ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಬೆಂಬಲಿಗರು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ವಿ ಸೋಮಣ್ಣ ವಿರುದ್ಧ ‘ಗೋ ಬ್ಯಾಕ್ ಸೋಮಣ್ಣ’ ಎಂದು ಘೋಷಣೆ ಕೂಗಿ ಕೆ ಬಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತುಮಕೂರು ಹಾಲಿ ಸಂಸದ ಜಿ ಎಸ್ ಬಸವರಾಜು ಮತ್ತು ಮಾಜಿ ಸಚಿವ ವಿ ಸೋಮಣ್ಣ ವಿರುದ್ಧ ಧಿಕ್ಕಾರ ಕೂಗಿ ಟೈರ್‌ಗೆ ಬೆಂಕಿ ಹಚ್ಚಿ ನೂರಾರು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ‘ಸೋಮಣ್ಣ ಗೋ ಬ್ಯಾಕ್’ ಎಂದು ಘೋಷಣೆ ಮೊಳಗಿಸಿ ಹಾಲಿ ಸಂಸದ ಜಿ ಎಸ್ ಬಸವರಾಜು ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
“ಹಾಲಿ ಬಿಜೆಪಿ ಸಂಸದ ಜಿ ಎಸ್ ಬಸವರಾಜು ವೈಯಕ್ತಿಕ ಹಿತಾಸಕ್ತಿಗೆ ಪಕ್ಷವನ್ನು ಬಲಿ ಕೊಡಲು ಮುಂದಾಗಿದ್ದಾರೆ. ಹೊರಗಿನಿಂದ ಬಂದು ತುಮಕೂರಿನಲ್ಲಿ ಗೆದ್ದ ನಿದರ್ಶನವಿಲ್ಲ. ಹಾಗಾಗಿ ಹೊರಗಿನವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟ. ಸಂಸದ ಬಸವರಾಜು ಅವರ ಒತ್ತಡಕ್ಕೆ ಮಣಿದು ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ” ಎಂದು ಬಿಜೆಪಿ ಕಾರ್ಯಕರ್ತರು ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಿಂದಗಿ ತಾಲೂಕಿನ ಎರಡು ಗ್ರಾಮಗಳು ಆಲಮೆಲ ತಾಲೂಕಿಗೆ ಸೇರ್ಪಡೆಯಾಗಿರುವುದು ಅವೈಜ್ಞಾನಿಕ; ಅನಿರ್ದಿಷ್ಟಾವಧಿ ಧರಣಿ
ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ಪೊಲೀಸರು ತಡೆದಿದ್ದಾರೆ.





