ತಮ್ಮ ಜೀವನದುದ್ದಕ್ಕೂ ವ್ಯವಸ್ಥೆಯೊಂದಿಗೆ ಎಂದಿಗೂ ರಾಜಿಯಾಗದೇ, ಶೋಷಿತರ ಸಮಾನತೆಯ ಹಕ್ಕುಗಳಿಗೆ ಅತ್ಯಂತ ಪ್ರಾಮಾಣಿಕ ಧ್ವನಿಯಾದ ನಾಡಿನ ಸಾಕ್ಷಿಪ್ರಜ್ಞೆ ಪ್ರೊ. ಕೆ ದೊರೈರಾಜ್ ಅವರ ಆತ್ಮಕಥೆ ʼನಮ್ಮ ಹಟ್ಟಿʼ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಡಿಸೆಂಬರ್ 20ರ ಬೆಳಿಗ್ಗೆ 10-30ಕ್ಕೆ ತುಮಕೂರು ನಗರದ ಅಮಾನಿಕೆರೆ ಸಮೀಪವಿರುವ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ನಾಡಿನ ಚಿಂತಕರು, ಪ್ರಜ್ಞಾವಂತರು, ಸಾಹಿತಿಗಳು, ಯುವಜನರು, ದಲಿತ-ರೈತ-ಕಾರ್ಮಿಕ-ಮಹಿಳಾ ಹೋರಾಟಗಾರರು ಹಾಗೂ ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.
ಪ್ರತಿಪದ ಪ್ರಕಾಶನದಿಂದ ಜನಪರ ಚಿಂತಕ ಕೆ ದೊರೈರಾಜ್ ಅವರ ‘ನಮ್ಮ ಹಟ್ಟಿ’ ಒಂದು ಹಟ್ಟಿಯ ಆತ್ಮಕಥಾನಕ ಕೃತಿ ಬಿಡುಗಡೆ ಸಮಾರಂಭ ನಡೆಯುತ್ತಿದ್ದು, ಹಿರಿಯ ಚೇತನವು ಸವೆಸಿದ ಸಾರ್ಥಕ ಜೀವನದ ಅನುಭವ ಕಥನವು ಅನಾವರಣಗೊಳ್ಳುವ ಸುಂದರ ಕ್ಷಣಗಳಿಗೆ ಸಾಕ್ಷಿಯಾಗೋಣ ಬನ್ನಿ ಎಂದು ಡಿ ಟಿ ವೆಂಕಟೇಶ್ ಅವರು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಕಥೆಗಾರ ಮತ್ತು ವಿಮರ್ಶಕ ಡಾ. ಜಿ ವಿ ಆನಂದಮೂರ್ತಿ ಒಂದು ಹಟ್ಟಿಯ ಆತ್ಮಕಥನಕವನ್ನು ನಿರೂಪಣೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಸಮತೋಲನಾ ಆಸ್ತಿ ಪ್ರಕರಣ; ಸಹಾಯಕ ಲೆಕ್ಕಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ದಲಿತ ಸೇನೆ ಆಗ್ರಹ
ಚಿಕ್ಕಮಗಳೂರಿನ ಹಿರಿಯ ಹೋರಾಟಗಾರ ಹಾಗೂ ಚಿಂತಕ ಎಚ್ ಎಂ ರುದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೃತಿ ಕುರಿತು ಡಾ. ಎಸ್ ನಟರಾಜ ಬೂದಾಳ್ ಮಾತನಾಡುವರು.
ವೇದಿಕೆಯಲ್ಲಿ ಚಿಂತಕ ಕೆ ದೊರೈರಾಜ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಸ್ ಮೂರ್ತಿ, ಲೇಖಕಿ ಬಾ ಹ ರಮಾಕುಮಾರಿ, ಹಿರಿಯ ಹೋರಾಟಗಾರ ಸಯ್ಯೀದ್ ಮುಜೀಬ್, ರೇಷ್ಮೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ವೈ ಕೆ ಬಾಲಕೃಷ್ಣಪ್ಪ, ಲೇಖಕ ಡಾ.ಜಿ ವಿ ಆನಂದಮೂರ್ತಿ ಭಾಗವಹಿಸುವರು.





