ತುಮಕೂರು | ಮಳೆಯಿಂದ ಜೀವ ಹಾನಿ : 5 ಲಕ್ಷ ರೂ ಪರಿಹಾರ ವಿತರಣೆ : ಜಿಲ್ಲಾಧಿಕಾರಿ

Date:

ಮಳೆಯಿಂದ ಮರ ಬಿದ್ದು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಒಂದು ಮಾನವ ಜೀವ ಹಾನಿಯಾಗಿದ್ದು, ಮೃತರ ವಾರಸುದಾರರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 2024ರ ಜನವರಿ 1 ರಿಂದ ಈವರೆಗೂ ವಾಸ್ತವವಾಗಿ 926 ಮಿ.ಮೀ. ಮಳೆಯಾಗಿದೆ. ಸಿಡಿಲಿನಿಂದ ಶಿರಾ ಹಾಗೂ ತುರುವೇಕೆರೆ ತಾಲ್ಲೂಕಿನ 2 ಹಸು/ಎಮ್ಮೆ ಹಾಗೂ ಪಾವಗಡ ತಾಲ್ಲೂಕಿನ 6 ಕುರಿ ಮತ್ತು ತುರುವೇಕೆರೆ ತಾಲ್ಲೂಕಿನ 17(13 ಮೇಕೆ + 4 ಕುರಿ) ಸೇರಿ ಒಟ್ಟು 25 ಜಾನುವಾರುಗಳ ಪ್ರಾಣ ಹಾನಿಯಾಗಿದೆ. ಈ ಪೈಕಿ ಜಾನುವಾರು ಮಾಲೀಕರಿಗೆ 37,500 ರೂ.(ತಲಾ ಒಂದು ಜಾನುವಾರಿಗೆ)ಗಳ ಪರಿಹಾರ ಹಾಗೂ 4000 ರೂ.ಗಳ (ತಲಾ ಒಂದು ಕುರಿ/ಮೇಕೆ) ಪರಿಹಾರವನ್ನು ವಿತರಿಸಲಾಗಿದೆ.

ಮಳೆಯಿಂದ ಜಿಲ್ಲೆಯ ಒಟ್ಟು 59.52 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಬೆಳೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಲಾಗಿದೆ. ಅಲ್ಲದೆ 133 ಮನೆ ಹಾನಿ, 3 ಸಂಪೂರ್ಣ, ತೀವ್ರ ಮನೆ ಹಾನಿ ಹಾಗೂ 130 ಭಾಗಶಃ ಮನೆಗಳು ಹಾನಿಯಾಗಿವೆ. ಮಳೆಯಿಂದ ಹಾನಿಗೊಳಗಾದ 91 ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಬೆಳೆ ಹಾನಿ, ಜನ-ಜಾನುವಾರುಗಳ ಪ್ರಾಣ ಹಾನಿ, ಮನೆ ಕಳೆದುಕೊಂಡವರು ನೆರವಿಗಾಗಿ ಜಿಲ್ಲಾ ಮಟ್ಟದ 24*7 ಸಹಾಯವಾಣಿ: 0816-2213400, 0816-155304, 7304975519ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...