ತುಮಕೂರು ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಮಹಾತ್ಮಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಒತ್ತಾಯಿಸಿ ಹಾಗೂ ನಿರುದ್ಯೋಗ ಭತ್ಯೆಗ ಸಿಫಾರಸ್ಸು ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತುಮಕೂರುಜಿಲ್ಲೆಯ ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ತಾಲೂಕುಗಳ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಏಪ್ರಿಲ್ 2025 ರಿಂದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ರಂಗಸಮುದ್ರ ಕೋಟಿಗುಡ್ಡ ಸಿ ಈ ಪುರ, ಕೊಡಮಡಗು ಪಳವಳ್ಳಿ ನಾಗಲಮಡಿಕೆ ವೆಂಕಟಪುರ ವಿರುಪಸಮುವು ಟಿ ಹಳ್ಳಿ, ವದನಕಲು ಮಧುಗಿರಿ ತಾಲ್ಲೂಕಿನ ಐಡಿ ಹಳ್ಳಿ, ಸಿಂಗನಹಳ್ಳಿ ಬ್ರಹ್ಮಸಮುದ್ರ, ಚಿಕ್ಕಮಳೂರು, ಗೊಂದಿಹಳ್ಳಿ, ಪುರವರ,ಚಿಕ್ಕದಳವಾಡಿ, ಮುದ್ದೇನಹಳ್ಳಿ, ಕೊಡಿಗೇನಹಳ್ಳಿ, ಕಡೆಗತ್ತೂರು, ಬಿಜುವರೆ, ಹೊಸಕರೆ, ನರ್ಲಕರ, ರಂಟವಾಲ, ಚಿನ್ನೆಹಳ್ಳಿ, ಮರವೇಕೆರೆ, ರೆಡ್ಡಿಪಲ್ಲಿ, ಪಂಚಾಯಿತಿಗಳಲ್ಲಿ ನರೇಗಾದಲ್ಲಿ ಉದ್ಯೋಗ ನೀಡುವಂತೆ ಅರ್ಜಿಗಳನ್ನು ಸಲ್ಲಿಸಿದ್ದು ಕಳೆದ 4 ತಿಂಗಳಿಂದಲು ಕೆಲಸ ನೀಡುತ್ತಿಲ್ಲ.

ಬೆರಳಣಿಕೆಯ ಗುಂಪುಗಳಿಗೆ 1 ವಾರ ಕೆಲಸಕೊಡೋದು 2 ವಾರ ನಿಲ್ಲಿಸುವುದು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ವಿವರಿಸಿದರು ಕೊಂಡವಾಡಿ ಮತ್ತು ಮರವೆಕೆರೆ ಪಂಚಾಯಿತಿ ಪಿಡಿಒ ನರೇಗಾ ಕೆಲಸ ಕೇಳಿದ ಮಹಿಳೆಯರ ಜೊತೆ ಸರಿಯಾಗಿ ನಡೆದುಕೊಳ್ಳದೆ ನರೇಗಾ ಕೆಲಸ ನೀಡಲು ನಿರಾಕರಿಸಿದ ಪಿಡಿಒ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮನಹಳ್ಳಿ, ಬೆಳಗುಲಿ, ಬರಗೂರು, ದಸೂಡಿ ತಹೊಯ್ಸಳ ಕಟ್ಟೆ-ಮ, ಗಾಣದಾಳ ಸೇರಿದಂತೆ ತುಮಕೂರು ಜಿಲ್ಲೆಯ 43 ಪಂಚಾಯಿತಿಗಳಲ್ಲಿ ನರೇಗಾ ಕೆಲಸ ನೀಡದೆ ಪಿಡಿಒಗಳು ಅಡ್ಡಿಮಿಡುತ್ತಿದ್ದಾರೆ ಆವರಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ನಿರುದ್ಯೋಗ ಭತ್ಯೆಗೆ ಸಿಪಾರಸ್ಸು ಮಾಡಿ ನರೇಗಾ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮಲ್ಲೇಶ್, ಮಂಜುಳಾ ಸೇರಿದಂತೆ ಹಲವರು ಇದ್ದರು





