ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು, ಬಿಎಂಟಿಸಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್, ನಗರಪಾಲಿಕೆ ಆಯುಕ್ತ ಯೋಗಾನಂದ್, ಸ್ಲಂ ಬೋರ್ಡ್ ಎಇಇ ಬಾನುಪ್ರತಾಪ್ ಸಿಂಹ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಸ್ಲಂ ಸಮಿತಿಯ ಪದಾಧಿಕಾರಿ ಅನುಪಮಾ, ಅರುಣ್, ಶಂಕ್ರಯ್ಯ, ತಿರುಮಲಯ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...